ಗಾಯಗಳು ನಾಟಕ ಪ್ರದರ್ಶನದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ
ಕನ್ನಡಪ್ರಭ ವಾರ್ತೆ, ತುಮಕೂರು
ನಾಟಕಗಳು ಜೀವಂತಿಕೆಯ ಸಂಕೇತ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಝೆನ್ ಟೀಮ್ ವತಿಯಿಂದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಪ್ರಕಾಶ್ ರೈ ಅರ್ಪಿಸಿದ ನಿರ್ದಿಗಂತ ತಂಡ ಅಭಿನಯಿಸಿದ `ಗಾಯಗಳು’ ನಾಟಕ ಪ್ರದರ್ಶನದಲ್ಲಿ ಮಾತನಾಡಿದರು.
ತುಮಕೂರು ಜಿಲ್ಲೆ ಯಾವತ್ತೂ ರಂಗಭೂಮಿಗೆ ಪ್ರೋತ್ಸಾಹ ಮಾಡುತ್ತಲೇ ಬಂದಿದೆ. ಗುಬ್ಬಿ ವೀರಣ್ಣ ಸೇರಿದಂತೆ ಹಲವಾರು ಮಂದಿ ರಂಗ ದಿಗ್ಗಜರು ಇದೇ ಜಿಲ್ಲೆಯವರಾಗಿದ್ದು ಪೌರಾಣಿಕ ನಾಟಕಗಳು ಇಲ್ಲಿ ನಿರಂತರವಾಗಿ ನಡೆಯುತ್ತಿರುವುದು ರಂಗಭೂಮಿ ಜೀವಂತವಾಗಿರುವುದಕ್ಕೆ ಸಾಕ್ಷಿ ಎಂದರು.
ಹೊಸ ಹೊಸ ರಂಗ ತಂಡಗಳನ್ನು ವಿಭಿನ್ನ ಕಥಾ ವಸ್ತುವನ್ನು ಆಯ್ಕೆ ಮಾಡಿಕೊಂಡು ಜನರ ಮುಂದೆ ಪ್ರದರ್ಶನ ನೀಡುತ್ತಿರುವುದು ಸಂತಸದ ವಿಷಯ. ರಂಗ ಸಜ್ಜಿಕೆ, ನಿರ್ದೇಶನ, ಕಥಾ ಆಯ್ಕೆ. ಹೀಗೆ ಬಹು ಆಯಾಮಗಳಲ್ಲಿ ಹೊಸ ನಿರ್ದೇಶಕರು ತೊಡಗಿಸಿಕೊಂಡಿರುವುದು ಖುಷಿಯ ವಿಚಾರ.
ತುಮಕೂರು ರಂಗಭೂಮಿ ಮೂಲಕ ಇಡೀ ರಾಜ್ಯ ಹಾಗೂ ಭಾರತವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲಿ ಎಂದು ಹಾರೈಸಿದರು. ವೃತ್ತಿನಿರತ, ಹವ್ಯಾಸಿ ಹೀಗೆ ಪ್ರತಿಯೊಬ್ಬ ರಂಗಕರ್ಮಿಯೂ ಕೂಡ ರಂಗಭೂಮಿಯನ್ನು ಬೆಳಸುತ್ತಲೇ ಬಂದಿದ್ದಾರೆ.
ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಕೂಡ ರಂಗಭೂಮಿ ಚಟುವಟಿಕೆಗಳು ನಡೆಯುತ್ತಿರುವುದು ಸಂತಸದ ವಿಷಯ. ಇದು ಮತ್ತಷ್ಟು ವಿಸ್ತಾರಗೊಳ್ಳಲಿ ಎಂದು ಇದೇ ಸಂದರ್ಭದಲ್ಲಿ ಅವರು ಆಶಿಸಿದರು.
ಈಗಾಗಲೇ ತುಮಕೂರಿನಲ್ಲಿ ನೀನಾಸಂ, ರಂಗಾಯಣ, ಸಾಣೆಹಳ್ಳಿ ಶಿವಸಂಚಾರ ಸೇರಿದಂತೆ ಪ್ರಮುಖ ರೆಪರ್ಟರಿಗಳು ಪ್ರದರ್ಶನ ಮಾಡಿ ಹೋಗಿದೆ. ಹಾಗೆಯೇ ರಾಷ್ಟಿçÃಯ ನಾಟಕ ಶಾಲೆಯ ಡ್ರಾಮಾಗಳು ಇಲ್ಲಿ ಪ್ರದರ್ಶನ ನೀಡಿರುವುದು ತುಮಕೂರು ರಂಗಭೂಮಿಗೆ ತನ್ನದೇ ಕೊಡುಗೆ ನೀಡುತ್ತಾ ಬಂದಿರುವ ದ್ಯೋತಕ ಎಂದರು.
ಗಾಯಗಳು ನಾಟಕ ಪ್ರದರ್ಶನ

Leave a comment
Leave a comment