ಹೊಟೇಲ್ವೊಂದರಲ್ಲಿ ೨೦೨೩ರ ಏಪ್ರಿಲ್ ೦೨ರಂದು ನಡೆಯುವ ಶೋಷಿತರ ಸಂಕಲ್ಪ ಸಮಾವೇಶದ ಅಂಗವಾಗಿ ಆಯೋಜಿಸಿದ್ದ ಶೋಷಿತ ಸಮುದಾಯಗಳ ಎಲ್ಲಾ ವರ್ಗಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ಪ್ರಜಾತಂತ್ರದ ಹೆಸರಿನಲ್ಲಿ ಪ್ರಜಾಪ್ರಭುತ್ವವನ್ನು ಅಲ್ಲಗಳೆಯುವ,ಶೋಷಿತರ ಶಕ್ತಿಯಾ ಗಿರುವ ಸಂವಿಧಾನವನ್ನು ಬುಡಮೇಲು ಮಾಡುವ ಪ್ರಕ್ರಿಯೆಯ ವಿರುದ್ದದ ಹೋರಾಟವಲ್ಲದೆ,ಇದೊಂದು ರಾಜಕೀಯ ದಿಕ್ಸೂಚಿಯಾಗಲಿದೆ ಎಂದರು.
ದೇವರಾಜ ಅರಸು ಕಾಲದಲ್ಲಿ ಶೋಷಿತ ಸಮುದಾಯಗಳಿಗೆ ಸಿಕ್ಕ ರಾಜಕೀಯ ಪ್ರಾತಿನಿಧ್ಯ, ಆನಂತರದ ರಾಜಕಾರಣಿಗಳ ಆಡಳಿತದಲ್ಲಿ ಕಾಣದಾಗಿದೆ.ದಲಿತರ ಹಕ್ಕುಗಳನ್ನು ಕಸಿಯಲಾಗುತ್ತಿದೆ.ಅಲ್ಪಸಂಖ್ಯಾತರನ್ನು ಅನುಮಾನಿಸಿ,ಅವಮಾನಿಸ ಲಾಗುತ್ತಿದೆ.ಸಿದ್ದರಾಮಯ್ಯ ಕಾಲದಲ್ಲಿ ಒಂದಿಷ್ಟು ಅವಕಾಶಗಳು ದೊರೆತರೂ ಒಳಮೀಸಲಾತಿ ವರ್ಗೀಕರಣಕ್ಕೆ ಮುಂದಾಗದೆ, ಕಾಂತರಾಜು ಅವರ ಆಯೋಗದ ಸಾಮಾಜಿಕ,ಅರ್ಥಿಕ, ಶೈಕ್ಷಣಿಕ ವರದಿಯನ್ನು ಜಾರಿಗೆ ಬಿಡುಗಡೆಗೊಳಿಸದೇ ಹಿಂದೇಟು ಹಾಕಿದ್ದು ಒಂದು ರೀತಿಯ ಅಸಮಾಧಾನವಿದ್ದರೂ,ಶೋಷಿತರು, ಸಂವಿಧಾನದ ರಕ್ಷಣೆಗೆ ದ್ವನಿ ಎತ್ತಿರುವ ಸಿದ್ದರಾಮಯ್ಯ ಜಾತಿವಾದಿಗಳಿಗೆ,ಕೋಮುವಾದಿಗಳಿಗೆ ಶತೃವಾಗಿದ್ದು,ಅವರನ್ನು ದೈಹಿಕವಾಗಿ ರಕ್ಷಿಸುವ ಜೊತೆಗೆ,ರಾಜಕೀಯವಾಗಿಯೂ ಉಳಿಸಿಕೊಳ್ಳಬೇಕಾಗಿದೆ.ಈ ನಿಟ್ಟಿನಲ್ಲಿ ಏಪ್ರಿಲ್ ೦೨ರ ಸಮಾವೇಶಕ್ಕೆ ಎಲ್ಲಾ ಶೋಷಿತ ಸಮುದಾಯಗಳು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಬೇಕೆಂದು ಮಾವಳ್ಳಿ ಶಂಕರ್ ಕರೆ ನೀಡಿದರು.
ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚAದ್ರಪ್ಪ ಮಾತನಾಡಿ,ದೇವರಾಜ ಅರಸು ನಂತರ ಎಲ್ಲಾ ರಾಜಕೀಯ ಪಕ್ಷಗಳು ಶೋಷಿತ ಸಮುದಾಯಗಳನ್ನು ಕಡೆಗಣಿಸಿವೆ.ಇದರ ಭಾಗವಾಗಿ ರಾಜಕೀಯ ಪ್ರಾತಿನಿಧ್ಯವೇ ಇಲ್ಲದಂತಾಗಿದೆ.ಇದರ ಜೊತೆಗೆ ಕೇಂದ್ರ ಸರಕಾರ ಹಂತ ಹಂತವಾಗಿ ಶೋಷಿತ ಸಮುದಾಯಗಳಿಗೆ ನೀಡುತ್ತಿದ್ದ ಸವಲತ್ತುಗಳಲ್ಲಿ ಕೆಲವನ್ನು ಕಡಿತ ಮಾಡಿದ್ದರೆ, ಕೆಲವನ್ನು ರದ್ದು ಪಡಿಸಿವೆ.ಆದರೆ ಅರ್ಥಿಕ ಹಿಂದುಳಿದವರಿಗೆ ಶೇ೧೦ ರ ಮೀಸಲಾತಿ ನೀಡಿ, ಮೀಸಲಾತಿಯ ಆಶಯವನ್ನೇ ಬುಡಮೇಲು ಮಾಡಲಾಗುತ್ತಿದೆ.ಸಂವಿಧಾನದ ರಕ್ಷಣೆಯ ಜೊತೆಗೆ, ಶೋಷಿತ ಸಮುದಾಯಗಳು ರಾಜಕೀಯ ಆಸ್ಥಿತ್ವ ಕಂಡುಕೊಳ್ಳುವ ನಿಟ್ಟಿನಲ್ಲಿ ಬಿಡಿ ಬಿಡಿಯಾಗಿ ಹೋರಾಟ ಆರಂಭಿಸಿರುವ ಎಲ್ಲಾ ಶೋಷಿತ ಸಮುದಾಯಗಳು ಒಗ್ಗೂಡಿ, ಒಂದು ಸೂರಿನಡಿಯಲ್ಲಿ ಹೋರಾಟ ಆರಂಭಿಸಲು ಶೋಷಿತ ಸಮುದಾಯಗಳ ಮಹಾ ಒಕ್ಕೂಟವನ್ನು ಹುಟ್ಟು ಹಾಕಲಾಗಿದೆ.ಈಗಾಗಲೇ ಐದಾರು ಸುತ್ತಿನ ಮಾತುಕತೆ ನಡೆದಿದೆ.ಇದರ ಮುಂದುವರೆದ ಭಾಗವಾಗಿ ಏಪ್ರಿಲ್ ೦೨ರ ಶೋಷಿತರ ಸಂಕಲ್ಪ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈಧಾನದಲ್ಲಿ ಆಯೋಜಿಸಿದ್ದು,೩-೪ ಲಕ್ಷ ಜನರು ಸೇರುವ ನಿರೀಕ್ಷೆಯಿದೆ.ಎಲ್ಲರೂ ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕೆಂಬುದು ನಮ್ಮ ಮನವಿಯಾಗಿದೆ ಎಂದರು.
ವಕೀಲ ಆನಂತನಾಯಕ್ ಪ್ರಾಸ್ಥಾವಿಕವಾಗಿ ಮಾತನಾಡಿ,ಪರಿಶಿಷ್ಟ ಜಾತಿಯ ೧೦೧, ಪರಿಶಿಷ್ಟ ಪಂಗಡದ ೫೨ ಮತ್ತು ಹಿಂದುಳಿದ ವರ್ಗಗಳ ೧೯೭ ಜಾತಿಗಳು ಒಟ್ಟಾಗಿ ಸೇರಿದಂತೆ ರಾಜ್ಯದ ಶೇ೯೦ಕ್ಕಿಂತಲೂ ಹೆಚ್ಚು ಜನಸಂಖ್ಯೆಯಾಗಲಿದೆ. ಆದರೆ ರಾಜಕೀಯ ಪ್ರಾತಿನಿಧ್ಯ ಮಾತ್ರ ಇಲ್ಲದಂತಾಗಿದೆ.ಸೋಷಿಯಲ್ ಜಸ್ಟೀಸ್ ಎಂಬುದು ದಿನದಿಂದ ದಿನಕ್ಕೆ ಅರ್ಥ ಕಳೆದು ಕೊಳ್ಳುತ್ತಿದೆ.ಸರಕಾರದ ಉದ್ಯಮಗಳು ಖಾಸಗೀಕರಣಗೊಳ್ಳುವ ಮೂಲಕ ಮೀಸಲಾತಿ ನಿರಾಕರಿಸಲಾಗುತ್ತಿದೆ. ಪ್ರತಿಯೊಂದ ಕ್ಕೂ ಕೇಶವಕೃಪದಿಂದ ಆದೇಶ ಬರಬೇಕಾಗಿದೆ. ಇದರ ವಿರುದ್ದ ನಾವೆಲ್ಲರೂ ಒಗ್ಗೂಡುವ ಅಗತ್ಯವಿದೆ.ಈ ನಿಟ್ಟಿನಲ್ಲಿ ಏಪ್ರಿಲ್ ೦೨ರ ಶೋಷಿತರ ಸಂಕಲ್ಪ ಸಮಾವೇಶ ಒಂದು ವೇದಿಕೆಯಾಗಲಿದೆ ಎಂದರು.
ಸಭೆಯಲ್ಲಿ ಮುಖಂಡರಾದ ಹಿಂದುಳಿದ ಸಮುದಾಯಗಳ ಒಕ್ಕೂಟದ ಧನಿಯಕುಮಾರ್,ಕೆಂಪರಾಜು,ದಲಿತ ಮುಖಂಡ ಕೊಟ್ಟ ಶಂಕರ್,ಟಿ.ಡಿ.ಗೋಪಾಲ್,ವೆAಕಟರಾಮಯ್ಯ,ಆರ್.ರಾಮಕೃಷ್ಣಪ್ಪ, ರಂಗಾನಾಯ್ಕ್, ಜಿ.ಕೆ.ನಾಗಣ್ಣ,ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಿಂಗದಹಳ್ಳಿ ರಾಜಕುಮಾರ್, ಲಕ್ಷಿö್ಮನಾರಾಯಣ್,ಆರೀಫ್ವುಲ್ಲಾ,ಶ್ರೀನಿವಾಸ್, ಟಿ.ಸಿ.ರಾಮಯ್ಯ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಶೋಷಿತರ ಸಂಕಲ್ಪ ಸಮಾವೇಶದ ಅಂಗವಾಗಿ ಶೋಷಿತ ಸಮುದಾಯಗಳ ಮುಖಂಡರ ಪೂರ್ವಭಾವಿ ಸಭೆ
2 Comments
2 Comments
Namma Jana Nayaka,
Namma Jana Nayaka,