ಹಣಬಲ ಮತ್ತು ತೋಳ್ಬಲಕ್ಕೆ ಮನ್ನಣೆ
ಪರಿಶಿಷ್ಟರು ಮತ್ತು ಮಾದಿಗರ ಮೂಗಿಗೆ ತುಪ್ಪ ಸವರಿದ ಸರ್ಕಾರ
ತುಮಕೂರು ; ೨೦೦೬ರಿಂದ ಸಕ್ರಿಯ ಕಾರ್ಯಕರ್ತನಾಗಿ ಬಿಜೆಪಿಯ ಯುವ ಮೋರ್ಚಾದ ಉಪಾಧ್ಯಕ್ಷನಾಗಿ ಹಾಗೂ ಎಸ್ಸಿ ಮೋರ್ಚದ ಉಪಾಧ್ಯಕ್ಷನಾಗಿ ಮತ್ತು ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಎಸ್ಸಿ ಮೋರ್ಚಾದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೆ ಆದರೆ ಅವರ ಹಸಿ ಸುಳ್ಳು ಗಳಿಗೆ ಮತ್ತು ಜನಪರ ಕಾಳಜಿ ಇಲ್ಲದ ಕಾರ್ಯಕ್ರಮಗಳು ಆದರೂ ಇಂದಲ್ಲ ನಾಳೆ ಮನವರಿಕೆಯಾಗಿ ಸರ್ವ ಜನಾಂಗದ ಶಾಂತಿಯ ತೋಟದಂತಿರುವ ಭಾರತ ದೇಶದ ಏಕತೆ ಮತ್ತು ಜಾತ್ಯತೀತ ನಿಲುವಾಗಿ ಬದಲಾಗಬಹುದೆಂಬ ಆಶಾಭಾವದೊಂದಿಗೆ ಅಲ್ಲಿ ಕಾರ್ಯ ನಿರ್ವಹಿಸುತಿದ್ದೆ.
ಮಧುಗಿರಿ ಸಂಘಟನಾತ್ಮಕ ಜಿಲ್ಲೆ ಆದ ಮೇಲೆ ಮಧುಗಿರಿಗೆ ಬಂದ ಪಕ್ಷದ ಎಲ್ಲಾ ಮುಖಂಡರುಗಳು ಹಾಗೂ ಉಸ್ತುವಾರಿಗಳು ಒಂದು ಸಂಘಟನಾತ್ಮಕವಾಗಿ ಯಾರು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಒತ್ತು ಕೊಡುವರು ಸಮಯ ಕೊಡುವರು ಅವರಿಗೆಸಂಘಟನಾತ್ಮಕ ಜಿಲ್ಲೆಯಲ್ಲಿ ಬಿಜೆಪಿಯನ್ನು ಬೆಳೆಸುವ ಸಂಬAಧ ಸ್ಥಳೀಯ ಕಾರ್ಯಕರ್ತರಿಗೆ ಗುರುತಿಸಿ ಅಥವಾ ಹಿಂದೆ ದುಡಿದವರನ್ನು ಗುರುತಿಸಿ ಮುಂಬರುವ ವಿಧಾನ ಸಭೆಗೆ ಚುಣವಣೆಗೆ ಟಿಕೆಟ್ ಕೊಡಲಾಗುವುದು ಎಂಬುದಾಗಿ ಹೇಳುತ್ತಿದರು.
ಆದರೆ ಕಾಲ ಕಳೆದಂತೆ ಹಣ ಹೊಂದಿರುವವರು ಯಾಕೆ ? ಪಕ್ಷ ಸಂಘಟನೆಯ ಪಕ್ಷದ ಯಾವುದೇ ಸಿದ್ಧಾಂತ ತಿಳಿಯದಂತಹ ವ್ಯಕ್ತಿಗಳಿಗೆ ಮಧುಗಿರಿ ಮತ್ತು ಕೊರಟಗೆರೆಯಲ್ಲಿ ಬಿಜೆಪಿ ಟಿಕೆಟ್ ನೀಡಿತು. ನಾನು ಸಹ ಆಕಾಂಕ್ಷಿಯಾಗಿದ್ದೆ ನಮ್ಮ ತಂದೆಯ ಗಂಗಹನುಮಯ್ಯ ಮಾಜಿ ಶಾಸಕರು ಅವರಿಗೆ ವಯಸ್ಸಿನ ಮಿತಿ ಟಿಕೆಟ್ ಕೊಡುವಲ್ಲಿ ಮಾನದಂಡವಾಗಿದ್ದರೆ ನನ್ನನ್ನು ಪರಿಗಣಿಸಿ ಎಂದು ಪಕ್ಷಕ್ಕೆ ಮನವಿ ಮಾಡಿದ್ದೆನು.
