ಕಟ್ಟಡ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಶಾಸಕರಗಳ ಮೂಲಕ ಸರ್ಕಾರಕ್ಕೆ ಮನವಿ
ಇಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ) ಸಿಐಟಿಯು ರಾಜ್ಯ ಸಮಿತಿ ಕರೆಯಂತೆ ತುಮಕೂರು ಜಿಲ್ಲೆಯ ತುಮಕೂರು ನಗರ ಕ್ಷೇತ್ರ, ಮಧುಗಿರಿ ಮತ್ತು ಪಾವಗಡ ತಾಲೂಕಿನ ಶಾಸಕರು ಗಳ ಕಛೇರಿಗೆ ಹೋಗಿ ಬೇಡಿಕೆ ಪಟ್ಟಿಯನ್ನು ನೀಡಲಾಗಿದೆ. ಕಾರ್ಮಿಕರ ಬಾಕಿ ಇರುವ ಶೈಕ್ಷಣಿಕ ಅರ್ಜಿಗಳಿಗೆ ಹಣ ವರ್ಗಾವಣೆ ಆಗಬೇಕು, ಆರೋಗ್ಯ ಸಂಜೀವಿನಿ ಜಾರಿಗೆ ಆಗ್ರಹಿಸಿ, ಮನೆ ನಿರ್ಮಾಣಕ್ಕೆ ೫ ಲಕ್ಷ ರೂಪಾಯಿ ಸಹಾಯಧನ ನೀಡುವಂತೆ, ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಬೇಕೆಂದು, ಪಿಂಚಣಿಗೆ ಸಂಬAಧಿಸಿದAತೆ ಫಲಾನುಭವಿಯು ಅರ್ಜಿ ಸಲ್ಲಿಸಲು ಕನಿಷ್ಟ ಒಂದು ವರ್ಷ ಅವಧಿಯನ್ನು ನೀಡಬೇಕೆಂದು ಸೇರಿದಂತೆ ೧೧ ಬೇಡಿಕೆಗಳನ್ನು ಒಳಗೊಂಡು ಮನವಿಯಲ್ಲಿ ಒತ್ತಾಯಿಸಲಾಗಿದೆ.
ತುಮಕೂರು ನಗರ ಕ್ಷೇತ್ರದ ಬಿಜೆಪಿ ಶಾಸಕರಾದ ಶ್ರೀ ಜಿ.ಬಿ. ಜ್ಯೋತಿಗಣೇಶ್ ಬೇಡಿಕೆ ಪಟ್ಟಿಯನ್ನು ಸ್ವೀಕರಿಸಿ ಕಟ್ಟಡ ಕಾರ್ಮಿಕರಿಗೆ ಇರುವ ಸೌಲಭ್ಯಗಳ ಜಾರಿಗೆ ಮಿನಿಟ್ಸ್ ಕಳುಹಿಸಿ ಕೊಟ್ಟು ಸಹಕಾರ ನೀಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಬಿ. ಉಮೇಶ್, ಗೌರವಾಧ್ಯಕ್ಷ ಟಿ.ಎಂ. ಗೋವಿಂದರಾಜು, ಖಜಾಂಚಿ ಇಬ್ರಾಹಿಂ ಖಲೀಲ್, ತಾಲ್ಲೂಕು ಅಧ್ಯಕ್ಷ ಶಂಕರಪ್ಪ, ಉತ್ತರ ಘಟಕದ ಸಂಚಾಲಕ ಮಲ್ಲೇಶ್ ಮುಖಂಡರಾದ ನಾಗರಾಜು ಸಿಐಟಿಯುನ ಇಂತು ಉಪಸ್ಥಿತರಿದ್ದರು.
ಮಧುಗಿರಿ ಕ್ಷೇತ್ರ ಸಹಕಾರಿ ಸಚಿವರಾದ ಶ್ರೀ ಕೆ.ಎನ್. ರಾಜಣ್ಣನವರ ಅನುಪಸ್ಥಿತಿಯಲ್ಲಿ ಕಛೇರಿ ಸಿಬ್ಬಂದಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಬೆಟ್ಟಪ್ಪ, ಕಾರ್ಯದರ್ಶಿ ಅಶ್ವತ್ಥಪ್ಪ, ಗೌರವಾಧ್ಯಕ್ಷ ವೆಂಕಟಾಚಲ, ಮುಖಂಡರಾದ ಹನುಮಂತರಾಯಪ್ಪ, ಶ್ರೀನಿವಾಸ್, ಗೋಪಾಲ ನಾಯಕ, ಮುಂತಾದವರು ಉಪಸ್ಥಿತರಿದ್ದರು.
ಪಾವಗಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀ ಹೆಚ್.ವಿ. ವೆಂಕಟೇಶ್ ರವರ ಅನುಪಸ್ಥಿತಿಯಲ್ಲಿ ಶಾಸಕರ ಆಪ್ತ ಸಹಾಯಕ ನಾಗರಾಜು ರವರಿಗೆ ಮನವಿ ನೀಡಲಾಯಿತು. ತಾಲ್ಲೂಕು ಅಧ್ಯಕ್ಷ ರಾಮಾಂಜಿ, ಕಾರ್ಯದರ್ಶಿ ರಾಮಾಂಜಿನಪ್ಪ ವಿ. ಖಜಾಂಚಿ ಮಮತ ಮುಖಂಡರಾದ ಮದ್ಲೇಟಪ್ಪ, ಸಂಜೀವಮ್ಮ ಉಪಸ್ಥಿತರಿದ್ದರು.


