ಕಲ್ಬುರ್ಗಿ ನಗರದಲ್ಲಿಂದು ಡಾ. ಪ್ರಣವಾನಂದ ಮಹಾಸ್ವಾಮಿಗಳು ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನವೆಂಬರ್ 28 -2023 ಮಂಗಳವಾರ ಬೆಳಗ್ಗೆ 8:00 ಗಂಟೆಗೆ ನಡೆಯುವ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ಚಿತ್ತಾಪುರ ತಾಲೂಕಿನ ಕರದಳ ಗ್ರಾಮದಲ್ಲಿ ಡಾ. ಪ್ರಣವಾನಂದ ಮಹಾಸ್ವಾಮಿಗಳ ಶಕ್ತಿಪೀಠದ ದ್ವಿತೀಯ ವರ್ಷ ಪೀಠಾರೋಹಣ ಹಾಗೂ ಉತ್ತರಾಧಿಕಾರಿಗಳಾದ ಚಿರಂಜೀವಿ ಶ್ರೀ ಶರಣಬಸವ ವೇದ ಪ್ರಕಾಶ್ ರವರ ಪಂಚ ವಾರ್ಷಿಕ ಜನ್ಮ ವರ್ಧಂತ್ಯುತ್ಸವ(ಹುಟ್ಟುಹಬ್ಬ) ಹಾಗೂ ಪುರ ಪ್ರವೇಶ ಸಮಾರಂಭ ಮತ್ತು ಕೇರಳದ ಖ್ಯಾತ ತಾಂತ್ರಿಕ ಗುರುಗಳಿಂದ 14 ಗಂಟೆಗಳ ಕಾಲ ಮಹಾ ಪ್ರತ್ಯಂಗಿರಿದೇವಿ ಯಾಗ (ಹೋಮ) ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಸಮಸ್ತ ಸದ್ಭವಕರಿಗೆ ಆಹ್ವಾನ ನೀಡುತ್ತಾ ಅಂದು ನಡೆಯುವ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನಿತಿನ್ .ವಿ. ಗುತ್ತೇದಾರ್, ಮಹಾದೇವ್ ಗುತ್ತೇದಾರ್ ಮತ್ತು ಸದಾನಂದ್ ಪೇರ್ಲಾ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.