ತುಮಕೂರು:ಕಾರ್ಮಸ್ ಓರಿಯೆಂಟೆಡ್ ವಿಷಯಗಳನ್ನು ಓದಿದ ಪದವಿಧರರಿಗೆ ಪ್ರಪಂಚದಾದ್ಯAತ ಕೆಲಸದ ಅವಕಾಶಗಳಿದ್ದು, ಇದನ್ನು ಬಳಸಿಕೊಳ್ಳಲು ವಿದ್ಯಾವಾಹಿನಿ ಸಂಸ್ಥೆಯ ಬಿ.ಕಾಂ ಪದವಿಧರರು ಮುಂದಾಗುವAತೆ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ರಾಜ್ಯಾಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ವಿದ್ಯಾವಾಹಿನಿ ಕಾಲೇಜಿನಲ್ಲಿ ಯುಕ್ತ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರ,ತುಮಕೂರು ವಿವಿ ಹಾಗೂ ವಿದ್ಯಾವಾಹಿನಿ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಕೌಶಲ್ಯಪಥ ಅರಿವು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ವಾಣಿಜ್ಯ ವಿಷಯಗಳನ್ನು ಓದಿದವರು ರೂಪಿಸುವ ಸ್ಟಾಂಡ್ ಅಫ್ ಮತ್ತು ಸ್ಟಾರ್ಟ್ ಅಫ್ಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಸರಕಾರಗಳು ಸಹ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿವೆ ಎಂದರು.
ಒAದು ಕಾಲೇಜಿನಲ್ಲಿ ಕಲಿಯುತ್ತಿರುವ ಮಕ್ಕಳಿಗೆ ವರ್ಲ್ಡ್ ವೈಡ್ ಅವಕಾಶಗಳು ದೊರೆಯುತ್ತಿವೆ ಎಂದರೆ, ಆದರ ಹಿಂದಿನ ಶಕ್ತಿ, ಆ ಕಾಲೇಜಿನ ಬೋಧಕ,ಬೋಧಕೇತರ ಹಾಗೂ ಮ್ಯಾನೇಜ್ಮೆಂಟ್ ಸಿಬ್ಬಂದಿಯ ಪರಿಶ್ರಮ.ಈ ನಿಟ್ಟಿನಲ್ಲಿ ವಿದ್ಯಾವಾಹಿನಿ ಮೇಲ್ಮಟ್ಟದಲ್ಲಿದೆ.ವಿದ್ಯಾರ್ಥಿಗಲು ತಾವು ಓದುತ್ತಿರುವ ಕೋರ್ಸು,ಅದಕ್ಕೆ ಜಾಗಮಟ್ಟದಲ್ಲಿ ಇರುವ ಅವಕಾಶಗಳು,ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸರಕಾರದಿಂದ ಸಿಗುವ ಧನ ಸಹಾಯ,ಅಕಾಶಗಳು ಸೇರಿದಂತೆ ಹಲವು ವಿಚಾಗಳನ್ನು ಮಕ್ಕಳು ತಿಳಿದುಕೊಂಡು ಮುಂದುವರೆಯುವುದು ಒಳ್ಳೆಯದು ಎಂದು ಮುರುಳೀಧರ ಹಾಲಪ್ಪ ನುಡಿದರು.
ಬ್ಯಾಂಕಿAಗ್ ಕ್ಷೇತ್ರದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಸರಾಗವಾಗಿ ಮತ್ತು ವೇಗವಾಗಿ ಉತ್ತರ ಬರೆಯಲು ಅನುಕೂಲವಾಗುವಂತೆ ಪ್ರಶ್ನೆಗಳು ಕನ್ನಡದಲ್ಲಿಯೇ ಇರುವಂತೆ ಮಾಡುವ ಉದ್ದೇಶದಿಂದ ಪ್ರಶ್ನೆ ಪತ್ರಿಕೆ ಕನ್ನಡ ಭಾಷೆಯಲ್ಲಿರಲು ಒತ್ತಾಯಿಸಿ,ಒಂದ ಅಭಿಯಾನವನ್ನೇ ಆರಂಭಿಸಲಾಗುತ್ತಿದೆ.ಲಕ್ಷಾAತರ ವಿದ್ಯಾರ್ಥಿಗಳ ಸಿಗ್ನೇಚರ್ ಕ್ಯಾಂಪನ್ ಮಾಡಿ,ರಾಷ್ಟçಪತಿಗಳಿಗೆ ಕಳುಹಿಸುವ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ತರಲು ಪ್ರಯತ್ನಿಸಲಾಗುವುದು ಎಂದು ಮುರುಳೀಧರ್ ಹಾಲಪ್ಪ ನುಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿ ನರಸಿಂಹಮೂರ್ತಿ ಮಾತನಾಡಿ,ವಿದ್ಯಾರ್ಥಿಗಳಿಗೆ ಸ್ಕೀಲ್ ಜೊತೆಗೆ, ವಿಲ್ ಪವರ ಕೂಡ ಮುಖ್ಯ.ಐನ್ಸ್ಟೀನ್,ವಾಸ್ಕೋಡಿಗಾಮ ಸೇರಿದಂತೆ ಹೊಸ ಸಂಶೋಧನೆಗಳ ನಡೆಸಿದವರಲ್ಲಿ ಕೌಶಲ್ಯ ಮತ್ತು ಅತ್ಮಸ್ಥೆöÊರ್ಯ ಎರಡು ತುಂಬಿದ್ದರಿAದಲೇ ಭಾರತ ವಿಶ್ವಕ್ಕೆ ಪರಿಚಯವಾಗಲು ಸಾಧ್ಯವಾಯಿತು.ಬಡತನ ಎಂಬುದು ಸಾಧನೆಗೆ ಶಾಪವಲ್ಲ. ಅದನ್ನು ವರವಾಗಿಸುವ ಕೌಶಲ್ಯ ತಿಳಿದರೆ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾವಾಹಿನಿ ಸಂಸ್ಥೆಯ ಕಾರ್ಯದರ್ಶಿ ಎನ್.ಪಿ.ಪ್ರದೀಪಕುಮಾರ್ ಮಾತನಾಡಿ,ಕೌಶಲ್ಯ ತರಬೇತಿ ಎಂಬುದು ಕೇವಲ ರಾಜಕೀಯ ಆಶ್ವಾಸನೆಯ ರೀತಿ ಇರಬಾರದು.ಅದರಿಂದ ಮಕ್ಕಳಿಗೆ ಹೆಚ್ಚಿನ ಉಪಯೋಗ ವಾಗಬೇಕು.ಆಗ ಮಾತ್ರ ಮಕ್ಕಳು ತಮ್ಮ ದೈನಂದಿನ ಕೆಲಸದ ನಡುವೆಯೂ ಈ ತರಗತಿ ಕೇಳಿದಕ್ಕೆ ಸಾರ್ಥಕವಾಗುತ್ತದೆ. ಇಂತಹ ಕಾರ್ಯಕ್ರಮಗಳಿಗೆ ನಮ್ಮ ಬೆಂಬಲ ಇದ್ದೇ ಇದೆ.ವಿದ್ಯಾರ್ಥಿಗೆ ಪ್ರತಿ ನಿಮಿಷವೂ ಉಪಯೋಗವಾಗಬೇಕು. ಆ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಬಯಸುತ್ತೇವೆ ಎಂದರು.
ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ್ ಹಾಲಪ್ಪ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಅವರ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸಿ, ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಉದ್ಯೋಗಾಧಿಕಾರಿ ತಿಪ್ಪೇಸ್ವಾಮಿ, ಯುಕ್ತ ಕೌಶಲ್ಯಾಭಿವೃದ್ದಿ ತರಬೇತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದಲೀಪ್,ಕಾರ್ಯಕ್ರಮ ಆಯೋಜಕರಾದ ದೀಪಿಕಾ ವೆಂಕಟೇಶ್, ವಿದ್ಯಾವಾಹಿನಿ ಕೋಶಾಧಿಕಾರಿ ಸೌಜನ್ಯ, ಯುಕ್ತ
ವಿದ್ಯಾವಾಹಿನಿ ಕಾಲೇಜಿನಲ್ಲಿ ಯುಕ್ತ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರ
Leave a comment
Leave a comment