ಅಫಜಲಪುರತಾಲೂಕಿನ ತಳವಾರ ಪಾರಿವಾರ ಪಂಗಡಕ್ಕೆ ಸಂವಿಧಾನ ಬದ್ದವಾಗಿ ಸಿಗಬೇಕಿದ್ದ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಲು ಇಲಾಖೆಯ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದು ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವದು ಎಂದು ಜಿಲ್ಲಾಧಿಕಾರಿ ಪಿ ತರನ್ನುಮ್ ಹೇಳಿದರು, ಅಫಜಲಪುರದಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಕೋಲಿ ಸಮಾಜದ ಮುಖಂಡರು ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸೀಲ್ದಾರರಿಗೆ ಹಾಗೂ ತಾಲೂಕಿನ ಶಾಸಕರಿಗೆ ಮನವಿ ಪತ್ರ ನೀಡಿ ತಳವಾರ ಸಮಾಜಕ್ಕೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಲು ನೀಡಲು ಮೀನಾಮೇಷ ಎಣಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ತ್ವರಿತವಾಗಿ ಎಸ್ ಟಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಕೋಲಿ ಸಮಾಜದ ಮುಖಂಡರಾದ ಅವ್ವಣ್ಣ ಮ್ಯಾಕೇರಿ,ಸಂತೋಷ ತಳವಾರ ಚಂದ್ರ ಶೇಖರ್ ಜಮಾದಾರ, ಸುನಿತಾ ತಳವಾರ, ದಿಗಂಬರ ಕಾಡಪ್ಪಗೋಳ, ವಿದ್ಯಾದರ್ ಮಂಗಳೂರೆ, ಗಿರೀಶ್ ತಂಬಗಿ, ಗುರು ಹಾವನೂರ, ನಿಂಗಪ್ಪ ದೇವಣಗಾಂವ, ಲಕ್ಷ್ಮಿಪುತ್ರ ತಳವಾರ್, ಆಕಾಶ ತಳವಾರ, ರಾಜೇಂದ್ರ ರಾಜವಾಳ, ಸಿದ್ದು ಜಮಾದಾರ ಸೇರಿದಂತೆ ಅನೇಕ ಗಣ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದರು.