ಶ್ರೀ ಸಿದ್ದಾರ್ಥ ಇಂಜಿನಿಯರಿAಗ್ ಕಾಲೇಜಿನಿಂದ ಮುಂಭಾಗದಿAದ ಆರಂಭಗೊAಡ ರ್ಯಾಲಿಗೆ, ‘ಸಿದ್ಧಾರ್ಥ ಅಡ್ವಾನ್ಸ್÷್ಡ ಹಾರ್ಟ್ಸೆಂಟರ್ನ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಡಾ. ಪ್ರಭಾಕರ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನುಷ್ಯ ಆರೋಗ್ಯವಂತರಾಗಿರಬೇಕಾದರೆ, ದೇಹದ ಎಲ್ಲ ಭಾಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಅದರಲ್ಲು ನಿರಂತರವಾಗಿ ಕೆಲಸ ಮಾಡುವ ಹೃದಯದ ಪಾತ್ರ ಅತಿ ಮಹತ್ವದ್ದಾಗಿದೆ. ಆ ಭಾಗದ ಜೋಪಾನ ಮಾಡಿಕೊಳ್ಳಬೇಕು ಮತ್ತು ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ನಿರಂತರವಾಗಿ ವ್ಯಾಯಾಮ ಹಾಗೂ ಕ್ರಿಯಾತ್ಮಕ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸಿದ್ಧಾರ್ಥ ಅಡ್ವಾನ್ಸ್÷್ಡ ಹಾರ್ಟ್ಸೆಂಟರ್ ಮುಖ್ಯಸ್ಥರಾದ ಡಾ.ತಮೀಮ್ ಅಹಮ್ಮದ್ ಮಾತಾನಾಡಿ, ನಿರಂತರವಾಗಿ ದೈಹಿಕ ಕಸರತ್ತು ಮಾಡಿ, ಹೃದಯದ ಕೂಗಿಗೆ ಸದಾ ಸ್ಪಂದಿಸಿ. ನಿರ್ಲಕ್ಷö್ಯಮಾಡದೆ ಭಯಬಿಟ್ಟು ವೈದ್ಯರೊಂದಿಗೆ ಸಮಾಲೋಚಿಸುವುದನ್ನು ರೂಢಿ ಮಾಡಿಕೊಳ್ಳಿ, ಆಗ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ ಎಂದರು.
ಇಂಜಿನಿಯರಿAಗ್ ಕಾಲೇಜಿನಿಂದ ಆರಂಭಗೊAಡ ಸೈಕ್ಲೋಥಾನ್ ರ್ಯಾಲಿ ಸಿದ್ದಗಂಗಾ ಸ್ವಾಮೀಜಿ ಸರ್ಕಲ್ ಮೂಲಕ ಮಹಾತ್ಮ ಗಾಂಧೀಜಿ ಸೇಡಿಂ ತಲುಪಿ, ಅಲ್ಲಿಂದ ತುಮಕೂರು ಗಾಜಿನಮನೆ ಮಾರ್ಗವಾಗಿ ಮಂಡಿ ಪೇಟೆ, ಗುಬ್ಬಿ ಗೇಟ್ ಮೂಲಕ ಅಗಳಕೋಟೆಯಲ್ಲಿರುವ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಸಮಾಪ್ತಿಗೊಂಡಿತು.