ತುಮಕೂರು : ನಗರದ ಎಂ.ಜಿ.ರಸ್ತೆಯಲ್ಲಿರುವ ಬಾಲ ಭವನದಲ್ಲಿ ಕ.ರ.ವೇ. (ನಾರಾಯಣ ಗೌಡರ ಬಣ) ವತಿಯಿಂದ ತುಮಕೂರು ಜಿಲ್ಲಾ ಘಟಕದ ಕಾರ್ಯಕರ್ತರ ಸಮಾವೇಶವನ್ನು ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡರವರ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜ್ಯಾಧ್ಯಕ್ಷರು ಮಾತನಾಡುತ್ತಾ ತುಮಕೂರು ಜಿಲ್ಲೆಯಲ್ಲಿ ಈ ಸಮಾವೇಶ ಹಮ್ಮಿಕೊಂಡಿರುವುದು ನನಗೆ ಅತ್ಯಂತ ಖುಷಿ ತಂದಿದೆ ಏಕೆಂದರೆ ಕಲ್ಪತರು ನಾಡು ತುಮಕೂರು ಜಿಲ್ಲೆಯ ನಮ್ಮ ಕಾರ್ಯಕರ್ತರು ಅತ್ಯಂತ ಶಿಸ್ತುಬದ್ಧವಾಗಿ ಗಡಿಯಲ್ಲಿ ಸೈನಿಕರು ನಮ್ಮ ದೇಶವನ್ನು ಯಾವ ರೀತಿ ಶಿಸ್ತು ಬದ್ಧವಾಗಿ ಕಾಪಾಡಿಕೊಂಡು ಬರುತ್ತಿದ್ದಾರೋ ಅವರ ಆದರ್ಶಗಳಿಂದ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಕ್ಕೂ ಖುಷಿ ತಂದಿರುವ ವಿಚಾರ, ಏಕೆಂದರೆ ಸೈನಿಕರಲ್ಲಿರುವ ಬದ್ಧತೆ, ನಿಷ್ಠೆ, ಶಿಸ್ತು ಇಂದು ನಮ್ಮ ಕಾರ್ಯಕರ್ತರಲ್ಲಿ ನಾನು ಕಾಣುತ್ತಿದ್ದೇನೆ ಸೈನಿಕರು ರಾಷ್ಟçದ ಉಳಿವಿಗಾಗಿ ಹೇಗೆ ಪ್ರತಿನಿತ್ಯ ದುಡಿಯುತ್ತಿದ್ದಾರೋ, ಅದೇ ರೀತಿ ನಮ್ಮ ಕಾರ್ಯಕರ್ತರು ರಾಜ್ಯದ ಪ್ರಗತಿ, ರಾಜ್ಯದ ರಕ್ಷಣೆ, ಕನ್ನಡದ ಭಾಷೆ, ನೆಲ, ಗಡಿ, ಬದುಕು, ಕೆಲಸದ, ಜಲದ ಬಗ್ಗೆ ಶಿಸ್ತಿನಿಂದ ಅನೇಕ ಸಮಸ್ಯೆಗಳ ಬಗ್ಗೆ ನಿಸ್ವಾರ್ಥ ಹೋರಾಟವನ್ನು ಮಾಡುತ್ತಾ ತಾಯ್ನಾಡಿನ ಸೇವೆ ಮಾಡಿಕೊಂಡು ಬರುತ್ತಿದ್ದಾರೆ ಎಂದರು.