ಶಿವು ಪ್ಯಾಟಿ ಜಾತಿ ಜಾತಿಗಳ ಜೊತೆಗೆ ಜಗಳ ಹಚ್ಚುವ ಕೆಲಸ ಮಾಡಿ ಜೇ ಎಮ್ ಕೊರಬು ಅವರ ಹೆಸರಿಗೆ ಮಸಿ ಬಳೆಯುವ ಕೆಲಸ ನಿಲ್ಲಿಸಬೇಕು ಇಲ್ಲವಾದರೆ ತಕ್ಕ ಪಾಠ ಕಲಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ ಕುರುಬ ಸಮಾಜದ ತಾಲೂಕಾ ಅಧ್ಯಕ್ಷ ಬೀರಣ್ಣ ಪೂಜಾರಿ.ಮಾಶಾಳ ಗ್ರಾಮದ ಗ್ರಾಂ ಪಂಚಾಯತ ಸದಸ್ಯ ಶಿವು ಪ್ಯಾಟಿ ಉದ್ದೇಶ ಪೂರ್ವಕವಾಗಿ ಸ್ವತಂತ್ರ ಯೋಧ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಜಾತಿ ಜಾತಿಗಳ ಮಧ್ಯೇ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಆ ಕೆಲಸ ಮೊದಲು ನಿಲ್ಲಿಸಬೇಕು ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಬೀರಣ್ಣ ಪೂಜಾರಿ ಹೇಳಿದರು. ತಾಲೂಕಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಮಾಶಾಳ ಗ್ರಾಮದಲ್ಲಿ ನಮ್ಮ ಸಮಾಜದ ಕೆಲ ಯುವಕರು ಸ್ವತಂತ್ರ ಯೋಧ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಸ್ಥಾಪನೇಯನ್ನು ಇದೆ ಅಗಸ್ಟ್ 14 ರಂದು ಮಾಡಿದ್ದೂ ಎಲ್ಲರೂ ಸಂತಸ ಪಡುವ ವಿಷಯವಾಗಿದೆ ಆದ್ರೆ ಮೂರ್ತಿ ಸ್ಥಾಪನೆಗೆ ಗ್ರಾಮ ಪಂಚಾಯತ ಸದಸ್ಯರಾದ ಶಿವು ಪ್ಯಾಟಿ ಉದ್ದೇಶ ಪೂರ್ವಕವಾಗಿ ಹಿಂಬಾಗಿಲಿನಿಂದ ವಿರೋಧ ವ್ಯಕ್ತಪಡಿಸುತ್ತಿರುವದು ಸರಿಯಲ್ಲ ಅಷ್ಟೇ ಅಲ್ಲದೆ ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಜೇ ಎಮ್ ಕೊರಬು ಅವರ ಹೆಸರಿಗೆ ಮಸಿ ಬಳೆಯುವ ಕೆಲಸ ಮಾಡುತ್ತಿರುವದು ಕೂಡ ಸರಿಯಲ್ಲ ಎಂದರು, ಒಂದು ವೇಳೆ ಶಿವು ಪ್ಯಾಟಿ ಇದೆ ರೀತಿಯ ವರ್ತನೆ ಮುಂದುವರೆಸಿದರೆ ತಕ್ಕ ಬೆಲೇ ತೆರಬೇಕಾಗುತ್ತೆ ಎಂದು ಶಿವು ಪ್ಯಾಟಿ ವಿರುದ್ಧ ಕಿಡಿ ಕಾರಿದರು. ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಯುವ ಘಟಕದ ತಾಲೂಕು ಅಧ್ಯಕ್ಷ ಸಿದ್ದರಾಮ ಹೊಸಮನಿ, ಕಾರ್ಯದರ್ಶಿ ಬೀರಣ್ಣ ಆತನೂರ, ಸೇರಿದಂತೆ ರಮೇಶ ನೀಲಗಾರ ಸೇರಿದಂತೆ ಅನೇಕ ಗಣ್ಯರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದರು.