ತುಮಕೂರು : ನಗರದ ಎಂ.ಜಿ.ರಸ್ತೆಯಲ್ಲಿರುವ ರಕ್ಷಣಾ ವೇದಿಕೆ ತುಮಕೂರು ಜಿಲ್ಲಾ ಮಹಿಳಾ ಘಟಕದ ವತಿಯಿಂದ ಇಂದು ವಿಶ್ವ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕ.ರ.ವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಉತ್ತಮ ಸ್ವಾಲಂಭಿಗಳಾಗಿ ಜೀವನ ನಡೆಸುತ್ತಿದ್ದಾರೆ, ನಿರ್ಭಯ, ನಿರ್ಭೀತಿಯಿಂದ ಓಡಾಡುತ್ತಿದ್ದಾರೆ, ನಮ್ಮ ಸಂಘಟನೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಹಿರಿಯದಾಗಿದ್ದು ಶ್ಲಾಘನೀಯ ಸಂಗತಿಯಾಗಿದೆ. ಅಲ್ಲದೇ ನಮ್ಮ ನಾಡು ನುಡಿ ರಕ್ಷಣೆಗೆ ಮಹಿಳೆಯರ ಕೊಡುಗೆ ಅಪಾರವಾದದ್ದು ಎಂದು ತಿಳಿಸಿದರು. ನಾನು ಇಂದು ನಮ್ಮ ಜಿಲ್ಲಾ ಮಹಿಳಾ ಘಟಕದ ನೆರವೇರಿಸಿರುವ ಮಹಿಳಾ ದಿನಾಚರಣೆಗೆ ಆಗಮಿಸಿರುವುದು ನನ್ನ ಸುದೈವ ಏಂದರು. ನಮ್ಮ ಮಹಿಳಾ ಘಟಕದ ವತಿಯಿಂದ ಜಿಲ್ಲೆಯಲ್ಲಿ ಹಲವಾರು ಹೋರಾಟಗಳು, ಜನಪರ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಇವರುಗಳು ಸದಾ ಜನಪರ ಕೆಲಸ ಮಾಡುತ್ತಾ ನಾಡು ನುಡಿ ರಕ್ಷಣೆಗಾಗಿ ಹೋರಾಡಲು ನಾನು ಸದಾ ಸಹಕಾರಿಯಾಗಿರುತ್ತೇನೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧ್ಯಕ್ಷರಾದ ಸುನೀತಾ ಮೂರ್ತಿರವರು ಮಾತನಾಡಿ ಇಂದಿನ ಹೆಣ್ಣುಮಕ್ಕಳು ಮನೆಯ ಕೆಲಸ ಕಾರ್ಯಗಳಿಗೆ ಸೀಮಿತವಾಗಿರದೇ ಸಾಮಾಜಿಕ ಜೀವನದಲ್ಲಿ ನಾವು ಪುರಷರಿಗೆ ಸಮವಾಗಿ ಕೆಲಸ ಮಾಡುತ್ತಿದ್ದೇವೆಂದು ಹಲವಾರು ರೀತಿಯಲ್ಲಿ ಸಾಬೀತು ಮಾಡಿದ್ದಾರೆ ಅದಕ್ಕೆ ನೈಜ ಉದಾಹರಣೆ ಇತ್ತೀಚೆಗೆ ಐಪಿಎಲ್ ನಲ್ಲಿ ಕರ್ನಾಟಕದ ಆರ್.ಸಿ.ಬಿ. ಮಹಿಳಾ ತಂಡದವರು ಐಪಿಎಲ್ ಚಾಂಪಿಯನ್ಗಳಾಗಿದ್ದು, ಅದೂ ಅಲ್ಲದೇ ಮಹಿಳಾ ಕ್ರಿಕೆಟ್, ಮಹಿಳಾ ಹಾಕಿ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿಯೂ ಸಹ ಮಹಿಳೆಯರ ಸಾಧನೆ ಅಗಮ್ಯವಾಗಿದೆ ಎಂದರಲ್ಲದೇ ಪ್ರಸ್ತುತದ ದಿನಗಳಲ್ಲಿ ಮಹಿಳೆಯರಿಗೆ ಸರ್ಕಾರ ವಿವಿಧ ಸೌಲಭ್ಯಗಳನ್ನು ನೀಡುವುದರ ಮೂಲಕ ಮತ್ತಷ್ಟು ಸಾಧನೆಗಳನ್ನು ಮಾಡಲು ಪ್ರೋತ್ಸಾಹ ನೀಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕ.ರ.ವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಸುನೀತಾ ಮೂರ್ತಿ, ರಾಜ್ಯ ಗೌರವ ಅಧ್ಯಕ್ಷರು ಹೇಮಲತಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಹನಾ ಶೇಖರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುಳಾ, ರಾಜ್ಯ ಸಂಚಾಲಕರು ಲಕ್ಷಿ÷್ಮ ಬೆಟ್ಟೇಗೌಡ, ಮಮತಾ ಗೌಡ, ದೀಪಾ ಪೂಜಾರಿ, ರಾಧ ಎಲ್.ಗೌಡ, ಮರೀಚೆನ್ನಮ್ಮ (ವಕೀಲರು) ಸೇರಿದಂತೆ ಇನ್ನಿತರೆ ಕ.ರ.ವೇ ಸದಸ್ಯರು ಭಾಗವಹಿಸಿದ್ದರು