ಗೃಹ ಜ್ಯೋತಿ ಯೋಜನೆ
ತುಮಕೂರು(ಕ.ವಾ.)ಜೂ.೨೨: ಗೃಹಜ್ಯೋತಿ ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಇದು ಕರ್ನಾಟಕದ ಪ್ರತಿ ಗೃಹ ಬಳಕೆದಾರರಿಗೆ ೨೦೦ ಯೂನಿಟ್ ಒಳಗೊಂಡAತೆ ಉಚಿತ ವಿದ್ಯುತ್ ಒದಗಿಸುವ ಯೋಜನೆಯಾಗಿರುತ್ತದೆ.
ಈ ಯೋಜನೆಯನ್ನು ಪಡೆಯಲು ಪ್ರತಿ ಗೃಹ ಬಳಕೆದಾರರು ಮೊದಲಿಗೆ ಸೇವಾ ಸಿಂಧು ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಬೇಕು.
ಜುಲೈ ೨೦೨೩ರಲ್ಲಿ ಬಳಸಿದ ವಿದ್ಯುತ್ ಬಳಕೆಯನ್ನು ಆಗಸ್ಟ್ ೨೦೨೩ರಲ್ಲಿ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ ಯೋಜನೆಯನ್ನು ಜಾರಿಗೊಳಿಸಲಾಗುವುದು. ಎಲ್ಲಾ ಗೃಹ ಬಳಕೆ ಗ್ರಾಹಕರಿಗೆ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
Leave a comment
Leave a comment