ತುಮಕೂರು: ನಗರದ ಸರಸ್ವತಿಪುರಂನ ಶ್ರೀ ಸಿದ್ಧಾರ್ಥ ಪಿ.ಯು ಕಾಲೇಜಿನಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾರಾದ ಡಾ.ಕಿಮಾರ್ ಮಾತನಾಡಿ, ಭೂಮಿ ನಮ್ಮೇಲ್ಲರ ಏಕೈಕ ಮನೆಯಾಗಿದೆ. ಮುಂಬರುವ ಪೀಳಿಗೆಗೆ ನಾವು ಇದನ್ನು ಉಳಿಸಬೇಕಾಗಿದೆ. ಮಾಲಿನ್ಯ ಮುಕ್ತ ಮತ್ತು ಹಸಿರು ಭೂಮಿಯಿಂದ ತುಂಬಿರುವ ಜೀವನ ಶೈಲಿಯನ್ನು ರಚಿಸುವುದು ನಮ್ಮೇಲ್ಲರ ಹೊಣೆಯಾಗಿದೆ ಎಂದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಅದನ್ನು ಉಳಿಸಿ ಬೆಳೆಸುವ ಮೂಲಕ ವಿದ್ಯಾರ್ಥಿಗಳು, ನಾವುಗಳು ಸೇರಿ ಪರಿಸರದ ಕುರಿತು ಜನ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ನಂಜುAಡಪ್ಪ, ಶ್ರೀ ಸಿದ್ಧಾರ್ಥ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಜಯ ಭಾಸ್ಕರ್, ಎಲೆಕ್ಟಿçಕಲ್ ಅಂಡ್ ಎಲೆಕ್ಟಾçನಿಕ್ಸ್ ಎಂಜನಿಯರಿAಗ್ ವಿಭಾಗದ ಮುಖ್ಯಸ್ಥ ಡಾ.ಎಲ್ ಸಂಜೀವ್ ಕುಮಾರ್, ಸ್ಕೌಟ್ ಮತ್ತು ಗೈಡ್ಸ್ ಅಧಿಕಾರಿ ಎಲ್.ಶ್ರೀನಿವಾಸ್ಮೂರ್ತಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶ್ರೀ ಸಿದ್ಧಾರ್ಥ ಪಿ.ಯು ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ
Leave a comment
Leave a comment