ತುಮಕೂರು ನಗರದಲ್ಲಿರುವ ಹಲವಾರು ವರ್ಷಗಳ ಇತಿಹಾಸವಿರುವ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬಂದಿದ್ದು ಹಲವಾರು ಸಾಧನೆಗೆ ಈ ಕಾಲೇಜು ಹೆಸರು ವಾಸಿಯಾಗಿದೆ ಇಂತಹದರಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಯಾವುದೇ ವರ್ಗಾವಣೆಯಿಲ್ಲದೇ ಒಂದೆ ಕಡೆ ಇರುವ ಉಪನ್ಯಾಸಕ ಹೆಚ್.ಎಮ್.ಸದಾಶಿವಯ್ಯ ಅವರು ಹಲವಾರು ಅವ್ಯವಹಾರಗಳಲ್ಲಿ ತೊಡಗಿ ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರ ಕೊಡಮಾಡುವ ಎನ್.ಸಿ.ಇ.ಆರ್.ಟಿ ಪುಸ್ತಕವನ್ನು ಅತ್ಯಂತ ಸರಳೀಕರಣಗೊಳಿಸಿ ಪ್ರಥಮ, ದ್ವಿತಿಯ ಪಿಯು ವಿದ್ಯಾರ್ಥಿಗಳಿಗೆ ಪುಸ್ತಕವೊಂದನ್ನು ರಚಿಸಿ ಮಾರಾಟ ಮಾಡಿ ಸರ್ಕಾರಕ್ಕೆ ವಂಚಿಸುತ್ತಿರುವ ವಿರುದ್ದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ, ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಕನ್ನಡಪರ ಸಂಘಟನೆಯ ಮುಖಂಡರು ಉಪನ್ಯಾಸಕರ ವಿರುದ್ಧ ಸೂಕ್ತ ಕ್ರಮವಹಿಸಿ ವರ್ಗಾವಣೆ ಮಾಡುವಂತೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಂಘಟನೆಯ ರಾಜ್ಯಾಧ್ಯಕ್ಷ ಕನ್ನಡ ಪ್ರಕಾಶ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರ ನೀಡಿರುವ ಪಠ್ಯಪುಸ್ತಕವನ್ನು ನಕಲು ಮಾಡಿ ಅದರಲ್ಲಿರುವ ವಿಷಯ ವಸ್ತು, ಸಿಲೆಬಸ್ ಸರಿ ಇಲ್ಲ ಆದಪ್ರಯುಕ್ತ ಸ್ವಯಂ ನಾನೇ ತಯಾರಿಸಿರುವ ಹೊಸ ಪುಸ್ತಕವನ್ನು ನನ್ನಿಂದಲೇ ಕೊಂಡು ಓದುವಂತೆ ವಿದ್ಯಾರ್ಥಿಗಳಿಗೆ ಒತ್ತಾಯ ಮಾಡಿ ಕಳೆದ 20 ವರ್ಷಗಳಿಂದ ಪ್ರತಿಷ್ಠಿತ ಸರ್ಕಾರಿ ಕಾಲೇಜಿನಲ್ಲಿ ಉಳಿದುಕೊಂಡು ರಾಜಕೀಯ ಪ್ರಭಾವಿ ವ್ಯಕ್ತಿಗಳ ಹೆಸರು ಬಳಸಿಕೊಂಡು ಪಠ್ಯಪುಸ್ತಕ ಮತ್ತು ಡೈಜೆಸ್ಟನ್ನ ರಚಿಸಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಓದುವಂತೆ ಒತ್ತಾಯ ಮಾಡುತ್ತಿರುವುದಲ್ಲದೇ, ಸ್ಪೆಷಲ್ ಕ್ಲಾಸ್ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ಪಾಠ ಮಾಡುವುದು ಸೇರಿದಂತೆ ಇತರೆ ಚಟುವಟಿಕೆಗಳನ್ನು ನಡೆಸುತ್ತಿರುವ ಇವರು ರಿಯಲ್ ಎಸ್ಟೇಟ್, ಚೀಟಿ ವ್ಯವಹಾರ, ಬಡ್ಡಿ ವ್ಯವಹಾರ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿದರು.
ಇವರು ಕಾಲೇಜು ಸಮಯಕ್ಕೆ ಸರಿಯಾಗಿ ಆಗಮಿಸದೆ, ಲೇಟ್ ಆಗಿ ಆಗಮಿಸುವುದು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ನಂತರ ಟೀ ಅಂಗಡಿ ಸೇರಿದಂತೆ ಇತರೆ ಕಡೆಗಳಿಗೆ ತೆರಳಿ ಕಾಲೇಜಿನ ಆಂತರಿಕ ವಿಚಾರಗಳನ್ನ ಚರ್ಚಿಸುತ್ತಾ ಕಾಲಹರಣ ಮಾಡಿ ಸಿಬ್ಬಂದಿಗಳನ್ನು ಎದುರಿಸಿ ಬೆದರಿಸಿ ನನಗೆ ಯಾರು ಏನು ಮಾಡುವರು ಎಂಬುದಾಗಿ ವರ್ತಿಸುತ್ತಿರುವ ಈ ಉಪನ್ಯಾಸಕರ ಪಾಠವನ್ನ ಕೇಳಲು ವಿದ್ಯಾರ್ಥಿಗಳು ಹಿಂಜರಿಯುತ್ತಿದ್ದು ಇಂತಹ ಅಸಂಬದ್ಧ ನಡವಳಿಕೆಯ ದರ್ಪತನದ ಉಪನ್ಯಾಸಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು ಜಿಲ್ಲಾಧಿಕಾರಿಗಳು ಈ ಕೂಡಲೇ ತಂಡವೊoದನ್ನು ರಚನೆ ಮಾಡಿ ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.