ತುಮಕೂರು : ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ವೀರ ವನಿತೆ ಓಬವ್ವ, ಕನಕದಾಸರ ಜಯಂತಿ ಹಾಗೂ ಕುವೆಂಪು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಇಂದು ಜಿಲ್ಲಾ ಕಛೇರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡಿ ತನ್ನ ರಾಜ್ಯದ ಮೇಲೆ ಕುತಂತ್ರದಿಂದ ದಾಳಿಗೆರಗಿದ ಶತ್ರು ಸೈನ್ಯವನ್ನು ಏಕಾಂಗಿಯಾಗಿ ಎದುರಿಸಿದ ವೀರವನಿತೆ ಓಬವ್ವ ಈಕೆ ಕನ್ನಡ ನೆಲದ ಶೌರ್ಯ, ಸಾಹಸದ ಪ್ರತೀಕವಾಗಿ ಇಂದಿಗೂ ಸಹ ಅವರು ಪ್ರಾತಃ ಸ್ಮರಣೀಯರು ಜೊತೆಗೆ ಅನ್ನದ ಋಣ, ಜನ್ಮ ಕೊಟ್ಟ ಮಣ್ಣಿನ ಋಣ ತೀರಿಸಲೆಂದೇ ಜೀವದ ಕೊನೆಯುಸಿರಿರುವವರೆಗೆ ಒನಕೆ ಹಿಡಿದು ವೀರಾವೇಷದಿಂದ ಹೋರಾಡಿದ ಓಬವ್ವನವರ ಸಾಹಸಗಾಥೆ ಇನ್ನಷ್ಟು ಶತಮಾನಗಳವರೆಗೆ ಸ್ಪೂರ್ತಿಯ ಸೆಲೆಯಾಗಿರಲಿದೆ ಅಲ್ಲದೇ ಒಬ್ಬಂಟಿ ಹೆಣ್ಣಾಗಿ ಹೋರಾಟ ಮಾಡಿ ದಂಡೆತ್ತಿ ಬಂದಂತಹ ಸೈನಿಕರನ್ನು ಸೆದೆ ಬಡಿದು ವೀರ ಮರಣ ಅಪ್ಪಿದ ಮಹಾಮಾತೆ ಅವರು ಎಂದು ತಿಳಿಸಿದರು, ತಮ್ಮ ಅಪಾರವಾದ ಭಕ್ತಿ, ಶ್ರದ್ಧೆಯಿಂದಲೇ ಸಾಕ್ಷಾತ್ ಭಗವಂತನನ್ನೇ ಮೆಚ್ಚಿಸಿದ ಏಕೈಕ ವ್ಯಕ್ತಿ ಕನಕದಾಸರು, ಅವರು ಎಲ್ಲಾ ಜನರಲ್ಲಿ ಅಸಮಾನತೆಯನ್ನು ಹೋಗಲಾಡಿಸಿ, ಸಮಾನತೆಯ ದೃಷ್ಠಿಕೋನವನ್ನು ಈಡೀ ವಿಶ್ವಕ್ಕೆ ತೋರಿಸಿದಂತಹ ಸಂತರಲ್ಲೇ ಶ್ರೇಷ್ಠರು ಕನಕದಾಸರು ಅವರ ಜಯಂತಿಯನ್ನು ನಾವು ಆಚರಿಸುತ್ತಿದ್ದೇವೆ, ಅದಕ್ಕೇ ನಾವು ಧನ್ಯರು ಎಂದು ತಿಳಿಸಿದರು.ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿಯ ಯುವ ಘಟಕದ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಅಟ್ರಾಸಿಟಿ ಕಮಿಟಿ ಸದಸ್ಯರಾದ ಗೋವಿಂದರಾಜು ಮಾತನಾಡಿ ಮಲೆನಾಡಿನ ಗಿರಿಕಾನನದ ನಡುವೆ ಹುಟ್ಟಿಬೆಳೆದ ಕುವೆಂಪುರವರು ತಮ್ಮ ಕಾವ್ಯಗಳಲ್ಲಿ ಪ್ರಕೃತಿಯ ಸೊಬಗನ್ನು ಹೇಗೆ ಸುಂದರವಾಗಿ, ಸೊಗಸಾಗಿ ಬಣ್ಣಿಸಿದ್ದರೋ, ಜಾತಿ ಅಸಮಾನತೆಯನ್ನು ಕೂಡ ಅಷ್ಟೇ ಕಠೋರವಾಗಿ, ನಿರ್ಭೀತರಾಗಿ ವಿರೋಧಿಸಿದ್ದಾರೆ. ಕುವೆಂಪುರವರಲ್ಲಿ ಬರಹಗಳನ್ನು ಮೀರಿದ ಒಂದು ಜೀವಪರವಾದ ದನಿಯಿತ್ತು, ಆ ದನಿಗೆ ಕಿವಿಗೊಡೋಣ ಜಾತಿ, ಮತ, ಪಂಥಗಳ ಸಂಕೋಲೆಗಳಿಂದ ಹೊರಬಂದು ವಿಶ್ವಮಾನವ ಧರ್ಮವನ್ನು ಅಪ್ಪಿಕೊಳ್ಳಬೇಕು ಎಂದು ಕರೆಕೊಟ್ಟ ರಸಋಷಿ ಕವಿ ಕುವೆಂಪು. ನಮ್ಮ ಕನ್ನಡದ ಕೀರ್ತಿಯ ಪಥಾಕೆಯನ್ನು ವಿಶ್ವಕ್ಕೆ ಸಾರಿದ ವಿಶ್ವಮಾನವ ಕುವೆಂಪು, ನಮ್ಮ ಕರ್ನಾಟಕಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರಲ್ಲಿ ಮೊದಲಿಗರು ಅಂತಹ ವ್ಯಕ್ತಿಯ ಪುಣ್ಯಸ್ಮರಣೆಯ ದಿನವನ್ನು ಇಂದು ನಾವು ಆಚರಿಸುತ್ತಿದ್ದೇವೆಂದರೆ ಅವರು ನಮಗೆ ಕೊಟ್ಟಿರುವ ಅಪಾರವಾದ ಕೊಡುಗೆ.