ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಆಕ್ರಮ: ಎಂಎಲ್ಸಿ ವಿನಯ್
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾಕ್ಟರ್ ರಂಗನಾಥ್ ರವರು ಗಿಫ್ಟ್ ಕಾರ್ಡನ್ನು ನೀಡಿರುವ ಬಗೆ ಅದರಲ್ಲಿ ಮತದಾನ ಮಾಡುವ ಮತದಾರರಿಗೆ ವಿತರಣೆ ಮಾಡಿದ್ದು ಅದರಲ್ಲಿ ಮುಖಬೆಲೆ ೩೦೦೦, ೫೦೦೦ ರೂಗಳ ಗಿಫ್ಟ್ ಕಾರ್ಡುಗಳನ್ನು ನೀಡಿರುತ್ತಾರೆ ಅದರಲ್ಲಿ ಕೊಡುಗೆಗಳನ್ನು ಪಡೆಯಲು ಆಮಿಷನ ರೂಪದಲ್ಲಿ ನೀಡಿರುತ್ತಾರೆ ಮತ್ತು ಆ ಕಾರ್ಡಿನಲ್ಲಿ ಬಾರ್ ಕೋಡ್ ಗಳನ್ನು ನೀಡಿರುವುದು ಗಿಫ್ಟ್ ಕಾರ್ಡು ಹಣ ಬರುವ ರೀತಿ ಎಂದು ತಿಳಿಸಲು ಜನ ಮತದಾರರಿಗೆ ಮೋಸ ಮಾಡಿರುವುದು ತಿಳಿದು ಬಂದಿದೆ ದುರುದ್ದೇಶ ಪೂರ್ವಕವಾಗಿ ಆಮಿಷ ಒಡ್ಡಿರುವ ರೀತಿಯಲ್ಲಿ ಮತದಾರರಿಗೆ ಮೋಸ ಮಾಡಿರುವ ರೀತಿ ಕಂಡುಬAದಿರುವುದರಿAದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾಕ್ಟರ್ ರಂಗನಾಥ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಮತ್ತು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯರಾದ ವಿನಯ್ ಅವರು ತಿಳಿಸಿದರು.
ಅವರಿಂದು ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಈ ರೀತಿಯ ಅಕ್ರಮಗಳನ್ನು ಮಾಡಿರುವ ಕಾಂಗ್ರೆಸ್ ಪಕ್ಷವು ಜನರಿಗೆ ಮೋಸ ಮಾಡಿರುವುದು ಕಣ್ಣೆಅದರಲ್ಲಿ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಈ ರೀತಿಯಾಗಿದೆ. ಪ್ರಜಾಪ್ರಭುತ್ವದ ಅಡಿಯಲ್ಲಿ ಚುನಾವಣಾ ಆಯೋಗದ ಕಣ್ಗಾವಲಿನಲ್ಲಿ ಚುನಾವಣೆ ನಡೆದಿರುವುದು ನಮ್ಮ ಅಭ್ಯರ್ಥಿ ಕೃಷ್ಣಕುಮಾರ್ ರವರು ಸೋತಿರುವುದು ಕಾನೂನಿನ ವಿರುದ್ಧವಾಗಿ ಅಕ್ರಮವನ್ನು ಮಾಡಿರುವ ಕಾಂಗ್ರೆಸ್ ಪಕ್ಷ ಗೆದ್ದಿರುವುದು ಕುಕ್ಕರ್ಗಳನ್ನು ನೀಡಿರುವುದು ಹಾಗೂ ಮೂರು ಲೋಡ್ ಕುಕ್ಕರ್ಗಳನ್ನು ಇತರೆ ಗಿಫ್ಟ್ಗಳನ್ನು ಪೋಲಿಸ್ ಮೂಲಕ ಪೊಲೀಸರು ದಾಖಲೆ ಮಾಡಿದರು. ಇದರ ಬಗ್ಗೆ ಕಾನೂನಿನ ಹಾಗೆ ಹೋರಾಟವನ್ನು ಮಾಡುತ್ತೇವೆ ಎಂದು ತಿಳಿಸಿದರು.
ಹಿಂದೆ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜಾತ್ಯಾತೀತ ಜನತಾದಳದ ಅಭ್ಯರ್ಥಿ ನಕಲಿ ಬಾಂಡ್ ಅನ್ನು ನೀಡಿ ಇದರ ಬಗ್ಗೆ ನ್ಯಾಯಾಲಯದಲ್ಲಿ ನೀಡಿದ ತೀರ್ಪಿನ ಅನ್ವಯ ಎಂದು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸುರೇಶ್ ಗೌಡರು ಜಯಗಳಿಸಿದರು ಎಂದು ತಿಳಿಸಿದರು. ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವಂತಹ ಈ ರೀತಿಯ ಕಾರ್ಯವನ್ನು ಕಾಂಗ್ರೆಸ್ ಪಕ್ಷವು ಈ ರೀತಿಯಾಗಿ ಮಾಡಿರುವುದು ತುಂಬಾ ನೋವಿನ ಸಂಗತಿ ಕಾಂಗ್ರೆಸ್ ನೈತಿಕವಾದ ಮತವನ್ನು ಕೇಳಲು ಆಗುವುದಿಲ್ಲ, ಸುಳ್ಳಿನ ಆಶ್ವಾಸನೆಗಳ ಚುನಾವಣೆಯನ್ನು ಮಾಡುವುದು ಕಾಂಗ್ರೆಸ್ ಪಕ್ಷದ ದಾಖಲೆಯಾಗಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಬಿಜೆಪಿ ಕುಣಿಗಲ್ ಮಂಡಲದ ಅಧ್ಯಕ್ಷರಾದ ಬಲರಾಮ್ ರವರು ಹಾಗೂ ಕುಣಿಗಲ್ ವಿಧಾನ ಸಭೆಯ ಅಭ್ಯರ್ಥಿ ಡಿ.ಕೃಷ್ಣಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿ ಹಾಗೂ ಚಿದಾನಂದ ಯುವ ಮೋರ್ಚಾ ಅಧ್ಯಕ್ಷ ಯಶಸ್ ಅವರು ಇದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಆಕ್ರಮ ಎಂಎಲ್ಸಿ ವಿನಯ್
Leave a comment
Leave a comment