ಕಲಬುರಗಿ:ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ
ಕಲಬುರಗಿ: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ನಿನ್ನೆ ರಾತ್ರಿ ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಕ್ತಂಪೂರ ಬಡಾವಣೆ ಬಾಲಾಜಿ ಮಂದಿರ ಹತ್ತಿರ ನಡೆದಿದೆ.
44 ವರ್ಷ ವಯಸ್ಸಿನ ಮಕ್ತಂಪುರ ಬಡಾವಣೆಯ ನಿವಾಸಿ ಸುರೇಶ ತಂದೆ ಬಸವರಾಜ ಹಂಚೆ ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿ ನಗರದ ಬಟ್ಟೆ ಬಜಾರನಲ್ಲಿ ಟೇಲರ್ ಅಂಗಡಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಹಾಗೂ ಮಕ್ತಂಪುರ ಗದ್ಗುಗೆ ಮಠದ ಹತ್ತಿರ ಸ್ವಂತ ಮನೆಯಲ್ಲಿ ಕಿರಣಾ ಅಂಗಡಿ ನಡೆಸುತ್ತಿದ್ದ ಎಂದು ಹೇಳಲಾಗಿದೆ.
ಸ್ಥಳಕ್ಕೆ ಡಿಸಿಪಿ ಕನಿಕಾ ಸಿಕ್ರಿವಾಲ್, ಬ್ರಹ್ಮಪೂರ ಠಾಣೆಯ ಇನ್ಚಾರ್ಜ ಪಿಐ ಸೋಮಲಿಂಗ ಕರದಳ್ಳಿ, ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ, ಇನ್ನು ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.