ನಮ್ಮ ಭಾರತದ ಇತಿಹಾಸದಲ್ಲಿ, ಕೋಟೆಗಳನ್ನು ರಕ್ಷಿಸಿದ ಅಸಂಖ್ಯಾತ ವೀರರಲ್ಲಿ ಯಾವ ಯುದ್ಧ ಕಲೆಯೂ ತಿಳಿಯದೆ ತನ್ನ ಒನಕೆಯನ್ನು ಬಳಸಿ, ಒಂದು ಸಾಮ್ರಾಜ್ಯದ ವಿಸ್ತರಣೆಯನ್ನು ಕುತಂತ್ರದಿಂದ ವಶಪಡಿಸಿಕೊಳ್ಳಲು ಬಂದಂತಹ ದುಷ್ಟಪಡೆಯನ್ನು ತಡೆಹಿಡಿದಂತ ಏಕೈಕ ಮತ್ತು ಅದ್ವಿತೀಯ ನಾರಿಯ ಶಕ್ತಿಯ ಪ್ರತೀಕ ನಮ್ಮ ನಾಡಿನ ವೀರವನಿತೆ ಒನಕೆ ಓಬವ್ವ ಅವರ ಜಯಂತಿಯನ್ನು ನಾವು ಆಚರಣೆ ಮಾಡುತ್ತಿದ್ದೇವೆ, ವೈರಿಗಳ ಸಂಪೂರ್ಣ ಯೋಜನೆಯನ್ನೇ ವಿಫಲಗೊಳಿಸಿ, ನೂರಾರು ಸೈನಿಕರಿಗೆ ದುಃಸ್ವಪ್ನವಾದ ಒನಕೆ ಓಬವ್ವ ಆಕೆಯನ್ನು ಮುಂದೆ ಇಂದ ತಡೆಯಲು ಆಗದೇ ಹಿಂದೆಯಿಂದ ಬಂದು ಆಕೆಯನ್ನು ಹಲ್ಲೇ ಮಾಡಿದರೇ ವಿನಃ, ತನಗೆ ಪೆಟ್ಟು ಬಿದ್ದರೂ ಸಹ ತನ್ನ ಕೊನೆಯುಸಿರು ಇರುವವರೆಗೂ ಆಕೆ ತನ್ನ ರಾಜ್ಯವನ್ನು ಕಾಪಾಡಿಕೊಂಡಂತಹ ವೀರವನಿತೆ ಆಕೆಯ ಶೌರ್ಯ ಅಜರಾಮರ ಅವರು ನಮ್ಮ ನಾಡಿನ ಒಳಿತಿಗಾಗಿ ಮಾಡಿದ ಅಗಮ್ಯ ಸೇವೆ ಮತ್ತು ತ್ಯಾಗವು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ದಾಖಲಾಗಿದೆ ಅಂತಹವರನ್ನು ಇಂದು ನಾವು ನೆನೆಯುತ್ತಿದ್ದೇವೆಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿಬ್ಬೂರು ಗಿರೀಶ್ರವರು ಮಾತನಾಡಿದರು.ಈ ಸಂದರ್ಭದಲ್ಲಿ ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿ ಕುಮಾರ್, ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಯುವ ಘಟಕದ ಅಧ್ಯಕ್ಷರು ಹಾಗೂ ಜಿಲ್ಲಾ ಅಟ್ರಸಿಟಿ ಕಮಿಟಿ ಸದಸ್ಯರಾದ ಕೆ.ಗೋವಿಂದರಾಜ್, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿಬ್ಬೂರು ಗಿರೀಶ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಇಲ್ಲಾಸ್ ಅಹಮದ್, ಯುವ ಘಟಕದ ಜಿಲ್ಲಾಧ್ಯಕ್ಷರಾದ ಪುರದಕಟ್ಟೆ ಮಂಜು, ಗಂಗಾಧರ್ ಜಿ.ಆರ್, ತುಮಕೂರು ತಾಲೂಕು ಅಧ್ಯಕ್ಷರಾದ ರಂಗಸ್ವಾಮಿಯ ಕೆ.ಎಸ್., ತುಮಕೂರು ನಗರ ಅಧ್ಯಕ್ಷರಾದ ಶ್ರೀನಿವಾಸ್ ದಿಬ್ಬೂರು, ಅಲ್ಪಸಂಖ್ಯಾತರ ಘಟಕದ ಯುವ ಘಟಕದ ಜಿಲ್ಲಾಧ್ಯಕ್ಷರಾದ ಮೋಯಿನ್ ಅಹಮದ್, ಕರ್ನಾಟಕ ರಾಜ್ಯ ಬಿ.ಆರ್ ಅಂಬೇಡ್ಕರ್ ರಕ್ಷಣಾ ಸಮಿತಿ ಅಲ್ಪಸಂಖ್ಯಾತರ ರಾಜ್ಯ ಅಧ್ಯಕ್ಷರು ಅಮಿತ್ ಪಾಷಾ, ಹಾಜಬ್ ಸಿರಾಣಿ, ಶಿವಣ್ಣ, ಲಕ್ಷ್ಮೀನಾರಾಯಣ್ ಎಸ್ ಇನ್ನು ಮುಂತಾದವರು ಉಪಸ್ಥಿತರಿದ್ದರು.



