ಸಿರಾ:- ಮೌಡ್ಯದ ವಿರುದ್ಧ ವಿಜ್ಞಾನದ ನಡೆ ಕಾರ್ಯಕ್ರಮವನ್ನು ಸಿರಾ ತಾಲ್ಲೂಕಿನ ಸ ಹಿ ಪ್ರಾ ಶಾಲೆ ನೆಲದಿಮ್ಮನಹಳ್ಳಿ ಶಾಲೆಯಲ್ಲಿ ಪ್ರೊ ನರೇಂದ್ರ ನಾಯಕ್ ತಂಡದಿಂದ ಮಕ್ಕಳಿಗೆ ಪ್ರಾತ್ಯಕ್ಷಿಕೆ ಮತ್ತು ಸಂವಾದ ನಡೆಸಿದರು. ಸಮಾಜದಲ್ಲಿನ ಮೌಡ್ಯಗಳನ್ನು ಎಳೆ ಎಳೆಯಾಗಿ ಪ್ರಯೋಗಗಳ ಮೂಲಕ ತೋರಿಸಿಕೊಟ್ಟರು. ಮಕ್ಕಳು ಹಲವು ಪ್ರಶ್ನೆಗಳನ್ನು ಕೇಳಿದರು. ಪ್ರಶ್ನಿಸುವ ,ಸೂಕ್ಷ್ಮ ವಾಗಿ ಗಮನಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ವಿಭಿನ ಪ್ರಯೋಗಗಳ ಮೂಲಕ ಅರ್ಥೈಸಿದರು. ಶಿಕ್ಷಕ ವೃಂದವು ಹಲವು ಪ್ರಶ್ನೆಗಳನ್ನು ಕೇಳಿ ವೈಜ್ಞಾನಿಕ ಉತ್ತರ ಪಡೆದರು. ಕಾರ್ಯಕ್ರಮಕ್ಕೆ ವೆಂಕಟೇಶ ಟಿ ಎಚ್ ಸ್ವಾಗತಿಸಿದರು, ಸಹ ಶಿಕ್ಷಕಿ ರಶ್ಮಿ ವಂದಿಸಿದರು, ಮುಖ್ಯ ಶಿಕ್ಷಕರಾದ ಉಮೇಶ್, ಸಹಶಿಕ್ಷಕಿಯಾದ ರಾಧಾಮಣಿ ಕಾರ್ಯ ಕ್ರಮದಲ್ಲಿ ಹಾಜರಿದ್ದರು.




