ಪ್ರಸ್ತುತ ದಿನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯ ಮತ್ತು ಕ್ಲಾಸಿಕಲ್ ಲಿಟರೇಚರ್ ಎಂಬ ವಿಭಜನೆ ಮಸುಕಾಗುತ್ತಿರುವ ಈ ಕಾಲಘಟ್ಟದಲ್ಲಿ ಬರಹ ಒಂದು ಅಭಿವ್ಯಕ್ತಿ ಮಾಧ್ಯಮದಂತೆಯೇ ಕಲೆಗಾರಿಕೆಯೂ ಆಗಿದೆ ಎಂದು ಬರಹಗಾರ ಸಂಶೋಧಕ ಡಾ. ಡಿ.ಎನ್.ಯೊಗೀಶ್ವರಪ್ಪ ಅಭಿಪ್ರಾಯಪಟ್ಟರು.
ಅವರು ತುಮಕೂರು ನಗರದ ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಬರಹ ಕಲೆ ಎಂಬ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವ್ಯಾಪಕವಾದ ಓದು ಜೀವನವನ್ನು ಕುತೂಹಲದ ಕಣ್ಣಿನೊಂದಿಗೆ ಅಷ್ಟೇ ಸಹೃದಯ ಸಾಮಾಜಿಕ ಪ್ರಜ್ಞೆಯೊಂದಿಗೆ ನೋಡಬೇಕಾದ ಅಗತ್ಯವಿದೆ. ಬರಹಗಾರರು ಸಮಾಜದಲ್ಲಿಯೇ ಬದುಕಬೇಕಾಗಿರುವುದರಿಂದ ಸಮಾಜ ಅದರ ಆಗುಹೋಗುಗಳೇ ಅದರ ಮೂಲ ದ್ರವ್ಯ. ಬರೆಯಬೇಕೆಂಬ ಹಂಬಲ ನಮಗೆ ಇದ್ದರೂ ಅದರಲ್ಲಿ ವಿಷಯ ವೈವಿಧ್ಯತೆ ಇರಬೇಕು. ಅಗಾಧವಾದ ಓದು ಆಲೋಚನಾಶಕ್ತಿ ನಮ್ಮಲ್ಲಿನ ಪದಸಂಪತ್ತನ್ನು ಹೆಚ್ಚಿಸಿ ಬರವಣಿಗೆಗೆ ಪ್ರೇರಣೆ ನೀಡುತ್ತದೆ ಎಂದರು.