ತುಮಕೂರು: ವಿಪ್ರೋ ಸಂಸ್ಥೆಯು ತುಮಕೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಬಿದರೆಕಟ್ಟೆಯಲ್ಲಿರುವ ವಿವಿಯ ಹೊಸ ಕ್ಯಾಂಪಸ್ನಲ್ಲಿ 15 ಎಕರೆ ವಿಸ್ತೀರ್ಣದಲ್ಲಿ ಜೀವವೈವಿಧ್ಯ ಅಭಯಾರಣ್ಯವನ್ನು ಸ್ಥಾಪಿಸುವ ಒಪ್ಪಂದಕ್ಕೆ ಶುಕ್ರವಾರ ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮತ್ತು ವಿಪ್ರೋ ಟ್ರಸ್ಟಿ ಹಾಗೂ ಸಾಮಾಜಿಕ ಉಪಕ್ರಮಗಳ ಜಾಗತಿಕ ಮುಖ್ಯಸ್ಥ ಪಿ. ಎಸ್. ನಾರಾಯಣ್ ಸಹಿ ಹಾಕಿದರು.
ವಿಪ್ರೋ ಸಂಸ್ಥೆಯ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಬಿ. ಸಿ. ಪ್ರವೀಣ್, ಫ್ಯಾಕ್ಟರಿ ಎಚ್.ಆರ್. ವಿಭಾಗದ ಮುಖ್ಯಸ್ಥರಾದ ಹನುಮಂತರಾಯಪ್ಪ, ವಿಶ್ವನಾಥ್ ಕಾರ್ಕಡ, ಸಂರಕ್ಷಣಾವಾದಿ ಎನ್. ಸಿಗಮಣಿ, ವಿವಿಯ ಕೌಶಲ್ಯಾಭಿವೃದ್ಧಿ ಕೇಂದ್ರದ ಸಂಯೋಜಕ ಪ್ರೊ. ಕೆ. ಜಿ. ಪರಶುರಾಮ, ಸಾಮಾನ್ಯ ಮತ್ತು ಅಭಿವೃದ್ಧಿ, ಖರೀದಿ ಕೋಶದ ಉಪಕುಲಸಚಿವ ಡಾ. ಬಿ. ಕೆ. ಸುರೇಶ್ ಉಪಸ್ಥಿತರಿದ್ದರು.
ಜೀವವೈವಿಧ್ಯ ಅಭಯಾರಣ್ಯ: ತುಮಕೂರು ವಿವಿ-ವಿಪ್ರೋ ಒಪ್ಪಂದಕ್ಕೆ ಸಹಿ
Leave a comment
Leave a comment