ವಯಸ್ಕರ ಶಿಕ್ಷಣ ಕಲಿಕಾ ಕೇಂದ್ರ: ರೋಟರಿ ಕ್ಲಬ್ ಬೆಂಗಳೂರು, ಜನಜಾಗೃತಿ ಸಂಸ್ಥೆ, ಕೊರಟಗೆರೆ ಹಾಗೂ ಆಸರೆ ಜನಾಭಿವೃದ್ಧಿ ಸಂಸ್ಥೆ, ತುಮಕೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಊರ್ಡಿಗೆರೆ ಹೋಬಳಿ, ನಾಗಯ್ಯನಪಾಳ್ಯದ ಗ್ರಾಮದಲ್ಲಿ ವಯಸ್ಕರ ಶಿಕ್ಷಣ ಕಲಿಕಾ ಕೇಂದ್ರಗಳ ಉದ್ಘಾಟನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿ ನಮ್ಮ ದೇಶದಲ್ಲಿ ರೋಟರಿ ಕ್ಲಬ್ಗಳು ಸಮಾಜ ಮುಖಿ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಇಲ್ಲಿ ಆಧಿಕಾರದ ಅಸೆ, ಸ್ವಾರ್ಥಕ್ಕಿಂತ ಸೇವೆ ಮಾಡುವುದೇ ಮುಖ್ಯವಾಗಿದೆ. ಕ್ಯಾನ್ಸರ್, ಹೃದಯ ರೋಗ, ಕಿಡ್ನಿ ಹೀಗೆ ವಿವಿಧ ಸಮಸ್ಯೆಗಳಿರುವ ಗ್ರಾಮೀಣ ಮತ್ತು ನಗರ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಜನರಿಗೆ ಉಚಿತವಾಗಿ ಸೇವೆ ನೀಡಲಾಗುತ್ತದೆ ಎಂದು ಸಂಸೆರಾ
ಇಂಜಿನಿಯರಿoಗ್ ಜಂಟಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಖಣಟಿ. ಎಫ್.ಆರ್. ಸಿಂಘ್ವಿ ರವರು ಮಾತನಾಡಿದರು.ನಂತರ ವಯಸ್ಕರ ಸಾಕ್ಷರತಾ ಸಂಯೋಜಕರಾದ ಖಣಟಿ. PP ರಾಜೇಶ್ ಹಿರೇಮಠ ಮಾತಾನಾಡಿ ರೋಟರಿ ಕ್ಲಬ್ಗಳು 200 ಕ್ಕೊ ಹೆಚ್ಚು ದೇಶಗಳಲ್ಲಿ 37 ಸಾವಿರ ಕ್ಲಬ್ ಹಾಗೂ 1.12 ಮಿಲಿಯನ್ ಸದಸ್ಯತ್ವ ಹೊಂದಿರುವ ರೋಟರಿ ಜಗತ್ತಿನ ಬಹು ದೊಡ್ಡ ಸೇವಾ ಸಂಸ್ಥೆಯಾಗಿದೆ. ಇವತ್ತು ಪೋಲಿಯು ಲಸಿಕೆ ರೋಟರಿ ಪರಿಚಯ ಮಾಡಿದ ಕೀರ್ತಿ ರೋಟರಿಗೆ ಸಲ್ಲುತ್ತದೆ. ಹಾಗೆಯೇ ಕೊರೋನಾ ಸಂಕಷ್ಟದಲ್ಲಿಯು ಉತ್ತಮ ಕೆಲಸ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತದೆ. ಜನಜಾಗೃತಿ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ವಿ.ಎನ್.