ಅಫಜಲಪೂರ : ತಾಲೂಕಿನಲ್ಲಿ ರಸ್ತೆ ಸುಧಾರಣೆಗೆ ದಿಟ್ಟ ಹೆಜ್ಜೆ ಇಟ್ಟಿರುವ ಶಾಸಕ ಎಂ ವಾಯ ಪಾಟೀಲ್ ಅವರು ಸುಮಾರು 6 ಕೋಟಿ 70 ಲಕ್ಷ ರೂಪಾಯಿ ವೆಚ್ಚದಲ್ಲಿ ಬೋಸಗಾ ಗ್ರಾಮಕ್ಕೆ ರಸ್ತೆ ನಿರ್ಮಿಸಲು ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಕಾಮಗಾರಿ ಶಂಕು ಸ್ಥಾಪನೆ ನೆರವೇರಿಸಿ, ಮಾತನಾಡಿದ ಅವರು ರಸ್ತೆಗಳ ಸುಧಾರಣೆ ದೇಶದ ಸುಧಾರಣೆಯಾಗಿದೆ, ನಮ್ಮ ತಾಲೂಕಿನ ಪ್ರತಿ ಹಳ್ಳಿಗಳಿಗೆ ಉತ್ತಮ ರಸ್ತೆ ನಿರ್ಮಾಣ ಮಾಡಬೇಕು ಎಂಬುದು ನನ್ನ ಬಯಕೆ ಯಾಗಿದ್ದು ಹಾಗಾಗಿ ರಸ್ತೆ ನಿರ್ಮಾಣಕ್ಕೆ ಬಹಳಷ್ಟು ಆದ್ಯತೆ ನೀಡುತಿದ್ದನೇ, ಕಾಮಗಾರಿ ಕಾರ್ಯ ಉತ್ತವಾಗಿ ನಡೆಯಲು ಗ್ರಾಮಸ್ಥರ ಸಹಕಾರ ಮುಖ್ಯ ಎಂದರು.ಈ ಗ್ರಾಮದಲ್ಲಿ ಮಕ್ಕಳಿಗೆ ಓದಲು ಸ್ಥಳಾವಕಾಶ ಇದ್ರೆ ಗ್ರಂಥಾಲಯ ಕೂಡ ನಿರ್ಮಿಸಲು ಬದ್ದ ಎಂದರು. ಈ ಸಂದರ್ಭದಲ್ಲಿ ಪ್ರಭು ದೇವತ್ಕಲ,ಸಿದ್ದಣ್ಣ ಗೌಡ ಪಾಟೀಲ್, ಸಿದ್ದಾರ್ಥ ಬಸರಿಗಿಡ,ಉಮೇಶ ಅಲೆಗಾಂವ,ಸರ್ವಜ್ಞ ಪೂಜಾರಿ,ಸುಭಾಸ ದೇಗನಾಳ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.