ಆದರೆ ಎಲ್ಲಾ ಕಡೆಯೂ ಪಕ್ಷ ವಯಸ್ಸನ್ನು ಲೆಕ್ಕಿಸದೆ ಟಿಕೆಟ್ ನೀಡಿದೆ .ಇಲ್ಲಿ ಮಾತ್ರ ಪಕ್ಷದ ಮಾನದಂಡವನ್ನು ಗಾಳಿಗೆ ತೂರಿದೆ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ೩ ಬಾರಿ ಪರಾಭವಗೊಂಡAತ ಬಿಜೆಪಿ ಅಭ್ಯರ್ಥಿಗೆ ಪದೇ ಪದೇ ಸ್ಪರ್ಧಿಸಲು ಅವಕಾಶ ನೀಡಿದೆ. ೨೦ ವರ್ಷಗಳು ಸತತ ಬಿಜೆಪಿಯಲ್ಲಿ ದುಡಿದರೂ ಯಾವುದೇ ಒಂದು ನಿಗಮ ಮಂಡಳಿಗಳಿಗೆ ಸದಸ್ಯನನ್ನಾಗಿಯೂ ಸಹ ನೇಮಿಸಲಿಲ್ಲ.
ಮಧುಗಿರಿ ಸಂಘಟನಾತ್ಮಕ ಜಿಲ್ಲೆ ಆದಾದ ಮೇಲೆ ಪಕ್ಷ ಸಂಘಟನೆಗೆÀ ಒತ್ತು ಕೊಟ್ಟು ಪಕ್ಷವನ್ನು ಮುನ್ನಡೆಗೆ ತರುವಲ್ಲಿ ಶ್ರಮಿಸಿದ್ದೆ ಆದರೆ ಅದ್ಯಾವುದನ್ನು ಮನಗಾಣದೆ ಏಕಾಏಕಿ ತೇಜೋವಧೆಗೊಳಿಸುವಂತಹ ಹಾಗೂ ಆತ್ಮಗೌರವವನ್ನು ಕುಗ್ಗಿಸುವಂತಹ ಸಂದರ್ಭಗಳು ಗೋಚರಿಸಿದ ಕಾರಣ ನಾನು ನನ್ನ ಭಾರತೀಯ ಜನತಾÀ ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಎಸ್ಸಿ ಮೋರ್ಚಾದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ರಾಜೀನಾಮೆ ಪತ್ರವನ್ನು ಜಿಲ್ಲಾಧ್ಯಕ್ಷರಿಗೆ ರವಾನಿಸಿದ್ದೇನೆ. ಹಾಗೂ ಕಾಂಗ್ರೆಸ್ನ ತತ್ವ ಸಿದ್ದಾಂತಕ್ಕೆ ಮತ್ತು ಜಾತ್ಯಾತೀತ ನಿಲುವಿಗೆ ಬದ್ದನಾಗಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಮಾಜಿ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಾ|| ಜಿ.ಪರಮೇಶ್ವರ್ರವರ ನೇತೃತ್ವದಲ್ಲಿ ಕಾಂಗ್ರೆಸ್ಗೆ ಸೇರ್ಪಡೆ
ಹಣಬಲ ಮತ್ತು ತೋಳ್ಬಲಕ್ಕೆ ಮನ್ನಣೆ ಪರಿಶಿಷ್ಟರು ಮತ್ತು ಮಾದಿಗರ ಮೂಗಿಗೆ ತುಪ್ಪ ಸವರಿದ ಸರ್ಕಾರ

Leave a comment
Leave a comment


