ಮಧುಗಿರಿ : ಕಛೇರಿಗೆ ಬರುವ ಅರ್ಜಿದಾರರನ್ನು ಅಲೆದಾಡಿಸದೆ ಅವರ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮಾಡಿಕೊಡಬೇಕೆಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಅಧಿಕಾರಿಗಳು ನಿಗದಿತ ಸಮಯಕ್ಕೆ ಕಛೇರಿಗಳಲ್ಲಿ ಹಾಜರಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು ಇದರಿಂದ ಇಲಾಖೆಗೆ ಗೌರವ ಬರುತ್ತದೆ. ನಿಮ್ಮ ನಡವಳಿಕೆ ಉತ್ತಮವಾಗಿದ್ದರೆ ಸಾರ್ವಜನಿಕರಲ್ಲಿ ಒಳ್ಳೆ ಭಾವನೆ ಮೂಡುತ್ತದೆ ನಾನು ಇದನ್ನೇ ನಿರೀಕ್ಷಿಸುತ್ತೇನೆ ಎಂದರು.
ಅಧಿಕಾರಿಗಳು ಗುಂಪುಗಾರಿಕೆ, ಮನಸ್ತಾಪ ಮರೆತು ಒಂದೇ ಕುಟುಂಬದವರAತೆ ಕೆಲಸಮಾಡಿ ನಿಮ್ಮ ಸಮಸ್ಯೆಗಳು ಇದಲ್ಲಿ ನನ್ನ ಗಮನಕ್ಕೆ ತನ್ನಿ ಅದನ್ನು ಪರಿಹರಿಸುವ ಜವಾಬ್ಧಾರಿ ನನ್ನದಾಗಿದೆ ಎಂದ ಅವರು, ಸ್ವಂತಕ್ಕೆ ಬಳಸಲು ಟ್ರಾಕ್ಟರ್ ಗಳಲ್ಲಿ ಮರಳು ಸಾಗಿಸುತ್ತಿದ್ದರೆ ಅವರಿಗೂ ಹಾಗೂ ಕಲ್ಲು ಚಪ್ಪಡಿ ತೆಗಿಯುವವರಿಗೂ ವಿನಾಕಾರಣ ತೊಂದರೆ ಕೊಡಬೇಡಿ ಎಂದರು.
ಮುAದಿನ ಎರಡು ಮೂರು ತಿಂಗಳುಗಳಲ್ಲಿ ಪ್ರತಿ ಗ್ರಾ.ಪಂ ಗಳ ವ್ಯಾಪ್ತಿಗಳಲ್ಲಿ ಜನ ಸಂಪರ್ಕ ಸಭೆ ನಡೆಸುತ್ತೇನೆ ಅಲ್ಲಿ ಸಮಸ್ಯೆಗಳು ಉದ್ಬವಿಸದಂತೆ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಜಾಗ್ರತೆ ವಹಿಸಬೇಕು ಎಂದರು.
ಕಛೇರಿಗೆ ಬರುವ ಅರ್ಜಿದಾರರನ್ನು ಅಲೆದಾಡಿಸದೆ ಕೆಲಸ ಮಾಡಿಕೊಡಿ KNR
Leave a comment
Leave a comment