ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ಮತ್ತು ಬಾಬುಜಿರವರು ಒಂದು ಜಾತಿಗೆ ಸೀಮಿತವಾಗದಿರಲಿ
ಪೋಷಕರು ಏನೇ ಕಷ್ಟ ಬರಲಿ ಮಕ್ಕಳನ್ನು ಶಿಕ್ಷಣದಿಂದ ವಂಚಿಸದಿರಿ.
-ವಿ.ಟಿ ತಿಪ್ಪೇಸ್ವಾಮಿ
ನಗರದ ಪಿ.ಕೆ.ಎಸ್ ಕಾಲೋನಿಯ ಯುವಕರ ಸಂಘದಿAದ ಡಾ|| ಬಿ.ಆರ್ ಅಂಬೇಡ್ಕರ್ ರವರ ೧೩೨ನೇ ಹಾಗೂ ಡಾ|| ಬಾಬು ಜಗಜೀವನ್ರಾಂ ರವರ ೧೧೬ನೇ ಜಯಂತಿ ಅಂಗವಾಗಿ ಸಂವಿಧಾನÀ ಪೀಠಿಕೆಯನ್ನು ಓದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಹೇಮಾದ್ರಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ವಿ.ಟಿ ತಿಪ್ಪೇಸ್ವಾಮಿ ಮಾತನಾಡಿ ಪ್ರಪ್ರಥಮವಾಗಿ ನಗರದಲ್ಲಿ ಯುವಜನರು ಒಗ್ಗೂಡಿ ಸಂವಿಧಾನ ಶಿಲ್ಪಿ ಮಹಾನ್ ಮಾನವತಾವಾದಿ ಜಯಂತಿಯನ್ನು ಹಮ್ಮಿಕೊಂಡಿರುವುದು ಬಹಳ ಸಂತೋಷ ತಂದಿದೆ, ಯಾಕಂದ್ರೆ ಸ್ವತಂತ್ರ ಬಂದು ೭೫ ವರ್ಷಗಳನ್ನು ಪೂರೈಸಿದ್ದೇವೆ ಬಡವರು, ಶೋಷಿತರು, ಎಲ್ಲಾ ಜನಾಂಗದವರು ಸರ್ವಜನಾಂಗದ ಶಾಂತಿಯ ತೋಟದಲ್ಲಿ ಬಹುಸಂಸ್ಕೃತಿಯನ್ನು ಗಟ್ಟಿಗೊಳಿಸಿ ಮುಂದೆ ಸಾಗುತ್ತಿದ್ದೇವೆ, ಅಂದರೆ ನಮ್ಮ ದೇಶದ ಸಂವಿಧಾನ ಕೊಟ್ಟಿರುವ ಸಮಾನತೆ, ಸ್ವಾತಂತ್ರö್ಯ, ಬ್ರಾತೃತ್ವದ ಹಕ್ಕುಗಳು ಕಾರಣ, ಅಂಬೇಡ್ಕರ್ ರವರು ವಿದ್ಯಾಭ್ಯಾಸಕ್ಕಾಗಿ ಪಟ್ಟ ಶ್ರಮ ಮತ್ತು ಅವರು ಅನುಭವಿಸಿದ ಸಂದಿಗ್ದ ಪರಿಸ್ಥಿತಿ ಈಗಿಲ್ಲ ದೇಶದ ಪ್ರತಿಯೋಬ್ಬ ವ್ಯಕ್ತಿಯು ಶಿಕ್ಷಣವಂತನಾಗಬೇಕು, ಉತ್ತಮ ಪ್ರಜೆಯಾಗಬೇಕು ಎಂಬ ಆಶಯದೊಂದಿಗೆ ಡಾ.ಬಿ,ಆರ್ ಅಂಬೇಡ್ಕರ್ ಸಾಗಿದವರು ಇಂತಹ ದಾರ್ಶನಿಕರ ಆಶಯಗಳನ್ನು ಯುವಜನರು ಅಳವಡಿಸಿಕೊಂಡು ಒಂದು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ ಮನುಷ್ಯ ಇರುವವರೆಗೆ ನಾಲ್ಕು ಜನರಿಗೆ ಸಹಾಯ ಮಾಡಿ ಇಲ್ಲವಾದರೆ ಕೈಬಿಟ್ಟುಬಿಡಿ, ಡಾ|| ಬಿ.ಆರ್ ಅಂಬೇಡ್ಕರ್ ಮತ್ತು ಬಾಬುಜಿರವರು ಒಂದು ಜಾತಿಗೆ ಸೀಮಿತರಲ್ಲ ದೇಶದ ಎಲ್ಲಾ ಸಮುದಾಯಗಳಿಗಾಗಿ ಶ್ರಮಿಸಿದರವರು, ಪೋಷಕರು ಏನೆ ಕಷ್ಟ ಬಂದರು ಮಕ್ಕಳನ್ನು ಶಿಕ್ಷಣದಿಂದ ವಂಚಿಸದಿರಿ ಎಂದರು
ಈ ಸಂದರ್ಭದಲ್ಲಿ ತುಮಕೂರು ಸ್ಲಂ ಸಮಿತಿಯ ಅರುಣ್ ಮತ್ತು ಪುಟ್ಟರಾಜು, ಪಿ.ಕೆ.ಎಸ್ ಕಾಲೋನಿ ಯುವ ಮುಖಂಡರಾದ ದಯಾನಂದ್, ವಿ.ಟಿ ಕೃಷ್ಣಮೂರ್ತಿ, ಹಾಗೂ ಯುವಕರ ಸಂಘದ ಕೃಷ್ಣಕುಮಾರ್, ಲೋಕೇಶ್, ಶ್ರೀನಿವಾಸ್, ರವಿ, ಕೀರ್ತಿ, ಕಿರಣ್, ಕೌಶಿಕ್, ಗುರಪ್ರಸಾದ್, ಹರ್ಷ, ಆನಂದ್, ಕಿಶೋರ್, ನವೀನ್,ಗಿರೀಶ್ ಮುಂತಾದವರು ಪಾಲ್ಗೊಂಡಿದ್ದರು