70ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ
ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕಲಬುರಗಿ ಜಿಲ್ಲಾ ಸಹಕಾರ ಒಕ್ಕೂಟ, ಕಲಬುರಗಿ -ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ ಹಾಗು ಓಂ ಪತ್ತಿನ ಸಹಕಾರ ಸಂಘ ನಿಯಮಿತ ಶಹಾಬಾದ ಇವರ ಸಂಯುಕ್ತ ಆಶ್ರಯದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಿಸಿದರು.
ಸಹಕಾರ ಸಂಘಗಳು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಒಂದು ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಆರ್ಥಿಕವಾಗಿ ಸಬಲರಾಗಲು ಸಹಾಯ ಮಾಡುತ್ತವೆ ಇದರ ಉಪಯೋಗವನ್ನು ವಿದ್ಯಾರ್ಥಿಗಳು ಯುವಕರು ಮಹಿಳೆಯರು ಪಡೆದುಕೊಳ್ಳಬೇಕೆಂದು ಕಲಬುರಗಿ ಜಿಲ್ಲಾ ಸಹಕಾರ ಒಕ್ಕೂಟದ ಕಾರ್ಯನಿರ್ವಾಹಣಾಧಿಕಾರಿ ಶೈಲಜಾ ಆರ್ ಚವಾಣ್ ಹೇಳಿದರು.
ಡಿಸಿಎಂ ತರಬೇತಿ ಕೇಂದ್ರ ಕಲಬುರಗಿ ಉಪನ್ಯಾಸಕರಾದ ಮಂಜುಳಾ ಬಿರಾದರ್ ಮಾತನಾಡಿ ಸಹಕಾರ ಸಂಘವು ಸಾರ್ವಜನಿಕ -ಖಾಸಗಿ -ಸಹಕಾರಿ ಸಹಾಭಾಗಿತ್ವವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಹಳ್ಳಿಯಿಂದ ಹಿಡಿದು ಪಟ್ಟಣದವರೆಗೂ ಎಲ್ಲಾ ರೀತಿಯ ಜನರು ಸಹಕಾರ ಸಂಘವನ್ನು ಬಲಪಡಿಸಬೇಕೆಂದು ಉಪನ್ಯಾಸ ನೀಡಿದರು.
ಶರಣಗೌಡ ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು, ಅಧ್ಯಕ್ಷತೆ ಬಸವರಾಜ ಮದ್ರಿಕಿ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಎಸ್. ಜಿ. ರಾಮಚಂದ್ರ, NCUI ಪ್ರೊಜೆಕ್ಟ ಆಫಿಸರ್, ರಾಮಣ್ಣ ಎಸ್ ಇಬ್ರಾಹಿಂಪುರ್, ಮೇಘಾ ಎಸ್ ಸುಬೇದಾರ್ ವೇದಿಕೆ ಮೇಲಿದ್ದರು, ಸಂಘದ ನಿರ್ದೇಶಕರಾದ ರೇಷ್ಮಾ ಸುಭೆದಾರ್, ವಿಜಯಕುಮಾರ್ ಕಂಟಿಕಾರ್, ತೇಜಸ್ ಆರ್, ತಿಪ್ಪಣ್ಣ ಹೆಡಗಿಮದ್ರಿ, ರವಿ ದೇವಕರ್, ಇಸ್ಮಾಯಿಲಬೀ, ಭೀಮರಾಯ, ಮಂಜು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.