ಯಶಸ್ ಅಕಾಡೆಮಿ ಈಗ ತುಮಕೂರಿನಲ್ಲಿ
ಯಶಸ್ ಅಕಾಡೆಮಿ ಬೆಂಗಳೂರು ಈಗ ತುಮಕೂರಿನಲ್ಲಿ ವಿಶೇಷ ಕಾರ್ಯಾಗಾರ
ಅನನ್ಯ ಕಾಲೇಜಿನ ಸಿ.ಎ. ಓರಿಯೇಟೇಷನ್ ಕುರಿತು ಕಾರ್ಯಾಗಾರ
ತುಮಕೂರು:
ವಿದ್ಯಾರ್ಥಿ ದಿಸೆಯಿಂದಲೇ ಡಾಕ್ಟರ್, ಇಂಜಿನಿಯರಿAಗ್ ಆಗಬೇಕೆಂದು ವಿದ್ಯಾರ್ಥಿಗಳ ಮನಸ್ಸಿಗೆ ಪೋಷಕರು ತುಂಬುತ್ತಾರೆ. ಅದಕ್ಕೆ ಲಕ್ಷಾಂತರ, ಕೋಟ್ಯಾಂತರ ಹಣ ವ್ಯಹಿಸುತ್ತಾರೆ. ಆದರೆ ಚಾರ್ಟರ್ಡ್ ಅಕೌಂಟೆAಟ್ ಕೋರ್ಸ್ ಇದರ ಬಗ್ಗೆ ಸಾಮಾನ್ಯವಾಗಿ, ಪೋಷಕರಿಗೆ, ಮಾಹಿತಿ ಜ್ಞಾನ ಇರುವುದಿಲ್ಲ. ಸಿ.ಎ. ಎಂಬುದು ಒಂದು ಉತ್ತಮ ವೃತ್ತಿಯಾಗಿದ್ದು ಇದಕ್ಕೆ ಎಂದಿಗೂ ಬೇಡಿಕೆ ಕಡಿಮೆಯಾಗಲು ಸಾಧ್ಯವಿಲ್ಲ. ಹಾಗೂ ಇದನ್ನು ಬಹಳ ಕಡಿಮೆ ಖರ್ಚಿನಲ್ಲಿ ಮುಗಿಸಬಹುದು. ಅಲ್ಲದೆ ಸಿ.ಎ. ಕೋರ್ಸ್ ಪಾಸ್ ಆಗುವುದು ಬಹಳ ಕಷ್ಟ ಎಂಬುದು ಸತ್ಯಕ್ಕೆ ದೂರವಾದ ಮಾತು ಸರಿಯಾದ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಪರಿಶ್ರಮವಿದ್ದಲ್ಲಿ ಸಿ.ಎ. ಪಾಸಾಗುವುದು ಸುಲಭ ಸಾಧ್ಯ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಮಾರ್ಗದರ್ಶನ ಸಲಹೆ, ಸೂಚನೆಗಳನ್ನು ಬೆಂಗಳೂರಿನ ಯಶಸ್ ಅಕಾಡೆಮಿ ನೀಡುತ್ತಾ ಬಂದಿದೆ ಎಂದು ಚಾರ್ಟರ್ಡ್ ಅಕೌಂಟೆAಟ್ ರಾಜವರ್ದನ್ರವರು ತಿಳಿಸಿದರು.
ನಗರದ ಅನನ್ಯ ಇನ್ಟಿ÷್ಸಟ್ಯೂಟ್ ಅಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ನ ವತಿಯಿಂದ ಯಶಸ್ ಅಕಾಡೆಮಿ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಸಿ.ಎ. ಓರಿಟೇಷನ್ ಕಾರ್ಯಾಗಾರವನ್ನು ಮೇ.೪ ರಂದು ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅನನ್ಯ ಸಂಸ್ಥೆಯ ಅಧ್ಯಕ್ಷರಾದ ಚಾರ್ಟರ್ಡ್ ಅಕೌಂಟೆAಟ್ ಎಸ್.ವಿಶ್ವನಾಥ್ರವರು ಮಾತನಾಡುತ್ತಾ ನಾವು ಸಿ.ಎ. ವ್ಯಾಸಂಗ ಮಾಡುವಾಗ ಸರಿಯಾದ ಮಾರ್ಗದರ್ಶನ ಇಲ್ಲದೇ ಹಾಗೂ ತುಮಕೂರು, ಬೆಂಗಳೂರಿನಲ್ಲಿ ಸೌಲಭ್ಯಗಳಿಲ್ಲದೆ ಚೆನೈನತ್ತ ಮುಖ ಮಾಡುತ್ತಿದ್ದೇವು. ಆದರೆ ಈಗ ವಿದ್ಯಾರ್ಥಿಗಳು ಸಿ.ಎ. ವ್ಯಾಸಂಗಕ್ಕೆ ದೂರದ ಊರುಗಳಿಗೆ ಹೋಗುವ ಅಗತ್ಯವಿಲ್ಲ. ತುಮಕೂರು ಮತ್ತು ತುಮಕೂರು ಗ್ರಾಮಾಂತರದ ವಿದ್ಯಾರ್ಥಿಗಳಿಗೆ ಅನುಕೂಲ ಸೃಷ್ಟಿಸುವ ದೃಷ್ಟಿಯಿಂದ ತುಮಕೂರಿನಲ್ಲೇ ಸುಸಜ್ಜಿತ ಸಿ.ಎ. ತರಗತಿಗಳನ್ನು ಪ್ರಾರಂಭಿಸಲಾಗಿದೆ. ಅಲ್ಲದೆ ಸಿ.ಎ. ಜೊತೆಗೆ ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣವನ್ನು ಮುಂದುವರಿಸಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.