ದಿನಾಂಕ: ೧-೬-೨೦೨೩
ರಾಷ್ಟಿçÃಯ ಮಹಿಳಾ ಕುಸ್ತಿಪಟುಗಳ ಹೋರಾಟ ಬೆಂಲಿಸಿ ಸ್ಲಂ ಸಮಿತಿಯಿಂದ ನಾಳೆ ಪ್ರತಿಭಟನೆ
ಆತ್ಮೀಯ ಮಾಧ್ಯಮ ಮಿತ್ರರಲ್ಲಿ ನಮಸ್ಕಾರ
ಸುಮಾರು ದಿನಗಳಿಂದ ನವದೆಹಲಿಯಲ್ಲಿ ರಾಷ್ಟಿçÃಯ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸುವAತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಗೆ ಕೇಂದ್ರ ಸರ್ಕಾರ ಸ್ಪಂಧಿಸದೇ ಹೋರಾಟದ ಸ್ಥಳವವನ್ನು ನಿರಾಕರಿಸುವ ಮೂಲಕ ಪ್ರಭಟನೆ ಹತ್ತಿಕ್ಕುವುದಲ್ಲದೇ, ಕುಸ್ತಿ ಪಟುಗಳ ಹೋರಾಟಕ್ಕೆ ಅಡ್ಡಿ ಮಾಡುತ್ತಿದ್ದು ಈ ಘಟನೆಯನ್ನು ಖಂಡಿಸಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಮಹಿಳಾ ಕುಸ್ತಿಪಟುಗಳ ಹೋರಾವನ್ನು ಬೆಂಬಲಿಸಿ ಸಾಂಕೇತಿಕ ಪ್ರತಿಭಟನೆಯನ್ನು ದಿನಾಂಕ:೨-೬-೨೦೨೩ ರ ಶುಕ್ರವಾರ ಬೆಳಗ್ಗೆ ೧೧ ಗಂಟೆಗೆ ನಗರದ ಟೌನ್ಹಾಲ್ ಸರ್ಕಲ್ ಮಹಾನಗರ ಪಾಲಿಕೆ ಮುಖ್ಯದ್ವಾರದ ಬಳಿ ಹಮ್ಮಿಕೊಂಡಿದ್ದು ತುಮಕೂರು ಸಮಾನ ಮನಸ್ಕರು ಹಾಗೂ ಸಾರ್ವಜನಿಕರು ಬಂದು ಬಾಗವಹಿಸಿ ಹೋರಾವನ್ನು ಯಶಸ್ವಿಗೊಳಿಸಬೇಕು ಹಾಗೂ ಮಾಧ್ಯಮ ಮಿತ್ರರು, ಪತ್ರಿಕಾ ವರದಿಗಾರರು, ಪ್ರಿಂಟ್ಮೀಡಿಯ ವರದಿಗಾರರು, ಛಾಯಚಿತ್ರಕರು ಪ್ರತಿಭಟನೆಗೆ ಆಗಮಿಸಿ ಹೋರಾಟ ನಿರತ ಮಹಿಳಾ ಕುಸ್ತಿಪಟುಗಳಿಗೆ ನೈತಿಕ ಬೆಂಬಲ ಸೂಚಿಸಬೇಕೆಂದು ತಮ್ಮಲ್ಲಿ ಕೋರುತ್ತೇವೆ,
ಈ ಪ್ರತಿಭಟನೆಯಲ್ಲಿ ತುಮಕೂರು ನಗರವಾರು ಸ್ಲಂ ಶಾಖಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದಾರೆ