ಕೊರಟಗೆರೆ ಮಾ. 15:-ನಿಮ್ಮ ಸಾಮ್ಯಾಜ್ಯದ ಸೃಷ್ಟಿಕರ್ತರು ನೀವೇ ಆಗಿರುತ್ತೀರಿ ಇದನ್ನು ನೀವು ಸರಿಯಾಗಿ ಬಳಸಿಕೊಂಡು ಪ್ರಗತಿಯನ್ನು ಸಾಧಿಸಬೇಕು ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದರು.
ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಕುಂಚಿಟಿಗ ಮಹಾಂಸ್ಥಾನ ಮಠದಲ್ಲಿ ಸೋಮವಾರ 3 ನೇ ಸಂಸ್ಕಾರ ಶಿಭಿರವನ್ನು ಉದ್ಘಾಟಿಸಿ ಮಾತನಾಡಿದರು.
ನಮಗೆ ಗೊತ್ತಿಲ್ಲದೇ ಸಮಾಜದಲ್ಲಿ ಹಲವು ತಪ್ಪುಗಳನ್ನು ಮಾಡುತ್ತೇವೆ, ತಪ್ಪುದಾರಿಗಳಲ್ಲಿ ನಡೆಯುತ್ತೇವೆ ನಮಗೆ ಸರಿದಾರಿಯಲ್ಲಿ ನಡೆಸಿ ನಮಗೆ ಸಂಸ್ಕಾರ ಕಲಿಸುವವರು ಗುರುಗಳು ಈ ನಿಟ್ಟಿನಲ್ಲಿ ಬದುಕಲಿನಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ಹೇಳಿದರು.
ಭವಿಷ್ಯ ಭಾರತದ ನಿರ್ಮಾಣವನ್ನು ಅನಾಧಿಕಾಲದಿಂದಲೂ ಮಾಡಲಾಗುತ್ತಿದೆ ಇದಕ್ಕೆ ಇದಕ್ಕೆ ನಮ್ಮಲ್ಲಿನ ಮಠ ಮತ್ತು ಧರ್ಮಗುರುಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ, ಮಕ್ಕಳು ಕೆಟ್ಟ ಸಂಸ್ಕಾರಗಳಿಂದ ದೂರುವಿದ್ದು ಉತ್ತಮ ನಡೆ ಕಡೆ ಸಂಚರಿಸಬೇಕು ಎಂದು ಕರೆ ನೀಡಿದರು.
ದೇಶದಲ್ಲಿ ವೃದ್ದಾಶ್ರಮಗಳು ಮತ್ತು ಅನಾಥಾಶ್ರಮಗಳು ಹೆಚ್ಚಾಗುತ್ತಿವೆ ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿನ ಸಂಸ್ಕಾರದ ಕೊರತೆಯೇ ಕಾರಣ ಎಂದು ಕುಂಚಿಟಿಗ ಮಹಾಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥಸ್ವಾಮೀಜಿ ತಿಳಿಸಿದರು.
ಮಕ್ಕಳಿಗೆ ಪೋಷಕರು ಮತ್ತು ಕುಟುಂಬದೊಂದಗೆ ಸಂಪರ್ಕ ಕಡಿಮೆಯಾಗುತ್ತಿದೆ ಜೊತೆಗೆ ಯಾತ್ರಿಕ ಬದುಕು ಮತ್ತು ಒತ್ತಡದ ಬದುಕು ಎಲ್ಲವನ್ನೂ ಮತ್ತು ಎಲ್ಲರನ್ನೂ ದೂರ ಮಾಡುತ್ತಿದೆ ಈ ನಿಟ್ಟಿನಲ್ಲಿ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ನಮ್ಮ ಸಂಸ್ಕಾರವನ್ನು ಮಕ್ಕಳಿಗೆ ತಿಳಿಸುವ ಹಿನ್ನೆಲೆಯಲ್ಲಿ ಮಠದಲ್ಲಿ ಕಳೆದ 3 ವರ್ಷದಿಂದ ಸಂಸ್ಕಾರ ಶಿಭಿರವನ್ನು ಹಮ್ಮಿಕೊಂಡು ಬರುತ್ತಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಕೃತ ವಿಶ್ವವಿದ್ಯಾನಿಲಯದ ನಿವೃತ್ತ ಸಿಂಡಿಕೇಟ್ ಸದಸ್ಯ ಡಾ.ಸಿ ನಂಜುಂಡಯ್ಯ ಮಾತನಾಡಿ ಡಾ. ಹನುಮಂತನಾಥ ಶ್ರೀಗಳು ಸ್ವತಃ ಸಂಸ್ಕೃತ ಪಂಡಿತರಾಗಿದ್ದಾರೆ, 3 ನೇ ಸಂಸ್ಕಾರ ಶಿಭಿರಕ್ಕೆ ಶ್ರೀಗಳು ಉತ್ತಮ ರೀತಿಯಾಗಿ ವ್ಯವಸ್ಥೆ ಮಾಡಿದ್ದು ಈ ರೀತಿಯ ಕಾರ್ಯಕ್ರಮ ಇತರೆ ಮಠಗಳಿಗೆ ಮಾದರಿಯಾಗಲಿದೆ ಎಂದು ಹೇಳಿದರು.
ನಿಮ್ಮ ಸಾಮ್ಯಾಜ್ಯದ ಸೃಷ್ಟಿಕರ್ತರು ನೀವೇ ಆಗಿರುತ್ತೀರಿ
Leave a comment
Leave a comment