ಮೂರ್ತಿರವರು ಮಾತಾನಾಡಿ ಕುಟುಂಬದಲ್ಲಿ ಮಹಿಳೆಯರ ಪ್ರಮುಖ ಪಾತ್ರವಹಿಸುತ್ತಾರೆ. ಹೆಣ್ಣೋಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಡೋಡಿಯಂತೆ ಮಕ್ಕಳಿಗೆ ಮೊದಲನೇ ಗುರು ತಾಯಿಯಾಗಿರುತ್ತಾರೆ. ಕುಟುಂಬದ ಮತ್ತು ಸಮಾಜದ ಬದಲಾವಣೆಯಾಗಬೇಕಾದರೆ ಪ್ರತಿಯೊಬ್ಬ ನಾಗರೀಕರು ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿರುವ ರೋಟರಿ ಇಂಡಿಯಾ ಲಿಟರಸಿ ಮಿಷನ್ನ ಸದಸ್ಯ ರಾಷ್ಟ್ರೀಯ ಕಾರ್ಯನಿರ್ವಾಹಕರಾದ ಖಣಟಿ. ರಾಜೇಂದ್ರ ರೈ ರವರು ಮಾತಾನಾಡುತ್ತಾ ಅನಕ್ಷರಸ್ಥರಿಗೆ ಅಕ್ಷರಭ್ಯಾಸ ಮಾಡುವ ಮೂಲಕ ಸಮಾಜ ಬದಲಾವಣೆ ತರಲು ಸಾಧ್ಯವಾಗುತ್ತದೆ. ಹಾಗಾಗಿ ತುಮಕೂರು ತಾಲ್ಲೂಕಿನಲ್ಲಿ 10 ಸಾಕ್ಷರತಾ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸುವ ಮೂಲಕ 250 ಮಂದಿ ಅನಕ್ಷರಸ್ಥ ಮಹಿಳೆಯರಿಗೆ ಉತ್ತಮ ಶಿಕ್ಷಣ ನೀಡಿ ಪ್ರಜ್ಙಾವಂತರನ್ನಾಗಿ ಮಾಡುವ ಜವಾಬ್ದಾರಿ ಸ್ವಯಂ ಸೇವಕರು ಮಾಡಬೇಕಿದೆ. ಈಗಾಗಲೇ ರೋಟರಿ ಕ್ಲಬ್ ಮೂಲಕ ಸುಮಾರು 1.06 ಲಕ್ಷ ಜನರನ್ನು ಸಾಕ್ಷರರನ್ನಾಗಿ ಮಾಡಿದ ಖ್ಯಾತಿ ಹೊಂದಿದೆ, ಇಂತಹ ಕಾರ್ಯಕ್ರಮಗಳಿಂದಾಗಿ ದೇಶದ ಪ್ರಗತಿ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ ಫಿಟ್ವೆಲ್ ಟೂಲ್ಸ್ ಮತ್ತು ಪೋರ್ಜಿಂಗ್ ಪ್ರೆöÊವೆಟ್ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಡಿ.ಎನ್.ನಾಗಕುಮಾರ್, ಆಶಾ, ಲಕ್ಷ್ಮಿಶೆಟ್ಟಿ, ಪ್ರೀಯದರ್ಶಿನಿ, ಯಶೋಧ, ರೇಣುಕಾ, ಉಮೇಶ್ ಸರೋಜಮ್ಮ, ಶೀಲಾ, ಯೋಗೇಶ್, ವನಜಾ, ರಾಜೇಶ್ವರಿ ಮತ್ತು ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರಾದ ನರಸಿಂಹಮೂರ್ತಿ, ಚಂದ್ರು. ಶ್ರೀನಿವಾಸ್ ಮೂರ್ತಿ ಗೊಲ್ಲಳ್ಳಿ ಬಾಲಕೃಷ್ಣ ಜನಜಾಗೃತಿ ಸಂಸ್ಥೆಯ ಹರೀಶ್, ನಂದಿನಿ, ಗೀತಾ ಮತ್ತು ಗಂಗಹನುಮಯ್ಯ ರವರು ಹಾಗೂ ನಾಗಯ್ಯನಪಾಳ್ಯ ಗ್ರಾಮದ ಮುಖಂಡರು ಭಾಗವಹಿಸಿದ್ದರು ಈ ಕಾಯಕ್ರಮವು ಶಾಂತಮ್ಮ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ, ಎಂ.ಎಲ್.ನoದಿನಿರವರು ಸ್ವಾಗತಿಸಿ, ಅನಿತರವರು ವಂದಿಸಿದರು.