ತುಮಕೂರು: ಪ್ರತಿಯೊಬ್ಬ ನಾಗರೀಕನಿಗೂ ಜಾತಿ ಧರ್ಮ ಜನಾಂಗ ಭಾಷೆ ಪ್ರಾಂತೀಯತೆ ಯಾವುದೇ ತಾರತಮ್ವಿಲ್ಲದೆ ಪ್ರತಿಯೊಬ್ಬನಿಗೂ ನ್ಯಾಯ ಘನತೆ ಹಕ್ಕು ಸ್ವಾತಂತ್ರ÷್ಯ ಅವಕಾಶ ಕಲ್ಪಿಸಿದ ವಿಶ್ವಶ್ರೇಷ್ಠ ಸಂವಿಧಾನ ಜಾರಿಯಾಗುವ ಮೂಲಕ ವಿಶ್ವಗುರುವಾಗಲು ನಾಂದಿ ಹಾಡಲಾಯಿತು ಎಂದು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ತಿಳಿಸಿದರು.
ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಇಂದ ೭೫ ನೇ ಗಣರಾಜ್ಯೋತ್ಸವ ( ಸಂವಿಧಾನ ಅನುಷ್ಠಾನದ ದಿನೋತ್ಸವವನ್ನು ) ಮಹಾನಗರ ಪಾಲಿಕೆಯ ಆವರಣದಲ್ಲಿ ಆಚರಿಸಿ ಮಾತನಾಡಿದ ಅವರು, ಜನವರಿ ೨೬ ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನ ಈ ದಿನದಿಂದ ಭಾರತದ ಪ್ರಜಾಪ್ರಭುತ್ವ ದೇಶವಾಯಿತು ನವ ಭಾರತವಾಯಿತು. ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ನೀಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಠಿಯಿಂದಲೇ ಸದೃಢ ಭಾರತ ನಿರ್ಮಾಣವಾಗಿದೆ ಎಂದರು.
ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವನ್ನು ರಚಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರು ಶೋಷಿತ, ದಲಿತ ಸಮುದಾಯಗಳ ದಾರಿದೀಪವಾಗಿದ್ದು, ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಅವರು ಎಳೆದು ತಂದ ಸಮಾನತೆಯ ರಥವನ್ನು ಮುಂದಿನ ಪೀಳಿಗೆಗೆ ಜೋಪಾನವಾಗಿ ತಲುಪಿಸುವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.
ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷರಾದ ಎಸ್ ರಾಮಚಂದ್ರರಾವ್ ಮಾತನಾಡಿ ಅಂಬೇಡ್ಕರ್ ದೇಶದ ಎಲ್ಲ ವರ್ಗಗಳ ಆಶಯವನ್ನು ಸಂವಿಧಾನದ ಮೂಲಕ ಕಾಪಾಡಿದ್ದು, ತಲೆತಲಾಂತರದಿAದ ಅಕ್ಷರ ಜ್ಞಾನದಿಂದ ದೂರ ಉಳಿದಿದ್ದ ಶೋಷಿತ ಸಮುದಾಯಗಳಿಗೆ ಅಕ್ಷರ ಜ್ಞಾನವನ್ನು ನೀಡಲು ಸಂವಿಧಾನದ ರಕ್ಷಣೆ ನೀಡಿದ್ದರಿಂದಲೇ ಇಂದು ಶೋಷಿತ, ದಲಿತ ಸಮುದಾಯಗಳು ಅಕ್ಷರ ಜ್ಞಾನಗಳು ಸಮಾಜದ ಮುನ್ನೆಲೆಗೆ ಬರುವಂತಾಗಿದೆ ಎಂದು ಸ್ಮರಿಸಿದರು.
ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ೨೦೨೪ ನೇ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರಾದ ಶಬ್ಬೀರ್ ಅಹ್ಮದ್, ಹಿಂದುಳಿದ ವರ್ಗಗಳ ಜಿಲ್ಲಾ ಗೌರವಾಧ್ಯಕ್ಷರಾದ ಎನ್ ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷರಾದ ಇಂದ್ರ ಕುಮಾರ್ ಡಿ ಕೆ, ಜಿಲ್ಲಾ ಗೌರವಾಧ್ಯಕ್ಷರಾದ ಗುರುಪ್ರಸಾದ್ ಟಿ.ಆರ್, ಸಂಘಟನಾ ಕಾರ್ಯದರ್ಶಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ನಾಗರಾಜು ದಿಬ್ಬುರ್, ಯುವ ಘಟಕದ ಜಿಲ್ಲಾ ಕಾರ್ಯ ಅಧ್ಯಕ್ಷರಾದ ನಾರಾಯಣ್ ಎಸ್, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರಫೀಕ್ ಅಹಮದ್, ಜಿಲ್ಲಾ ಕಾರ್ಯದರ್ಧ್ಯಕ್ಷರಾದ ಗೋವಿಂದರಾಜು , ಯುವ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ್ ಎನ್. ವಿ, ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷರಾದ ಶಿವಣ್ಣ, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರಾದ ಕಿರಣ್ ವೈಎಸ್, ತಾಲೂಕು ಗೌರವಾಧ್ಯಕ್ಷರಾದ ಗಂಗಾಧರ್ ಜಿ ಆರ್, ಗುಬ್ಬಿ ತಾಲೂಕ್ ಅಧ್ಯಕ್ಷರಾದ ಶಿವಮೂರ್ತಿ ಕೆ ಎಸ್ ಜಿಲ್ಲಾ ಪದಾಧಿಕಾರಿಗಳಾದ ನಾಗರಾಜು, ಗುರು ಶಂಕರ್, ಚೆಲುವರಾಜು, ಹೆಗ್ಗೆರೆ ಕೃಷ್ಣಪ್ಪ, ಚಲವಾದಿ ಶೇಖರ್, ಮಧು, ಎ ಏ ಸಮೀರ್, ಶಿವಣ್ಣ, ನಾಗರಾಜು, ದರ್ಶನ್ ಇನ್ನು ಮುಂತಾದವರು ಉಪಸ್ಥಿತರಿದ್ದರು.
ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಇಂದ 75 ನೇ ಗಣರಾಜ್ಯೋತ್ಸವ
Leave a comment
Leave a comment