ತುಮಕೂರು: ಹೆಚ್ಚು ಸಂಕೀರ್ಣವಾದ ದಂತ ಚಿಕಿತ್ಸೆಗಳನ್ನು ಮಾಡಲು ವಿಶೇಷವಾಗಿ ತರಬೇತಿ ಪಡೆದಿರುವ ಪ್ರೊಸ್ಟೊಡಾಂಟಿಸ್ಟ್ ವೈದ್ಯರ ಸೇವೆ ಹಲ್ಲಿನ ಪುನರ್ನಿರ್ಮಾಣ ಅಥವಾ ಬದಲಿಸುವಂತಹ ವಿಶೇಷವಾದ ಚಿಕಿತ್ಸೆಯ ವೇಳೆ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಅಮರಿಕಾದ ಪೆನ್ಸಿಲ್ವೇನಿಯಾ ಬ್ಲೂಮ್ಬಗ್ ಕಾಮನ್ವೆಲ್ತ್ ವಿಶ್ವವಿದ್ಯಾಲಯ ದಂತ ತಜ್ಞೆ ಹಾಗೂ ಪ್ರಾಧ್ಯಾಪಕರಾದ ಡಾ. ಅಶ್ವಿನಿ ಕಾನಡೆ ಅಭಿಪ್ರಾಯಪಟ್ಟಿದ್ದಾರೆ.
ನಗರದ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರೋಸ್ಟೊಡಾಂಟಿಕ್ಸ್ ಕ್ರೌನ್ ಮತ್ತು ಬ್ರಿಡ್ಸ್ ವಿಭಾಗದಿಂದ ಏರ್ಪಡಿಸಲಾಗಿದ್ದ “ ವಯೋವೃದ್ದರ ಜೀವನದ ಗುಣಮಟ್ಟದ ಮೇಲೆ ದಂತ ಆರೋಗ್ಯದ ಪ್ರಭಾವ” ಕುರಿತು ಏರ್ಪಡಿಸಲಾಗಿದ್ದ ಸಂವಾದದಲ್ಲಿ ಅಮೇರಿಕಾದ ಪೆನ್ಸಿಲ್ವೇನಿಯಾ ಬ್ಲೂಮ್ಬಗ್ ಕಾಮನ್ವೆಲ್ತ್ ವಿಶ್ವವಿದ್ಯಾಲದಿಂದ ವೆಬಿನಾರ್ ಮೂಲಕ ಮಾತನಾಡಿದ ಅವರು, ದೈನಂದಿನ ಹಲ್ಲಿನ ಅಗತ್ಯಗಳಿಗೆ ಸಾಮಾನ್ಯ ದಂತವೈದ್ಯರು ಉತ್ತಮ ಆಯ್ಕೆಯಾಗಿದ್ದರೂ, ಹಲ್ಲಿನ ಪುನರ್ ರ್ನಿರ್ಮಾಣ ಅಥವಾ ಬದಲಿಸುವಂತಹ ವಿಶೇಷವಾದ ದಂತ ಚಿಕಿತ್ಸೆ, ಸಂರಕ್ಷಣೆ ಮತ್ತು ಸಂಕೀರ್ಣ ಚಿಕಿತ್ಸೆಗಳಿಗೆ ಪ್ರೊಸ್ಟೊಡಾಂಟಿಸ್ಟ್ ಆಯ್ಕೆ ಉತ್ತಮವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಅವರು ವಯಸ್ಕರ ಹಲ್ಲಿನ ಪರಿಣಾಮ ಹಾಗೂ ಗುಣಮಟ್ಟ ಕುರಿತು ಆನ್ಲೈನ್ ಮೂಲಕ ವಿವರಿಸಿದ ಅವರು, ಪ್ರಾಸ್ಟೋಡಾಂಟಿಸ್ಟ್ರು ಹಲ್ಲುಗಳನ್ನು ಬದಲಿಸುವುದರೊಂದಿಗೆ ಬಾಯಿಯ ಆರೋಗ್ಯ ಮತ್ತು ಅದರ ಕಾರ್ಯವನ್ನು ಸಂಪೂರ್ಣವಾಗಿ ಮರುಸ್ಥಾಪಿಸುತ್ತಾರೆ. ಅಲ್ಲದೆ ಹೆಚ್ಚು ಸಂಕೀರ್ಣವಾದ ಚಿಕಿತ್ಸೆಗಳನ್ನು ಮಾಡಲು ವಿಶೇಷವಾಗಿ ತರಬೇತಿ ಪಡೆದಿದ್ದಾರೆ ಎಂದರು.
ದAತ ಕಾಂತಿಯ ಸೌಂದರ್ಯ, ನಗು ಅಥವಾ ಹಲ್ಲುಗಳು ಅಂದ ಮುಖದ ಸೌಂದರ್ಯದ ಮೇಲೆ ಪ್ರಭಾವ ಬೀರುವುದರಿಂದ ಆರೋಗ್ಯಕರ ಬಾಯಿಯ ಸಂರಕ್ಷಣೆಯ ಬಗ್ಗೆ ಕಾಳಜಿ ಹೊಂದಿ ಪ್ರಾಸ್ಟೊಡಾಂಟಿಸ್ಟ್ಗಳು ನೈಸರ್ಗಿಕ ಹಲ್ಲುಗಳನ್ನು ಸರಿಪಡಿಸಲು ಮತ್ತು ಕಾಣೆಯಾದ ಹಲ್ಲುಗಳನ್ನು ಬದಲಿಸುವಲ್ಲಿ ತಮ್ಮ ಪರಿಣತಿಯನ್ನು ದಾರೆ ಎರೆಯುವಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಮುಂದಾಗಬೇಕಿದೆ ಎಂದು ದಂತೆ ತಜ್ಞೆ ಡಾ. ಅಶ್ವಿನಿ ಕಾನಡೆ ಕರೆ ನೀಡಿದರು.
ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜಿನಲ್ಲಿ ವಿಶ್ವ ಪ್ರೋಸ್ಟೊಡಾಂಟಿಕ್ಸ್ ದಿನಾಚರಣೆ
Leave a comment
Leave a comment