ತುಮಕೂರು ನಗರದ ಡಯಟ್ನಲ್ಲಿ ಕೆ.ಸಿ.ರೆಡ್ಡಿ ಸರೋಜಮ್ಮ ವೆಲ್ ಫೇರ್ ಫೌಂಡೇಷನ್ ವತಿಯಿಂದ ಜಿಲ್ಲೆಯ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಆಯ್ದ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರ ಹಾಗೂ ವಿಜ್ಞಾನದ ಕಿಟ್ ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕೌಶಲ್ಯಾಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ,ಹೈಸ್ಕೂಲ್ ಮಕ್ಕಳಿಗೆ,ಅದರಲ್ಲಿಯೂ ಗ್ರಾಮೀಣ ಭಾಗದ ಮಕ್ಕಳಿಗೆ ವಿಜ್ಞಾನವೆಂಬುದು ಕಬ್ಬಿಣದ ಕಡಲೆಯಾಗಿದ್ದು,ಬಹುತೇಕ ಶಾಲೆಗಳಲ್ಲಿ ಸರಿಯಾದ ಪ್ರಯೋಗಾಲಯಗಳಿಲ್ಲ.ನುರಿತ ಶಿಕ್ಷಕರಿದ್ದರೂ ಪ್ರಯೋಗಾಲ ಯ ಮತ್ತು ಪರಿಕರಗಳ ಕೊರತೆಯಿಂದ ಪ್ರಾಯೋಗಿಕವಾಗಿ ಮಕ್ಕಳು ಅರಿಯದ ಕಾರಣ ಅನುತ್ತೀರ್ಣ, ಇಲ್ಲವೇ ಕಡಿಮೆ ಅಂಕ ಪಡೆದುಕೊಳ್ಳುವುದನ್ನು ನೋಡುತ್ತಿದ್ದೇವೆ.ಈ ತೊಂದರೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೆ.ಸಿ.ರೆಡ್ಡಿ ಸರೋಜಮ್ಮ ವೇಲ್ ಫೇರ್ ಫೌಂಡೇಷನ್ನ ಕಾರ್ಯದರ್ಶಿÀ ವಸಂತ ಕವಿತಾರೆಡ್ಡಿ ಅವರು ತಮ್ಮ ತಂದೆಯವರ ಹೆಸರಿನ ಫೌಂಡೇಷನ್ ಮೂಲಕ ಗ್ರಾಮೀಣ ಭಾಗದ ಆಯ್ಕೆ ಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಮಕ್ಕಳಿಗೆ ವಿಜ್ಞಾನ ವಿಷಯವನ್ನು ಬೋಧಿಸುವ ಕುರಿತು ಇಂತಹ ಹತ್ತಾರು ಕಾರ್ಯಾಗಾರಗಳನ್ನು ಏರ್ಪಡಿಸುತ್ತಿರುವುದು ಸಂತೋಷದ ವಿಚಾರ ಎಂದರು.
ಕೇವಲ ಕಾರ್ಯಾಗಾರಕ್ಕಷ್ಟೇ ಸಿಮೀತವಾಗದೆ ಪ್ರಯೋಗಾಲಯಕ್ಕೆ ಅಗತ್ಯವಿರುವ ಕಿಟ್ಗಳನ್ನು ಶಿಕ್ಷಕರಿಗೆ ವಿತರಿಸಿ,ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ವಿಜ್ಞಾನದ ವಿಷಯಗಳನ್ನು ತಲುಪಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.ಇAದು ಮಧುಗಿರಿ ಮತ್ತು ತುಮಕೂರು ಶೈಕ್ಷಣಿಕ ಜಿಲ್ಲೆಗಳ ತಲಾ ೨೦ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರದ ಮೂಲಕ ವಿಜ್ಞಾನ ವಿಷಯದ ಬೋಧನೆ ಕುರಿತು ವಿಷಯ ತಜ್ಞರ ಮೂಲಕ ಮಾಹಿತಿ ನೀಡಿದ್ದಾರೆ.ಇದು ಅತ್ಯಂತ ಶ್ಲಾಘನೀಯ ಕೆಲಸ.ರಾಜ್ಯದಾದ್ಯಂತ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ವಿಜ್ಞಾನದ ಭೋದನೆಗೆ ಶ್ರಮಿಸುತ್ತಿರುವ ಕೆ.ಸಿ.ರೆಡ್ಡಿ ಸರೋಜಮ್ಮ ವೆಲ್ ಫೇರ್ ಫೌಂಡೇಷನ್ ಕಾರ್ಯ ಮೆಚ್ಚುವಂತದ್ದು ಎಂದರು.
ಕೆಸಿ ರೆಡ್ಡಿ ಸರೋಜಮ್ಮ ವೆಲ್ಫೇರ್ ಫೌಂಡೇಷನ್ನ ಕಾರ್ಯದರ್ಶಿ ವಸಂತ ಕವಿತಾರೆಡ್ಡಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ನಗರದ ಶಾಲೆಗಳಲ್ಲಿ ದೊರೆಯುವಂತಹ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ರಾಜ್ಯದಾದ್ಯಂತ ಈ ಕಾರ್ಯಾಗಾರವನ್ನು ಮಾಡಲಾಗುತ್ತಿದೆ.ಎಲ್ಲಾ ನಮ್ಮ ಮಕ್ಕಳು,ಅವರಿಗೆ ದೊರೆಯುವ ಶಿಕ್ಷಣದಲ್ಲಿ ತಾರತಮ್ಯ ಇರಬಾರದು ಎಂಬ ಕಾರಣಕ್ಕೆ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ.ಈಗಾಗಲೇ ಕೋಲಾರ,ಚಿಕ್ಕ ಬಳ್ಳಾಪುರ ಜಿಲ್ಲೆಗಳಲ್ಲಿ ಕಾರ್ಯಾಗಾರ ಮುಗಿದಿದೆ. ಇಂದು ತುಮಕೂರು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಕುಟುಂಬದ ಸಣ್ಣ ಕೊಡುಗೆ.ಇದಕ್ಕೆ ಸಹಕರಿಸಿದ ಡಿಡಿಪಿಐ ಮಧುಗಿರಿ ಮತ್ತು ತುಮಕೂರು ಹಾಗೂ ಎಲ್ಲಾ ಬಿಇಓಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಈ ವೇಳೆ ಡಯಟ್ ಪ್ರಾಂಶುಪಾಲುಗಳಾದ ಮಂಜುನಾಥ್,ಗAಗಾಧರ್,ಡಯಟ್ ಉಪನ್ಯಾಸಕರಾದ ಶ್ರೀನಿವಾಸರೆಡ್ಡಿ,ಹಾಗೂ ಐವತ್ತಕ್ಕೂ ಹೆಚ್ಚು ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.