ದಂತಹ ಕಾರ್ಯಕ್ರಮಗಳ ಮೂಲಕ ಕೈಗಾರಿಕೆಗಳಿಗೆ ಹೂಡಿಕೆ ಮಾಡುತಿದ್ದರೆ, ಕಾಂಗ್ರೆಸ್ ಬಿಟ್ಟಿ ಯೋಜನೆಗಳ ಮೂಲಕ ದೇಶದ ಹಣಕಾಸು ಸ್ಥಿತಿಯನ್ನು ಹಾಳು ಮಾಡುತ್ತಿದೆ ಎಂದು ದೂರಿದರು.
ಮಾಜಿ ಶಾಸಕ ಮಸಾಲೆ ಜಯರಾಮ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ೬೦ ಸಾವಿರ ಕೋಟಿ ರೂ.ಗಳನ್ನು ತನ್ನ ಗ್ಯಾರಂಟಿ ಯೋಜನೆಗೆ ಖರ್ಚು ಮಾಡುತ್ತಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ. ಉಚಿತ ಬಸ್ ಪ್ರಯಾಣದಿಂದಾಗಿ ಕೆಎಸ್ಸಾರ್ಟಿಸಿ ನಿಗಮ ಸಹ ಸಂಕಷ್ಟಕ್ಕೆ ತಲುಪುತ್ತಿದೆ. ಈ ಸರ್ಕಾರ ನವೆಂಬರ್ ವರೆಗೆ ಮಾತ್ರ ಅಸ್ತಿತ್ವದಲ್ಲಿರಲಿದೆ ಎಂದರು.
ಪ್ರತಿ ಹಾಲು, ಮೊಸರು ಪ್ಯಾಕೆಟ್ ಮೇಲೆ ೫೦ ಗ್ರಾಂ ಖಾತೋ ಆಗಿದೆ. ಆದರೆ ಬೆಲೆ ಮಾತ್ರ ಜಾಸ್ತಿಯಾಗುತ್ತಿದೆ. ಅಲ್ಲದೆ ರಾಜ್ಯದಿಂದ ತಿರುಪತಿ ತಿಮ್ಮಪ್ಪನ ಲಾಡಿಗೆ ಸರಬರಾಜಾಗುತ್ತಿದ್ದ ತುಪ್ಪವನ್ನು ಸಹ ನಿಲ್ಲಿಸಿ, ಅದನ್ನು ನಮ್ಮ ಸರ್ಕಾರದ ಮೇಲೆ ಹಾಕುತ್ತಿದೆ ಎಂದು ಕಿಡಿಕಾರಿದ ಅವರು, ರೈತನಿಂದ ಕಿತ್ತುಕೊಂಡು ಅದೇ ರೈತನ ಪತ್ನಿಗೆ ೨ ಸಾವಿರ ರೂ. ಕೊಡುವಂತಹ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

Leave a comment
Leave a comment


