ತುಮಕೂರು: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ವಿದೇಶಗಳಲ್ಲಿ ಪೂಜ್ಯ ಭಾವನೆಯಿಂದ ಕಾಣುತ್ತಿದ್ದು ನಮ್ಮ ದೇಶದಲ್ಲಿ ಅವರು ತಂದ ಕಾನೂನುಗಳನ್ನ ಇತ್ತೀಚೆಗೆ ಬರುವ ಸರ್ಕಾರಗಳು ಗಾಳೀಗೆ ತೋರುತ್ತಾ ಬಂದಿದ್ದು ದಲಿತರು ಮತ್ತು ಅಸ್ಪೃಶ್ಯರನ್ನ ಕಡೆಗಣಿನಿಂದ ನೋಡುತ್ತಿದ್ದು ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಅಂಬೇಡ್ಕರ್ ಅವರ ಪುತ್ತಳಿ ಸ್ಥಾಪನೆ ವಿಚಾರ ಸುಮಾರು ವರ್ಷಗಳಿಂದ ಚರ್ಚೆಯಲ್ಲಿದ್ದು ಇವರಿಗೂ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪುತ್ತಳಿ ಸ್ಥಾಪನೆಗೆ ಮನ್ನಣೆ ನೀಡುತ್ತಿಲ್ಲ ಈಗಾಗಿ ಪುತ್ಥಳಿ ಸ್ಥಾಪಿಸಲು ಅಂಬೇಡ್ಕರ್ ಸೇನೆ ಹಣ ನೀಡಲು ಮುಂದಾಗಿದೆ ಜಿಲ್ಲಾಧಿಕಾರಿಗಳೇ ಸೂಕ್ತ ಸ್ಥಳ ನೀಡಿ ಎಂದು ಅಂಬೇಡ್ಕರ್ ಸೇನೆ ನೂತನ ಜಿಲ್ಲಾಧ್ಯಕ್ಷ ಕೋರಾ ರಾಜಣ್ಣ ಅವರು ತಿಳಿಸಿದರು.