ಅಫಜಲಪೂರ : ವಿದ್ಯುತ್ ಶಾರ್ಟ್ ಸರ್ಕಿಟ್ ದಿಂದ ರೈತನ ಎತ್ತಿನ ಬಂಡಿ ಸಂಪೂರ್ಣವಾಗಿ ಸುಟ್ಟು ಭಸ್ಮ ವಾಗಿರುವ ಘಟನೆ ತಾಲೂಕಿನ ಬಡದಾಳ ಗ್ರಾಮದಲ್ಲಿ ನಡೆದಿದೆ.ರೈತ ಅಮೋಗಿ ಚಂದ್ರಶ್ಯಾ ಜೇವರ್ಗಿ ಎಂಬ ರೈತನ ಬಂಡಿಯೇ ಸುಟ್ಟ ಭಸ್ಮ ವಾಗಿದೆ ಮದ್ಯಾಹ್ನ ಸರಿ ಸುಮಾರು ಎರಡು ಗಂಟೆಯ ವೇಳೆಗೆ ಈ ಅವಘಡ ನಡೆದಿದ್ದು ಸ್ಥಳಕ್ಕೆ ಅಗ್ನಿಶಾಮಕ್ ದಳದವರು ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವಾಗುವದನ್ನು ತಪ್ಪಿಸಿದ್ದಾರೆ.ಈ ಹಿಂದೆ ಇದೆ ಸ್ಥಳದಲ್ಲಿ ವಿದ್ಯುತ್ ಮೆನ್ ಲೈನ್ ಪ್ರವಹಿಸಿ ಸುಮಾರು ಐದಕ್ಕಿಂತ ಹೆಚ್ಚು ಕುರಿಗಳ ಮರಣಹೋಮ್ ನಡೆದಿತ್ತು. ರೈತ ವಿದ್ಯುತ್ ಇಲಾಖೆಗೆ ಹಲವು ಬಾರಿ ಮೆನ್ ಲೈನ್ ಬೇರೆ ಕಡೆಗೆ ಸ್ಥಳಾಂತರ ಮಾಡಿ ಎಂದು ಮನವಿಯು ಮಾಡಿದ್ದ ಎನ್ನಲಾಗಿದೆ ಆದರೆ ಪದೇ ಪದೇ ಮನವಿ ಮಾಡಿದ್ದರು ಕೂಡ ವಿದ್ಯುತ್ ಇಲಾಖೆಯ ಜೇಸ್ಕಾಂ ಅಧಿಕಾರಿಗಳು ಯಾವುದೇ ಗಮನ ಹರಿಸಿಲ್ಲ ಹಾಗಾಗಿ ಮತ್ತೆ ಅದೇ ತರಹ ಘಟನೆ ಮರುಕಳಿಸಿದ್ದು ಪ್ರಸ್ತುತ ಘಟನೆಯಲ್ಲಿ ಹೊಸದಾಗಿ ತಂದಿರುವ ಎತ್ತಿನ ಬಂಡಿ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ಗೋಳು ತೋಡಿಕೊಂಡರು ಮತ್ತು ಜೇಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮನೆಯ ಮೇಲೆ ಹಾದು ಹೋಗಿರುವ ವಿದ್ಯುತ್ ಮೆನ್ ಲೈನ್ ವ್ಯವಸ್ಥೆಯನ್ನು ಬೇರೆಕಡೆಗೆ ಶಿಫ್ಟ್ ಮಾಡಬೇಕು ಎಂದು ಅಧಿಕಾರಿಗಳಿಗೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಪರಮೇಶ್ವರ್ ಶಿರೂರ್ ಶರಣು ಪಕಾಲಿ, ಸಿದ್ದರಾಮ ಮುಗಾ, ಬೀರಣ್ಣ ಪೂಜಾರಿ, ಅರುಣಕುಮಾರ್ ಮಳಗಿ ಸೇರಿದಂತೆ ಅನೇಕರು ಸ್ಥಳೀಯರು ಸ್ಥಳದಲ್ಲಿ ಬೆಂಕಿಯಿಂದ್ ಆಗುವ ಅನಾಹುತ ತಪ್ಪಿಸಿ ರೈತನ ನೆರವಿಗೆ ಬಂದರು.



