ವಕೀಲರ ಅಭ್ಯುದಯಕ್ಕಾಗಿ ಶ್ರಮಿಸುವೆ-ನೂತನ ಅಧ್ಯಕ್ಷ ಹೆಚ್.ಕೆಂಪರಾಜಯ್ಯ
ತುಮಕೂರು ಜಿಲ್ಲಾ ವಕೀಲರ ಸಂಘವನ್ನು ರಾಜ್ಯದಲ್ಲಿ ಮಾದರಿ ಸಂಘವಾಗಿ ನಿರ್ಮಿಸುವ ಹೊಣೆ ನಮ್ಮೆಲ್ಲರದ್ದು
ತುಮಕೂರು:ತುಮಕೂರು ಜಿಲ್ಲಾ ವಕೀಲರ ಸಂಘದಲ್ಲಿ ಹಲವಾರು ಸಮಸ್ಯೆಗಳಿದ್ದು ಅವುಗಳನ್ನು ಆದ್ಯತೆಯ ಮೇರೆಗೆ ಒಂದೊAದನ್ನೇ ಬಗೆಹರಿಸುವೆ,ವಕೀಲರ ವಾಹನಗಳ ಪಾರ್ಕಿಂಗ್,ಕಕ್ಷಿದಾರರ ವಾಹನಗಳ ಪಾರ್ಕಿಂಗ್,ಕ್ಯಾAಟೀನ್,ನೂತನ ೩ನೇ ಮಹಡಿ ಕಟ್ಟಡ ನಿರ್ಮಾಣ ಹೀಗೆ ಹಲವಾರು ಸಮಸ್ಯೆಗಳನ್ನು ೨೦೨೩-೨೫ರ ಸಾಲಿನಲ್ಲಿ ನಾನು ಶಕ್ತಿ ಮೀರಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಹೊಣೆ ನನ್ನದು ಎಂದು ತುಮಕೂರು ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯನವರು ತಿಳಿಸಿದರು.
ಅವರು ಇಂದು ಸಂಘದ ಸಭಾಂಗಣದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ದೊಡ್ಡಮನೆ ಗೋಪಾಲಗೌಡ ರವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಯುವ ವಕೀಲರಿಗೆ ಕಚೇರಿಗಳ ಕೊರತೆ ಕಂಡು ಬರುತ್ತಿದೆ ಅದನ್ನು ಸಹ ಬಗೆಹರಿಸಬೇಕು,ಯಾವುದೇ ವಕೀಲರು ಮರಣ ಹೊಂದಿದ ಸಂದರ್ಭದಲ್ಲಿ ತಕ್ಷಣವೇ ಅವರಿಗೆ ೨ ಲಕ್ಷ ಹಣವನ್ನು ನೀಡುವ ಯೋಜನೆ ನಮ್ಮ ಮುಂದಿದೆ,ಅಕಸ್ಮಾತ್ ಅಪಘಾತವಾದರೆ ತಕ್ಷಣವೇ ಕನಿಷ್ಠ ೫೦ ಸಾವಿರ ನೀಡುವುದು, ಹಲವು ಕಾನೂನು ತಜ್ಞರು ಮತ್ತು ವಿಷಯ ಪರಿಣತಿ ಪಡೆದ ಹಿರಿಯ ವಕೀಲರನ್ನು ಕರೆಸಿ ವಕೀಲರಿಗೆ ಸೆಮಿನಾರ್ ನಡೆಸುವುದು,ಹೀಗೆ ಹತ್ತಾರು ಕನಸುಗಳು ನನ್ನ ಮುಂದಿದ್ದು ಅವುಗಳ ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯಗತಗೊಳಿಸುವೆ ಎಂದು ತಿಳಿಸಿದರು.
ವೇದಿಕೆಯಲ್ಲಿ ನೂತನ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರಾದ ಶಿವಶಂಕರಯ್ಯ,ಪ್ರಧಾನ ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿ,ಜಂಟಿ ಕಾರ್ಯದರ್ಶಿ ಸಿ.ಪಾಲಾಕ್ಷಯ್ಯ,ಖಜಾಂಚಿ ಕೆ.ಎಲ್.ಭಾರತಿ,ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಎಂ.ಬಿ.ಗುರುಪ್ರಸಾದ್,ಟಿ.ಎಸ್.ಜನಾರ್ಧನ್,ಎA.ಬಿ.ನವೀನ್ ಕುಮಾರ್, ಎಸ್.ಮೋಹನ್,ಶಿವಕುಮಾರಸ್ವಾಮಿ,ಪಿ.ಎಸ್.ಸಂದೀಪ್, ದೊಡ್ಡಮನೆ ಗೋಪಾಲಗೌಡ, ಡಿ.ಸಿ.ಹಿಮಾನಂದ್ ಕೆ.ಸಿ.ವೆಂಕಟೇಶ್.ಸಿ.ಸುರೇಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಸಿದ್ಧರಾಜು ಪ್ರಾರ್ಥಿಸಿ,ಡಿ.ಸಿ.ಹಿಮಾನಂದ್ ನಿರೂಪಿಸಿ,ಸಿ.ಸುರೇಶ್ ಕುಮಾರ್ ಸ್ವಾಗತಿಸಿ,ಕೆ.ಸಿ.ವೆಂಕಟೇಶ್ ವಂದಿಸಿದರು.