ತುಮಕೂರು:ಪರಿಶಿಷ್ಟ ಜಾತಿಯಲ್ಲಿನ ಜನಸಂಖ್ಯಾವಾರು ಮೀಸಲಾತಿಗಾಗಿ ಒತ್ತಾಯಿಸಿ ನಡೆಯುತ್ತಿರುವ ಮೂರು ದಶಕಗಳ ಹೋರಾಟದ ಅಂತಿಮ ರೂಪವಾಗಿ ನವೆಂಬರ್ ೧೧ ರಂದು ಹೈದ್ರಾಬಾದ್ನ ಸಿಕಂದ್ರಾಬಾದ್ ಪೆರೇಡ್ ಗ್ರೌಂಡ್ನಲ್ಲಿ ಹಲೋ ಮಾದಿಗ,ಚಲೋ ಹೈದ್ರಾಬಾದ್,ಮಾದಿಗರ ವಿಶ್ವರೂಪ ಮಹಾಸಭಾ ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಹಾಗೂ ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕಳೆದ ಮೂವತ್ತು ವರ್ಷಗಳಿಂದ ಒಳಮೀಸಲಾತಿಗಾಗಿ ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು,ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮುಂದೆ ಮಾದಿಗರ ಶಕ್ತಿ ಪ್ರದರ್ಶನ ಇದಾಗಿದೆ ಎಂದರು.
ಸ್ವಾತAತ್ರ ಬಂದಾಗಿನಿAದಲೂ ಕರ್ನಾಟಕದಲ್ಲಿ ಹಾಗೆಯೇ ದೇಶದಲ್ಲಿ ಮಾದಿಗ ಸಮುದಾಯ ಪರಿಶಿಷ್ಟ ಜಾತಿಯಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.ಆದರೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪಡೆಯಲು ಸಾಧ್ಯವಾಗಿಲ್ಲ.ಪರಿಶಿಷ್ಟಜಾತಿ ಪಟ್ಟಿಯಲ್ಲಿರುವ ೧೦೧ ಪಂಗಡಗಳಲ್ಲಿಯೇ ಪ್ರಭಲ ಪಂಗಡಗಳು ಇತರೆ ಸಮುದಾಯುಗಳನ್ನು ನ್ಯಾಯಬದ್ದವಾಗಿ ದೊರೆಯ ಬೇಕಾದ ಮೀಸಲಾತಿಯನ್ನು ಕಬಳಿಸಿ,ಅಸ್ಪೃಷ್ಯರನ್ನು ಮತ್ತಷ್ಟು ತುಳಿತಕ್ಕೆ ಒಳಗಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಮಾದಿಗರ ಒಳಮೀಸಲಾತಿಗಾಗಿ ಕರ್ನಾಟಕದಲ್ಲಿ ೧೯೯೬ರಿಂದಲೂ ಹೋರಾಟ ನಡೆದಿದೆ.ಈ ಹಿಂದಿನ ಸರಕಾರ ಒಳಮೀಸಲಾತಿ ವರ್ಗೀಕರಣದ ಭಾಗವಾಗಿರುವ ನ್ಯಾ.ಎ.ಜೆ.ಸದಾಶಿವ ವರದಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ.ಆದರೆ ಇದುವರೆಗೂ ಕೇಂದ್ರದಲ್ಲಿ ಈ ವಿಚಾರ ಪ್ರಾಸ್ತಾಪವಾಗಿಲ್ಲ.ನಮ್ಮಂತೆಯೇ ನೆರೆಯ ತಮಿಳುನಾಡು,ಆಂದ್ರಪ್ರದೇಶ,ಮಹಾರಾಷ್ಟç, ಕೇರಳ ರಾಜ್ಯಗಳಲ್ಲಿಯೂ ಕೇಂದ್ರಕ್ಕೆ ವರದಿ ಕಳುಹಿಸಲಾಗಿದೆ.ಹಾಗಾಗಿ ದಕ್ಷಿಣ ಭಾರತದ ಎಲ್ಲಾ ಮಾದಿಗರು ಸುಮಾರು ೩೦ ಲಕ್ಷ ಜನ ನವೆಂಬರ್ ೧೧ ರಂದು ಹೈದ್ರಾಬಾದ್ ನಲ್ಲಿ ಸೇರಿ ನಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದಾಗಿ ದೇವರಾಜು ತಿಳಿಸಿದರು.
ಮಾದಿಗ ದಂಡೋರ ರಾಜ್ಯ ವಕ್ತಾರ ರಾಘವೇಂದ್ರ ಸ್ವಾಮಿ ಮಾತನಾಡಿ,ತುಮಕೂರು ಜಿಲ್ಲೆಯಲ್ಲಿ ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ.೧೯೯೬ರಲ್ಲಿ ಮಂದಕೃಷ್ಣ ಮಾದಿಗ ಅವರು ತುಮಕೂರು ಜಿಲ್ಲೆಗೆ ಬಂದ ನಂತರ ಮಾದಿಗರ ಒಳಮೀಸಲಾತಿ ಹೋರಾಟ ಹೆಚ್ಚಿನ ಕಾವು ಪಡೆದುಕೊಂಡಿದ್ದು, ರಸ್ತೆ ತಡೆ, ರೈಲು ತಡೆ, ಅರೆಬೆತ್ತಲೆ ಮೆರವಣಿಗೆ ಸೇರಿದಂತೆ ಹಲವಾರು ರೀತಿಯ ಹೋರಾಟಗಳನ್ನು ಮಾಡಲಾಗಿದೆ.ನವೆಂಬರ್ ೧೧ ರಂದು ಹೈದ್ರಾಬಾದ್ನಲ್ಲಿ ನಡೆಯಲಿರುವ ಮಾದಿಗರ ವಿಶ್ವರೂಪ ಸಮಾವೇಶಕ್ಕೆ ಜಿಲ್ಲೆಯಿಂದ ಸುಮಾರು ೨ ಸಾವಿರಕ್ಕೂ ಹೆಚ್ಚು ಜನರು ತೆರಳುವ ನಿರೀಕ್ಷೆಯಿದೆ.ಒಳಮೀಸಲಾತಿ ಜಾರಿಯಾದರೆ ಸಮುದಾಯದ ಯುವಜನರು ಸ್ವರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅವಕಾಶಗಳು ಪಡೆಯುಬಹುದು.ಅಲ್ಲದೆ ಐಎಎಸ್, ಕೆ.ಎ.ಎಸ್ಗಳಲ್ಲಿ ಹೆಚ್ಚಿನ ಅವಕಾಶ ದೊರೆಯಲಿದೆ.ಈ ಹಿನ್ನೆಲೆಯಲ್ಲಿ ಮಾದಿಗ ಜನಾಂಗದ ಯುವಕರು, ಮುಖಂಡರು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಪರಿಶಿಷ್ಟ ಜಾತಿಯಲ್ಲಿನ ಜನಸಂಖ್ಯಾವಾರು ಮೀಸಲಾತಿ
Leave a comment
Leave a comment