ತುಮಕೂರು: ಸೇವೆ ಖಾಯಮಾತಿ ಮತ್ತು ಸೇವಾ ಭದ್ರತೆಗೆ ಆಗ್ರಹಿಸಿ ಪ್ರತಿಭಟನಾ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಇಂದು ಪೊರಕೆ ಹಿಡಿದು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸ್ವಚ್ಛಗೊಳಿಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಅತಿಥಿ ಉಪನ್ಯಾಸಕರ ಪ್ರತಿಭಟನೆ ೨೦.ನೇ ದಿನಕ್ಕೆ ಕಾಲಿಟ್ಟಿದ್ದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪೊರಕ್ಕೆ ಹಿಡಿದು ಸರ್ಕಾರಿ ಕಚೇರಿಯ ಕಸ ಗುಡಿಸುವ ಮೂಲಕ ತಮ್ಮ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಅತಿಥಿ ಉಪನ್ಯಾಸಕರು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಧರ್ಮವೀರ.ಕೆ.ಎಚ್, ಮಾತನಾಡಿ ೨೦.ದಿನಗಳಿಂದ ಅತಿಥಿ ಉಪನ್ಯಾಸಕರು ರಾಜ್ಯಾದ್ಯಂತ ಬೀದಿಬದಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು ಸರ್ಕಾರ ಸ್ಪಂದಿಸದೆ, ವಿದ್ಯಾರ್ಥಿಗಳಿಗೂ ಅನ್ಯಾಯ ಮಾಡುತ್ತಾ, ನಮ್ಮ ನ್ಯಾಯಯುತ ಧ್ವನಿಗೂ ಅನ್ಯಾಯವೆಸಗುತಿದೆ ಸರ್ಕಾರ ಕಚೇರಿಯ ಸ್ವಚ್ಛ ಮಾಡುವ ಮೂಲಕ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಆಗ್ರಿಹಿಸುತ್ತಿದ್ದೇವೆ ಎಂದರು.
ಹತ್ತಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ, ಲಕ್ಷಾಂತರ ಮಕ್ಕಳ ಭವಿಷ್ಯವನ್ನು ರೂಪಿಸಿದ್ದೇವೆ, ಆದರೆ ನಮ್ಮ ಜೀವನಕೊಂದು ಭದ್ರತೆ ಇಲ್ಲದಂತಾಗಿ, ನಮ್ಮ ಭವಿಷ್ಯವೇ ಮಂಕು ಕವಿದೆ. ಎಷ್ಟೋ ಕುಟುಂಬಗಳು ಆರ್ಥಿಕ ಸಂಕಷ್ಟ ಸಿಲುಕಿವೆ, ಆದ್ದರಿಂದ ಕೂಡಲೇ ಕಾಯಾಮಾತಿಗೆ ಕ್ರಮ ಕೈಗೊಳ್ಳಬೇಕೆ. ಅತಿಥಿ ಉಪನ್ಯಾಸಕರ ಗೈರು ಹಾಜರಾಗುತ್ತಿದ್ದಿರುವುದರಿಂದ ರಾಜ್ಯಾದ್ಯಂತ ಓದುತ್ತಿರುವ ಲಕ್ಷಾಂತರ ಮಕ್ಕಳಿಗೆ ತರಗತಿಗಳು ನಡೆಯುತ್ತಿಲ್ಲ, ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿನ್ನಡೆಯಾಗುತ್ತಿದೆ, ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿಉಪನ್ಯಾಸಕರ ಬೇರೆ ಉದ್ಯೋಗಗಳಿಗೂ ಹೋಗಲು ಸಾಧ್ಯವಾಗುತ್ತಿಲ,ಸರ್ಕಾರಿ ನೇಮಕಾತಿಗೆ ನಿಗದಿ ಪಡಿಸಿದ ವಯೋಮಿತಿ ಮೀರಿರುವುದರಿಂದ ಕಾಯಾಮಾತಿಮಾಡಬೇಕೆಂದು ಒತ್ತಾಯಿಸಿದರು.