ಲೋಕಸಭಾ ಸಭಾ ಕ್ಷೇತ್ರದ ಎನ್.ಡಿಎ ಅಭ್ಯರ್ಥಿ ವಿ.ಸೋಮಣ್ಣ ಅವರು ಸೋಮವಾರ ಬಿಜೆಪಿ, ಜೆಡಿಎಸ್ ಮುಖಂಡರೊAದಿಗೆ ತುಮಕೂರು ನಗರದಲ್ಲಿ ವ್ಯಾಪಕ ಮತಯಾಚನೆ ಮಾಡಿದರು. ಎಲ್ಲಾ ಕಡೆ ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರು, ನಾಗರೀಕರು ಸೋಮಣ್ಣ ಅವರನ್ನು ಸಂಭ್ರಮದಿAದ ಸ್ವಾಗತಿಸಿ ಆತ್ಮೀಯತೆಯಿಂದ ಬರಮಾಡಿಕೊಂಡರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಸೇರಿದಂತೆ ಎರಡೂ ಪಕ್ಷಗಳ ಮುಖಂಡರು, ಮಾಜಿ ಕಾರ್ಪೊರೇಟರ್ಗಳು ಮುಂಚೂಣಿಯಲ್ಲಿ ನಿಂತು ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ದೇಶದ ಸಾರ್ವಭೌಮತ್ವ, ದೇಶದ ರಕ್ಷಣೆಗಾಗಿ, ದೇಶದ ಅಭಿವೃದ್ಧಿಗಾಗಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎನ್ನುವ ಕಾರಣಕ್ಕೆ ಈ ಚುನಾವಣೆ ಮಹತ್ವ ಪಡೆದಿದೆ. ಚುನಾವಣೆಯಲ್ಲಿ ತಮಗೆ ಮತ ನೀಡಿ ಆಯ್ಕೆ ಮಾಡುವ ಮೂಲಕ ಮೋದಿಯವರು ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಸಹಕರಿಸಬೇಕು ಎಂದು ಸೋಮಣ್ಣ ಮನವಿ ಮಾಡಿದರು.
ಬೆಳಿಗ್ಗೆ ಎನ್.ಆರ್.ಕಾಲೋನಿಯಲ್ಲಿ ದುರ್ಗಮ್ಮ, ಪೂಜಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ವಿ.ಸೋಮಣ್ಣ ಅವರು ಚುನಾವಣಾ ಪ್ರಚಾರ ಯಾತ್ರೆ ಆರಂಭಿಸಿದರು. ನಂತರ ಎನ್.ಆರ್.ಕಾಲೋನಿಯ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು.
ಈ ವೇಳೆ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಮುಖಂಡರಾದ ಎಸ್.ಪಿ.ಚಿದಾನಂದ್, ಟಿ.ಎನ್.ಕುಂಭಣ್ಣ, ರವೀಶ್ ಜಹಂಗೀರ್, ಶ್ರೀನಿವಾಸಪ್ರಸಾದ್, ಟಿ.ಜಿ.ನರಸಿಂಹರಾಜು, ಹನುಮಂತರಾಯಪ್ಪ(ಹೆಚ್.ಆರ್), ನಗರ ಪಾಲಿಕೆ ಮಾಜಿ ಸದಸ್ಯರಾದ ಟಿ.ಕೆ.ನರಸಿಂಹಮೂರ್ತಿ, ಎ.ಶ್ರೀನಿವಾಸ್, ಅಂಜನಮೂರ್ತಿ, ಅಣೆತೋಟ ಶ್ರೀನಿವಾಸ್, ಗಂಗಾಧರ್ ಮೊದಲಾದವರು ಭಾಗವಹಿಸಿದ್ದರು
ತುಮಕೂರು ನಗರದ ವಿವಿಧೆಡೆ ಎನ.ಡಿ.ಎ ಅಭ್ಯರ್ಥಿ ಭರ್ಜರಿ ಚುನಾವಣಾ ಪ್ರಚಾರ

Leave a comment
Leave a comment


