ಬಿಜೆಪಿ ರೈತಮೋರ್ಚಾ ವತಿಯಿಂದ ಕರ್ನಾಟಕವನ್ನು ವಿಷಮುಕ್ತವಾಗಿಸುವ ನಿಟ್ಟಿನಲ್ಲಿ ಸುಭಾಷ್ ಪಾಳೆಕಾರ್ ಅವರ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರ ಹಾಗೂ ಗೋ ಧಾನ ಕಾರ್ಯಕ್ರಮವನ್ನು ಸಿದ್ದಗಂಗಾ ಮಠದ ಶ್ರೀಗೋಸಲ ಸಿದ್ದೇಶ್ವರ ಸಮುದಾಯಭವನದಲ್ಲಿ ಅಕ್ಟೋಬರ್ ೦೩ರಂದು ಆಯೋಜಿಸಲಾಗಿದೆ ಎಂದು ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ರೈತರ ಆದಾಯ ದ್ವಿಗುಣಗೊಳ್ಳಬೇಕು.ರೈತರ ಅರ್ಥಿಕ ಸ್ಥಿತಿ ಸುಧಾರಣೆ ಯಾಗುವುದರ ಜೊತೆಗೆ, ಜನತೆಗೆ ವಿಷಮುಕ್ತ ಆಹಾರ ದೊರೆಯಬೇಕೆಂಬ ನಿಟ್ಟಿನಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಮಾಹಿತಿ ನೀಡುವುದಲ್ಲದೆ, ನೈಸರ್ಗಿಕ ಕೃಷಿಗೆ ಅಗತ್ಯವಾದ ನಾಟಿ ಹಸುವಿನ ಸಗಣಿ ಮತ್ತು ಗಂಜಲಕ್ಕಾಗಿ ಆಯ್ದ ೫೦ ಜನ ಕೃಷಿಕರಿಗೆ ಒಂದು ನಾಟಿ ಹಸು ಮತ್ತು ಹೋರಿ ಕರುವನ್ನು ಧಾನವಾಗಿ ನೀಡಲಾಗುತ್ತಿದೆ ಎಂದರು.
ರೈತ ಅದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ತೆಗೆದುಕೊಂಡಿರುವ ಉಪಕ್ರಮಗಳಲ್ಲಿ ಇದು ಒಂದಾಗಿದ್ದು,ರೈತರ ಬದುಕು ಹಸನಾಗಬೇಕು,ದೇಶದ ಜಿಡಿಗೆ ಕೃಷಿಯ ಪಾಲು ಹೆಚ್ಚಾಗಬೇಕು ಎಂಬ ನಿಟ್ಟಿನಲ್ಲಿ ಕೃಷಿ ಬಂಡವಾಳವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ರೈತ ಉತ್ಪಾಧಕ ಸಂಘಗಳ ರಚನೆ,ಆ ಮೂಲಕ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಮತ್ತು ಮಾರಾಟದ ಮೂಲಕ ರೈತನನ್ನು ಅರ್ಥಿಕ ಸಂಕಷ್ಟದಿAದ ಪಾರು ಮಾಡುವುದು ಬಿಜೆಪಿಯ ಉದ್ದೇಶವಾಗಿದೆ.ಹಾಗಾಗಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ, ಸಾವಯವ ಕೃಷಿ ಸೇರಿದಂತೆ ಹಲವಾರು ಸಾಂಪ್ರದಾಯಕ ಕೃಷಿಗಳನ್ನು ಪುನರ್ ಪರಿಚಯಿಸುವ ಕೆಲಸವನ್ನು ಬಿಜೆಪಿ ಪಕ್ಷ ಮಾಡುತ್ತಿದೆ ಎಂದು ಎಸ್.ಶಿವಪ್ರಸಾದ್ ನುಡಿದರು.
ಸಿದ್ದಗಂಗಾ ಮಠದ ಶ್ರೀಗೋಸಲ ಸಿದ್ದೇಶ್ವರರ ಸಭಾಭವನದಲ್ಲಿ ಆಯೋಜಿಸಿರುವ ಸುಭಾಷ್ ಪಾಳೇಕಾರ್ ಶೂನ್ಯ ಬಂಡವಾಳ ಕೃಷಿ ಪದ್ದತಿಯ ಕಾರ್ಯಾಗಾರವನ್ನು ಸಿದ್ದಗಂಗಾ ಮಠಾಧ್ಯಕ್ಷ ಶ್ರೀಶ್ರೀಸಿದ್ದಲಿಂಗಸ್ವಾಮೀಜಿ ಉದ್ಘಾಟಿಸಲಿದ್ದು, ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಬಿ.ಸುರೇಶಗೌಡ, ಜೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಪ್ರಯೋಜನ ಪಡೆದುಕೊಳ್ಳು ವಂತೆ ಮನವಿ ಮಾಡಿದರು.
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರ
Leave a comment
Leave a comment