ಅಫಜಲಪೂರ ತಾಲೂಕಿನಲ್ಲಿ ಇದೆ ಅಗಸ್ಟ್ 26 ರಂದು ಕಲಬುರಗಿ ರಸ್ತೆಗೆ ಹಿಂದಿಕೊಂಡಿರುವ ಪಟ್ಟಣದ ಬುಜರಿ ಬಿರಾದಾರ ಕಾಲೇಜಿನ ಆವರಣದಲ್ಲಿ ತಾಲೂಕಿನ ನಿರುದ್ಯೋಗ ಯುವಕ ಯುವತಿಯರಿಗೆ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ನಾಗರಾಜ್ ಬುಜರಿ ತಿಳಿಸಿದ್ದಾರೆ. ಪಟ್ಟಣದಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ಸಂಸ್ಥೆಯ ಅಡಿಯಲ್ಲಿ ವಿದ್ಯಾಭ್ಯಾಸ ಮಾಡಿ ಹಲವಾರು ವಿದ್ಯಾರ್ಥಿಗಳು ಸರಕಾರಿ ನೌಕರಿ ಹಾಗೂ ಖಾಸಗಿ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಅದರಂತೆ ಇನ್ನು ಅನೇಕ ವಿದ್ಯಾರ್ಥಿಗಳು ನಿರುದ್ಯೋಗದ ಭೀತಿ ಎದುರಿಸುತ್ತಿದ್ದು ಅದನ್ನು ಹೋಗಲಾಡಿಸಲು ಬೃಹತ್ ಉದ್ಯೋಗ ಮೇಳ ವನ್ನು ಹಮ್ಮಿಕೊಂಡಿದ್ದು ಹಾಗಾಗಿ ನಮ್ಮ ಸಂಸ್ಥೆಯ ವತಿಯಿಂದ ನಡೆಯುವ ಈ ಬೃಹತ್ ಉದ್ಯೋಗ ಮೇಳಕ್ಕೆ ತಾಲೂಕಿನ ನಿರುದ್ಯೋಗ ಯುವಕ ಹಾಗೂ ಯುವತಿಯರು ಬಂದು ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ನಂತರ ಮಾತಾಡಿದ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರರಾದ ಶಿವಕುಮಾರ್ ಜಕಾಪೂರೆ ನಮ್ಮ ಸಂಸ್ಥೆಯ ಅಡಿಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಸುವರ್ಣವಕಾಶವನ್ನು ನಾವು ಒದಗಿಸಿದ್ದು ಹಾಗಾಗಿ ಇದೆ ಅಗಸ್ಟ್ 26 ಕ್ಕೆ ಕಾಲೇಜಿನ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ್ ಹಮ್ಮಿಕೊಳ್ಳಲಾಗಿದೆ ತಾಲೂಕಿನ 18 ವರ್ಷ ಪೂರೈಸಿದ ನಿರುದ್ಯೋಗ ಯುವಕರು ಹಾಗೂ ಯುವತಿಯರು ಸೂಕ್ತ ಧಾಖಲೆಗಳೊಂದಿಗೆ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕು ಎಂದರು. ಬೆಂಗಳೂರು, ಪುಣೆ ಕಲ್ಕತ್ತಾ ಸೇರಿದಂತೆ ಅನೇಕ ನಗರಗಳಲ್ಲಿನ ಪ್ರತಿಷ್ಠಿತ ರಾಷ್ಟ್ರಿಯ ಹಾಗೂ ಅಂತಾರಾಷ್ಟ್ರೀಯ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸುತ್ತಿದ್ದು ಹಾಗಾಗಿ ಎಲ್ಲರೂ ಈ ಮೇಳದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ
ನಾಗರಾಜ ಬುಜರಿ ಶಿವಕುಮಾರ ಜಕಾಪೂರೆ,ಮಹೇಶ್ ಬಮ್ಮನಳ್ಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಆಗಸ್ಟ 26 ರಂದು ಬುಜರಿ ಬಿರಾದಾರ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ

Leave a comment
Leave a comment