ತುಮಕೂರು : ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆಯಲ್ಲಿ ವಾಟರ್ ಫಾರ್ ವಾಯ್ಸಲೆಸ್ ಎಂಬ ಸಂಸ್ಥೆ ವತಿಯಿಂದ ಪಕ್ಷಿಗಳಿಗೆ ದಾಹ ತಣಿಸಲು ಸಿಮೆಂಟ್ ತೊಟ್ಟಿಗಳನ್ನು ವಿತರಿಸಿಲಾಯಿತು.
ಕಾರ್ಯಕ್ರಮದಲ್ಲಿ ವಾಟರ್ ಫಾರ್ ವಾಯ್ಸಲೆಸ್ನ ಕೊವರ್ಕರ್ ಆದ ಮಂಜುನಾಥ್ ಮಾತನಾಡಿ, ೨೦೧೫ರಲ್ಲಿ ಆರಂಭವಾದ ಈ ಯೋಜನೆಯು ಇದುವರೆಗೂ ೭೦ ಸಾವಿರ ಸಿಮೆಂಟ್ ತೊಟ್ಟಿಗಳು ಭಾರತದಾದ್ಯಂತ ತಲುಪಿಸಿದೆ. ಸಂಸ್ಥೆಯಿAದ ಸಿಮೆಂಟ್ನಲ್ಲಿ ಪುಟ್ಟದಾದ ತೊಟ್ಟಿಗಳನ್ನು ತಯಾರಿಸಲಾಗುತ್ತದೆ. ಈ ತೊಟ್ಟಿಗಳು ಬಿಸಿಲಿನ ತಾಪಮಾನದಿಂದ ನೀರು ತಣ್ಣಗಿರುವುಂತೆ ಮಾಡುತ್ತದೆ.
ಪ್ರಾಣಿ ಪಕ್ಷಿಗಳು ದಣಿವಾರಿಸಿ ಕೊಳ್ಳುವುದಕ್ಕೋಸ್ಕರ ಈ ಯೋಜನೆಯನ್ನು ತರಲಾಗಿದ್ದು, ಮನುಷ್ಯ ತನ್ನ ಹಸಿವನ್ನು ಹೇಳಿಕೊಳ್ಳುತ್ತಾನೆ. ಆದರೆ, ಮೂಕ ಪ್ರಾಣಿಗಳಿಗೆ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ಮನೆ ಮುಂದೆ ಒಂದೊAದು ಸಿಮೆಂಟ್ ತೊಟ್ಟಿಗಳನ್ನು ಇಡಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ.ಎಚ್.ಎನ್.ವೆಂಕಟೇಶ್ ಮಾತನಾಡಿ, ಹುಟ್ಟಿದ ಮೇಲೆ ಉಪಕಾರ ಮಾಡಲೇಬೇಕು ಆ ದೃಷ್ಟಿಯಿಂದ ಆದರೂ ನಾವು ಮನೆಗಳ ಹತ್ತಿರ ಒಂದು ಸಿಮೆಂಟ್ ತೊಟ್ಟಿಗಳನ್ನು ಇಟ್ಟು ನೀರನ್ನು ಇಟ್ಟರೆ ಪ್ರಾಣಿ ಪಕ್ಷಿಗಳು ಅದನ್ನು ಕುಡಿದು ದಣಿವಾರಿಸಿಕೊಳ್ಳುತ್ತವೆ. ಇದಕ್ಕೆ ಎಲ್ಲರೂ ಕೈಜೋಡಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎನ್.ಪ್ರಭಾಕರ್, ಡಾ.ಮಂಜುನಾಥ್, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಪಕ್ಷಿಗಳಿಗೆ ದಾಹ ತಣಿಸಲು ಸಿಮೆಂಟ್ ತೊಟ್ಟಿಗಳ ವಿತರಣೆ
Leave a comment
Leave a comment