ಇಂದು ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆಯಿAದ 2024-25ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಸ್ಲಂ ನಿವಾಸಿಗಳ ಅಭಿವೃದ್ಧಿಗೆ 30 ಕೋಟಿ ನೀಡಿರುವುದು ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿಲ್ಲ, ಈ ಬಗ್ಗೆ ಬಜೆಟ್ ಬಾಷಣದಲ್ಲಿ ಪ್ರಸ್ತಾಪಿಸಿ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಡಲು ಸರ್ಕಾರವನ್ನು ಒತ್ತಾಯಿಸಬೇಕೆಂದು ಶ್ರೀ ಪ್ರಸಾದ್ ಅಬ್ಬಯ್ಯ ಅಧ್ಯಕ್ಷರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಆಯುಕ್ತರು ಮುಖ್ಯ ಇಂಜಿನಿಯರ್ ರವರಿಗೆ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಖಾಸಗೀ ಸ್ಲಂಗಳ ಘೋಷಣೆಗೆ ತೊಡಕಾಗಿರುವ ಸುತ್ತೋಲೆಯನ್ನು ಹಿಂಪಡೆಯಲು ಮಂಡಳಿಯ ಇಂದಿನ ಸಭೆಯಲ್ಲಿ ಪ್ರಸ್ತಾವನೆಯನ್ನು ವಸತಿ ಇಲಾಖೆ ಮತ್ತು ಹಣಕಾಸು ಇಲಾಖೆಗೆ ಸಲ್ಲಿಸಲು ಆಗ್ರಹಿಸಲಾಯಿತು. ಸಂಚಾಲಕರಾದ ಎ.ನರಸಿಂಹಮೂರ್ತಿ, ಚಂದ್ರಮ್ಮ, ಬೆಂಗಳೂರು ನಗರ ಸಮಿತಿಯ ಪದಾಧಿಕಾರಿಗಳಾದ ಪರ್ವೀನ್ತಾಜ್, ವೆಳ್ಳಿಯಮ್ಮ, ರಾಜೇಶ್ವರಿ, ಶಕುಂತಲಾ, ಸಂಘಟನಾ ಸಂಚಾಲಕರಾದ ಮಂಜುಬಾಯಿ, ರೇಖಾ ಕಂಬಳಿ, ಆಂಜನೇಯ್ಯ, ರಾಮಕೃಷ್ಣಯ್ಯ,ಹಣಮಂತ ಮತ್ತು ತೇಜಸ್ ಕುಮಾರ್ ಉಪಸ್ಥಿತರಿದ್ದರು.
ಮನವಿಗೆ ಪ್ರತಿಕ್ರಿಯಿಸಿದ ಸ್ಲಂ ಬೋರ್ಡ್ ಅಧ್ಯಕ್ಷರು ನಮ್ಮ ಸರ್ಕಾರ ಬಡಜನರ ಮತ್ತು ಸ್ಲಂ ಜನರ ಪರವಾಗಿ ಬದ್ಧತೆ ಹೊಂದಿದೆ ಈ ಸಾಲಿನ ಬಜೆಟ್ ನಲ್ಲಿ 30 ಕೋಟಿ ರೂಪಾಯಿ ನೀಡಿರುವುದು ಸಮಂಜಸವಲ್ಲ ಈ ಬಗ್ಗೆ ಬಜೆಟ್ ಬಾಷಣದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದು 2800 ಕೊಳಚೆ ಪ್ರದೇಶಗಳಲ್ಲಿ 1 ಕೋಟಿ ಜನಸಂಖ್ಯೆಗೆ 500 ಕೋಟಿ ಹಣ ನೀಡುವಂತೆ ಒತ್ತಾಯಿಸುತ್ತೇನೆ. ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾಯಿದೆಗೆ ಮರುಜೀವ ನೀಡಿ ಪ್ರಸ್ತುತ ವಾತವರಣಕ್ಕೆ ಪೂರಕವಾಗಿ ಕಾಯಿದೆ ರೂಪಿಸಲಾಗುವುದು, ಖಾಸಗಿ ಕೊಳಚೆ ಪ್ರದೇಶಗಳ ಘೋಷಣೆಗೆ ತೊಡಕಾಗಿರುವ ಸುತ್ತೋಲೆಯಿಂದ ದೂರದ ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳ ಜನರು ಬೆಂಗಳೂರಿನವರೆಗೂ ಬರಲು ಸಾಧ್ಯವಿಲ್ಲ ಇಂದಿನ ಮಂಡಳಿ ಸಭೆಯಲ್ಲೆ ಹಿಂಪಡೆಯಲು ಅನುಮೋದನೆ ನೀಡಿ ಪ್ರಸ್ತಾವನೆ ಸಲ್ಲಿಸಲಾಗುವುದು ಸ್ಲಂಗಳಲ್ಲಿರುವ ಸಮಸ್ಯೆಗಳನ್ನು ಆಲಿಸಲು ರಾಜ್ಯಾದ್ಯಂತ ಕೊಳಚೆ ಪ್ರದೇಶಗಳ ಭೇಟಿಗೆ ಪ್ರವಾಸ ಕೈಗೊಳ್ಳಲಾಗುವುದು ಎಂದರು