ತುಮಕೂರು :ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದರ ವಿರುದ್ಧತುಮಕೂರು ನಗರದಇಂದು ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ವಿಜಯಕರ್ನಾಟಕರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ಈಗಾಗಲೇ ಕರ್ನಾಟಕರಾಜ್ಯವು ಮಳೆ ಇಲ್ಲದೆ ಬರಗಾಲ ಸಂಭವಿಸಿದ್ದು, ರೈತರುತಾವು ಬೆಳೆದ ಬೆಳಗಳಿಗಾಗಿ ಮಳೆ ಇಲ್ಲದೇ ಪರದಾಡುತ್ತಿರುವ ಪರಿಸ್ಥಿತಿ ನೋಡುತ್ತಿದ್ದೇವೆ, ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ಸಹ ನಮ್ಮರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿದೆ, ಇದನ್ನು ನಾವು ಖಂಡಿಸುತ್ತೇವೆAದು ಹೇಳಿ ಪ್ರತಿಭಟನೆಯನ್ನು ಮಾಡಿದರು.
ಬೆಂಗಳೂರು ಸೇರಿದಂತೆಕಾವೇರಿ ನದಿ ಭಾಗದ ಸುತ್ತಮುತ್ತಲಿನ ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆತೀವ್ರಇದ್ದು, ಇಂತಹ ಪರಿಸ್ಥಿತಿಯಲ್ಲಿ ನಮ್ಮಕರ್ನಾಟಕ ಸರ್ಕಾರ ತಮಿಳುನಾಡಿಗೆ ಯಾವುದೇಕಾರಣಕ್ಕೂಕಾವೇರಿ ನೀರನ್ನುಇನ್ಮುಂದೆ ಬಿಡಬಾರದು, ನಮಗೆ ಇಲ್ಲಿ ವ್ಯವಸಾಯ ಮಾಡಲು, ಕುಡಿಯಲು ನೀರುಇಲ್ಲಆದರೂ ತಮಿಳುನಾಡಿಗೆ ನೀರನ್ನು ಬಿಡುತ್ತಿದ್ದುಇಂದುಖAಡನೀಯಎAದರಲ್ಲದೇ, ಎಸ್.ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ನಮ್ಮರಾಜ್ಯದಲ್ಲಿದ್ದ ಬರ ಪರಿಸ್ಥಿತಿಯನ್ನು ಅವಲೋಕಿಸಿ ನ್ಯಾಯಾಲಯದತೀರ್ಪಿಗೆಎದೆಗುಂದದೆಒAದು ಹನಿ ನೀರನ್ನೂ ತಮಿಳುನಾಡಿಗೆ ಬಿಡದೇರಾಜ್ಯದಜನರ ಹಿತವನ್ನುಕಾಪಾಡುವಲ್ಲಿ ಯಶಸ್ವಿಯಾದಂತಹ ಧೀಮಂತ ನಾಯಕರುಎಂದರು.
ನಮ್ಮಲ್ಲಿ ನೀರುಯಥೇಚ್ಛವಾಗಿಇದ್ದರೆ ತಮಿಳುನಾಡಿಗೆ ನೀರನ್ನು ಹರಿಸಿ ಅದರಲ್ಲಿ ನಮ್ಮದುಯಾವುದೇರೀತಿಯಾದತಕರಾರುಇಲ್ಲ, ಆದರೆ ನಮಗೆ ಇಲ್ಲಿಕುಡಿಯಲು ನೀರೇಇಲ್ಲ, ಆದರೂ ನೀವು ತಮಿಳುನಾಡಿಗೆ ನೀರು ಹರಿಸುತ್ತಿರುವುದು ಎಷ್ಟು ಮಾತ್ರ ಸರಿಎಂದು ಪ್ರಶ್ನಿಸಿದರು. ಇನ್ನು ಈ ಕುರಿತು ನಮ್ಮಕರ್ನಾಟಕ ಸರ್ಕಾರಸುಪ್ರೀಂಕೋರ್ಟ್ಗೆರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದನ್ನುತಕ್ಷಣವೇ ನಿಲ್ಲಿಸಬೇಕೆಂದುಒತ್ತಾಯಿಸುವAತೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.
ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದೇಆದಲ್ಲಿ ನಮ್ಮ ವೇದಿಕೆ ವತಿಯಿಂದರಾಜ್ಯ ವ್ಯಾಪಿ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಹೇಳಿದರು. ಪ್ರತಿಭನೆಯಲ್ಲಿರಾಜ್ಯರೈತಘಟಕದ ಸಂಚಾಲಕರು ಕೆ.ಶಿವಕುಮಾರ್ (ಬಂಡೆಕುಮಾರ್), ವಿಜಯಕರ್ನಾಟಕರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದಎಸ್.ಪಿ.ಮಹೇಶ್ಕುಮಾರ್, ಜಿಲ್ಲಾಧ್ಯಕ್ಷರಾದಎಲ್.ಮಂಜುನಾಥ್, ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಸಂಘಟನೆಯಅಪಾರಕಾರ್ಯಕರ್ತರು ಭಾಗವಹಿಸಿದ್ದರು.