ವಿಶ್ವ ಹಿರಿಯನಾಗರಿಕರ ದಿನಾಚರಣೆ,
ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ, “ ವಿಶ್ವ ಹಿರಿಯನಾಗರಿಕರ ದಿನಾಚರಣೆ ೨೦೨೩ ” ರ ಕಾರ್ಯಕ್ರಮವನ್ನು ಆಚರಿಸಲಾಯಿತು. ಸಮಾರಂಭದಲ್ಲಿ ಶ್ರೀಮತಿ ನೂರುನ್ನಿಸ., ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತುಮಕೂರು, ಶ್ರೀ ಪ್ರಭು.ಜಿ., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ತುಮಕೂರು ಮತ್ತು ಶ್ರೀ.ಎಂ.ಎಸ್.ಶ್ರೀಧರ್, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಡಾ|| ಎಂ.ರಮೇಶ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಕಲ್ಯಾಣಾಧಿಕಾರಿಗಳು, ಶ್ರೀಮತಿ ಬಾ.ಹಾ.ರಮಾಕುಮಾರಿ., ಅಧ್ಯಕ್ಷರು, ಜಿಲ್ಲಾನಿವೃತ್ತ ನೌಕರರ ಸಂಘ, ತುಮಕೂರು, ಶ್ರೀ.ಎಂ.ಜಿ.ತಿಮ್ಮಾರೆಡ್ಡಿ, ಕಾರ್ಯದರ್ಶಿಗಳು, ಜಿಲ್ಲಾ ಹಿರಿಯನಾಗರಿಕರ ಸಹಾಯವಾಣಿ ಕೇಂದ್ರ, ಶ್ರೀ ರಾಮೇಗೌಡ, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿಗಳು, ಶ್ರೀ ಟಿ.ಆರ್.ರೇವಣ್ಣ, ಹಿರಿಯ ಸ್ವಾತಂತ್ರ ಹೋರಾಟಗಾರರು ಮತ್ತು ಹಿರಿಯನಾಗರಿಕರ ಸ್ವಯಂಸೇವಾ ಸಂಸ್ಥೆಗಳ ಮುಖ್ಯಸ್ಥರು/ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
- ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯನಾಗರಿಕರಿಗೆ ಸನ್ಮಾನಿಸುವ ಮೂಲಕ ಗೌರವ ಸಮರ್ಪಿಸಲಾಯಿತು. ದಿನಾಂಕ: ೨೫.೦೯.೨೦೨೩ ರಂದು ಹಿರಿಯನಾಗರಿಕರಿಗೆ ಆಯೋಜಿಸಲಾಗಿದ್ದ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
- ಶ್ರೀಮತಿ ನೂರುನ್ನಿಸ., ಬಿ.ಎ, ಎಲ್.ಎಲ್.ಬಿ., ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತುಮಕೂರು ರವರು ಮಾತನಾಡಿ, ಹಿರಿಯನಾಗರಿಕರು ಶಕ್ತಿಯಿದ್ದಂತಹ ಸಮಯದಲ್ಲಿ ಗಳಿಸಿದ ಆದಾಯವನ್ನು ತಮ್ಮ ಸಂಬAಧಿಕರಿಗೆ ಮತ್ತು ಮಕ್ಕಳಿಗೆ ನೀಡದೇ ಕೊನೆಗಾಲದವರೆವಿಗೂ ಉಳಿಸಿಕೊಂಡಲ್ಲಿ, ಆಸ್ತಿಯ ಆಸೆಯಿಂದಾದರೂ ಮಕ್ಕಳು ಮತ್ತು ಸಂಬAಧಿಕರು ಸರಿಯಾದ ರೀತಿಯಲ್ಲಿ ನೋಡಿಕೊಳುತ್ತಾರೆ ಎಂಬ ಸಲಹೆಯನ್ನು ನೀಡಿದರು.
- ಕಾರ್ಯಕ್ರಮದಲ್ಲಿ, ಹಿರಿಯನಾಗರಿಕರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ, ಸನ್ಮಾನಿಸಿದ ಶ್ರೀ ಪ್ರಭು.ಜಿ., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ತುಮಕೂರು ಇವರು ಮಾತನಾಡುತ್ತಾ, ಹಿರಿಯನಾಗರಿಕರಿಗೆ ಸಂಬAಧಿಸಿದ ಇಲಾಖೆಗಳಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧ ಇಲಾಖೆ, ಕೆ.ಎಸ್.ಆರ್.ಟಿ.ಸಿ, ಕಂದಾಯ ಇಲಾಖೆ, ಹಿರಿಯನಾಗರಿಕರ ಸಬಲೀಕರಣ ಇಲಾಖೆಗಳ ಅಧಿಕಾರಿಗಳು, ಹಿರಿಯನಾಗರಿಕರಿಗೆ ತಲುಪಿಸಬೇಕಿರುವ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಜಿಲ್ಲೆಯ ಪ್ರತಿಯೊಬ್ಬ ಹಿರಿಯನಾಗರಿಕರಿಗೂ ತಲುಪಿಸಲು ಕ್ರಮವಹಿಸಬೇಕಿದೆ, ಮೇಲಿನ ಇಲಾಖೆಯ ಸೌಲಭ್ಯಗಳಾದ ಆಯುಷ್ಮಾನ್ ಭಾರತ್ ವಿಮಾ ಯೋಜನೆ, ಗೃಹಲಕ್ಷ್ಮೀ ಯೋಜನೆ, ಮಾಸಾಶನ ಮತ್ತು ಶಕ್ತಿ ಯೋಜನೆ, ರಿಯಾಯಿತಿ ಬಸ್ ಪ್ರಯಾಣ ಹೀಗೆ ಹಲವಾರು ಯೋಜನೆಗಳ ಪ್ರಯೋಜನವನ್ನು ಹಿರಿಯನಾಗರಿಕರು ಮುಂದೆ ಬರಬೇಕಿದೆ ಎಂದು ಕರೆ ಕೊಟ್ಟರು.