ತುಮಕೂರು:ರೈತರ ನಿರಂತರ ಹೋರಾಟಕ್ಕೆ ಮಣಿದು ಅಪಾಯಕಾರಿ ಮಸೂದೆಗಳನ್ನು ಒಕ್ಕೂಟ ಸರಕಾರ ವಾಪಸ್ ಪಡೆದರೂ, ಅಷ್ಟೇ ಅಪಾಯಕಾರಿ ಕಾರ್ಪೋರೇಟ್ ಪರ ಕೃಷಿ ಕಾರ್ಯಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಸಂಯುಕ್ತ ಹೋರಾಟ ತುಮಕೂರ ಸಂಚಾಲಕ ಸಿ.ಯತಿರಾಜು ಆರೋಪಿಸಿದ್ದಾರೆ.

ಗಾಂಧಿ ಜಯಂತಿ ಅಂಗವಾಗಿ, ಗಾಂಧಿ ಸಹಜ ಬೇಸಾಯ ಶಾಲೆ ದೊಡ್ಡ ಹೊಸೂರು ವತಿಯಿಂದ ಬೇರ್ಸ್ ಮತ್ತು ಮಾನ್ಸೆಂಟೋ ಕಂಪನಿಗಳ ಜೊತೆಗೆ ಒಕ್ಕೂಟ ಸರಕಾರ ಮಾಡಿಕೊಂಡಿರುವ ಒಪ್ಪಂದವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿಯವರಗೆ ಹಮ್ಮಿಕೊಂಡ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಕೃಷಿ ಸಂರಕ್ಷಿಸುವ, ವಾಯುಗುಣ ವೈಪರಿತ್ಯಗಳ ಪರಿಣಾಮಗಳನ್ನು ಮೆಟ್ಟಿ ನಿಲ್ಲಬಲ್ಲ, ಸುಸ್ಥಿರ ಕೃಷಿ ಕಾರ್ಯ ಯೋಜನೆಗಳನ್ನು
ಜಾರಿಗೊಳಿಸಲು ಒಕ್ಕೂಟ ಸರಕಾರ ವಿಫಲವಾಗಿವೆ.ಹೀಗಾಗಿ ಕೃಷಿ ಅಸ್ತಿತ್ವ ಗಂಡಾಂತರದಲ್ಲಿ ಇದೆ ಎಂದರು.