ತುಮಕೂರು : ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿ.ದಯನಾಂದ್ ಅವರನ್ನು ನಿರ್ದಾಕ್ಷಿಣ್ಯವಾಗಿ ಅಮಾನತ್ತು ಮಾಡಿರುವ ಸರ್ಕಾರದ ವಿರುದ್ಧ ತುಮಕೂರು ಜಿಲ್ಲಾ ನಾಯಕ ಸಮಾಜದ ಒಕ್ಕೂಟದ ವತಿಯಿಂದ ಇಂದು ತುಮಕೂರು ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ನಾಯಕ ಸಾಮಜದ ಮುಖಂಡರಾದ ಮಾರಣ್ಣ ಪಾಳೇಗಾರ್ ಮಾತನಾಡಿ ಇತ್ತೀಚಿಗೆ ಬೆಂಗಳೂರು ಆರ್.ಸಿ.ಬಿ ಕ್ರಿಕೆಟ್ ತಂಡವು ಐ.ಪಿ.ಎಲ್. ಮ್ಯಾಚ್ ಗೆದ್ದ ಹಿನ್ನೆಲೆಯಲ್ಲಿ ಸದರಿ ತಂಡಕ್ಕೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಹಾಗೂ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ಭಾಗವಹಿಸುವವರ ಪೈಕಿ 11 ಜನ ನವಯುವಕರು ಕಾಲ್ತುಳಿತಕ್ಕೆ ಒಳಗಾಗಿ ಸಾವಿಗೀಡವಾಗಿರುವುದು ಅತ್ಯಂತ ಅಮಾನವೀಯ ಮತ್ತು ಅಮಾನುಷ ಕೃತ್ಯವಾಗಿರುತ್ತದೆ. ಜೀವನದ ಬಗ್ಗೆ ಉತ್ತಮ ಬದುಕಿನ ಕನಸು ಕಾಣುವ ವಯಸ್ಸಿನಲ್ಲಿ ಸಾವಿಗೀಡಾಗಿರುವ ಬಹುತೇಕರ ವಯಸ್ಸು 18 ರಿಂದ 25 ವರ್ಷ ವಯಸ್ಸುವುಳ್ಳ ಬಿಸಿ ರಕ್ತದ ನವ ಯುವಕರು ಸಾವಿಗೀಡಾಗಿರುವುದು ಈ ದೇಶದ ಪ್ರತಿಯೊಬ್ಬ ನಾಗರೀಕರ ಮನಸ್ಸನ್ನು ಕಲಕಿದೆ. ಇಂತಹ ದುರ್ಘಟನೆಯ ಅವಘಡವನ್ನು ಮರೆಮಾಚಲು ದಕ್ಷ ಹಾಗೂ ಪ್ರಾಮಾಣಿಕ ಹಾಗೂ ಭ್ರಷ್ಟಮುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ದಯಾನಂದ, ಐ.ಪಿ.ಎಸ್ ರವರನ್ನು ಅಮಾನತ್ತು ಮಾಡಿರುವುದು ಮತ್ತೊಂದು ಖಂಡನೀಯ ವಿಚಾರವಾಗಿದೆ ಎಂದರು.ಅದರಲ್ಲೂ ವಿಶೇಷವಾಗಿ ಬಿ.ದಯಾನಂದ, ಐ.ಪಿ.ಎಸ್ ಅಧಿಕಾರಿಯವರು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿ ವರ್ಗಾವಣೆಯಾಗಿ ಬಂದ ನಂತರ ಬೆಂಗಳೂರು ನಗರದಲ್ಲಿ ನಾಗರೀಕರು ನೆಮ್ಮದಿಯಿಂದ ಬದುಕನ್ನು ಕಾಣುತ್ತಿದ್ದಾರೆ, ಇತ್ತೀಚೆಗೆ ಯಾವುದೇ ರಾಬರಿ, ದೊಂಬಿ, ಗಲಾಟೆಗಳು ನಡೆದಿಲ್ಲ ಅದರ ಕೀರ್ತಿ ಬಿ.ದಯಾನಂದ, ಐ.ಪಿ.ಎಸ್ ರವರಿಗೆ ಸಲ್ಲುತ್ತದೆ. ರಾತ್ರಿ ಹಗಲೆನ್ನದೆ ಕೆಲಸ ಮಾಡಿಕೊಂಡು ಬರುತ್ತಿದ್ದ ಬಿ.ದಯಾನಂದ, ಐ.ಪಿ.ಎಸ್ ರವರು ತಮ್ಮ ಸೇವಾ ಅವಧಿಯಲ್ಲಿ ಒಂದು ರಜೆಯನ್ನು ಕೂಡ ಪಡೆಯದೆ ಕರ್ತವ್ಯ ನಿಷ್ಠೆಯನ್ನು ಮೆರೆದಿದ್ದಾರೆ ಎಂದರು.ಇತ್ತೀಚೆಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದಂತಹ ಆರ್.ಸಿ.ಬಿ. ವಿಜಯೋತ್ಸವ ಸಮಾರಂಭದಲ್ಲಿ ಕಾಲ್ತುಳಿತಕ್ಕೆ ಒಳಗಾಗಿರುವುದು ನಿಜಕ್ಕೂ ಖಂಡನೀಯವಾದರೂ ಯಾವುದೇ ತಪ್ಪು ಮಾಡದೇ ಇರುವಂತಹ ಅಧಿಕಾರಿಗಳನ್ನು ಅಮಾನತ್ತು ಮಾಡಿರುವ ಸರ್ಕಾರದ ಕ್ರಮ ಸರಿಯಲ್ಲ. ಈ ದುರ್ಘಟನೆಯ ಹೊಣೆಯನ್ನು ದಲಿತ ಸಮುದಾಯಕ್ಕೆ ಸೇರಿರುವ ಬಿ.ದಯಾನಂದ, ಐ.ಪಿ.ಎಸ್ ಹಾಗೂ ಇತರೆ ಅಧಿಕಾರಿಗಳನ್ನು ತಲೆಗೆ ಕಟ್ಟುವಂತ ಹುನ್ನಾರ ನಡೆದಿದೆ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ, ಇದು ದಲಿತ ವಿರೋಧಿ ಸರ್ಕಾರವಾಗಿದೆ ಎಂದರೇ ತಪ್ಪಗಲಾರದು ಎಂದರು.