ತುಮಕೂರು : ತುಮಕೂರು ಜಿಲ್ಲಾ ಕಾರ್ಮಿಕ ಇಲಾಖೆಯ ಕಛೇರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿ, ಅಸಂಘಟಿತ ಕಾರ್ಮಿಕರ ವಲಯದಿಂದ ಮಹಿಳಾ ಆಟೋಚಾಲಕಿಯಾದ ಸುಮಾರವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜಾವತಿ ರವರು ಮಾತನಾಡಿ ಸುಮಾರವರು ಒಬ್ಬ ಹೆಣ್ಣು ಮಗಳಾಗಿ ನಿರ್ಭಯದಿಂದ ಆಟೋ ಓಡಿಸುತ್ತಾ ತಮ್ಮ ಕುಟುಂಬವನ್ನು ನಿರ್ವಹಣೆ ಮಾಡುತ್ತಿರುವುದು ತುಂಬಾ ಸಂತೋಷಕರ ವಿಷಯವೆಂದು ಹೇಳಿದರಲ್ಲದೇ ಇವರು ಅಸಂಖ್ಯಾತ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ತಿಳಿಸಿದರು. ಕಾರ್ಮಿಕ ಇಲಾಖೆಯ ಕೆ.ತೇಜಾವತಿ, ವೆಂಕಟೇಶ ಬಾಬು ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.