ತುಮಕೂರು(ಕ.ವಾ.)ಸೆ.೨೬: “ವನ್ಯಜೀವಿ ಸಪ್ತಾಹ-೨೦೨೩”ರ ಅಂಗವಾಗಿ ಜಿಲ್ಲೆಯ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಅರಣ್ಯ ಪರಿಸರ ಹಾಗೂ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ತುಮಕೂರು ವಿಶ್ವವಿದ್ಯಾಲಯದ ಡಾ|| ಪಿ. ಸದಾನಂದ ಮಯ್ಯ ಬ್ಲಾಕ್ನಲ್ಲಿಂದು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ಆಗಮಿಸಿದ್ದ ೧೪೩ ಶಾಲಾ ಶಿಕ್ಷಕರು ಕಾರ್ಯಾಗಾರದಲ್ಲಿ ಹಾಜರಾಗಿದ್ದರು. ಕಾರ್ಯಾಗಾರದಲ್ಲಿ ತುಮಕೂರಿನ ಅರಣ್ಯ, ಪಕ್ಷಿಗಳು, ಚಿಟ್ಟೆ ಹಾಗೂ ಹಾವುಗಳ ವೈವಿಧ್ಯತೆ ಮತ್ತು ಅವುಗಳನ್ನು ಗುರುತಿಸುವ ಬಗ್ಗೆ ಮಾಹಿತಿ ನೀಡಲಾಯಿತು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸಕ ಗುಂಡಪ್ಪ, ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಮರುಳಯ್ಯ, Wಇಖಔಂಖ ಸಂಸ್ಥೆಯ ವಿಪಿನ್ ರಾವ್, ಮಲ್ಲಿಕಾರ್ಜುನ್, ಹೆಚ್.ಎಸ್. ನಿರಂಜನ್ ಮತ್ತಿರರು ಭಾಗವಹಿಸಿದ್ದರು.
ಕಾರ್ಯಾಗಾರದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ.ಹೆಚ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು.ವಿ ಅರಣ್ಯ ಸಿಬ್ಬಂದಿವರ್ಗದವರು ಹಾಜರಿದ್ದರು. ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ಶಾಲಾ ಶಿಕ್ಷಕರುಗಳಿಗೆ ಅರಣ್ಯ ಇಲಾಖಾವತಿಯಿಂದ ಪ್ರಶಂಸಾ ಪತ್ರ ನೀಡಲಾಯಿತು.
ವನ್ಯಜೀವಿ ಸಪ್ತಾಹ: ಶಿಕ್ಷಕರಿಗೆ ಅರಿವು ಕಾರ್ಯಾಗಾರ

Leave a comment
Leave a comment