ಶೈಕ್ಷಣಿಕ ಹಾಗೂ ಪರಿಸರ ಅಭಿವೃದ್ಧಿ ಸಂಘದಿAದ ಬಡ್ಡಿಹಳ್ಳಿ ಸರ್ಕಾರಿ ಶಾಲೆಯಲ್ಲಿ ೬ಲಕ್ಷ ವೆಚ್ಚದಲ್ಲಿ ೬ ಶೌಚಾಲಯ ಉದ್ಘಾಟನೆ
ತುಮಕೂರು: ನಗರದ ಶೈಕ್ಷಣಿಕ ಹಾಗೂ ಪರಿಸರ ಅಭಿವೃದ್ಧಿ ಸಂಘ (ರಿ). ದಿಂದ ಡಾ||ರಕ್ಷಿತ್ ರವರ ತಂದೆ , ತಾಯಿಯ ಸೇವಾರ್ಥ ಸಾಮಾಜಿಕ ಅಡಿಯಲ್ಲಿ ೬ ಲಕ್ಷಗಳ ವೆಚ್ಚದಲ್ಲಿ ತುಮಕೂರು ನಗರದ ಬಡ್ಡಿಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ಅನುಕೂಲವಾಗಲು ನಿರ್ಮಿಸಲಾಗಿದ್ದ ಸುಸಜ್ಜಿತ ಶೌಚಾಲಯಗಳನ್ನು ( ಬಾಲಕಿಯರ ೩ , ಬಾಲಕರ ೫ , ಸಿಬ್ಬಂದಿಗಳ ೧) ಹಾಗೂ ಎರಡು ಹೆಚ್ಚುವರಿ ಕೊಠಡಿಗಳನ್ನು ಮತ್ತು ನೀರು ಸೌಲಭ್ಯದ ವ್ಯವಸ್ಥೆಗಳನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಮಾಜಿಕ ಶೈಕ್ಷಣಿಕ ಹಾಗೂ ಪರಿಸರ ಅಭಿವೃದ್ಧಿ ಸಂಘ (ರಿ)ನ ಅಧ್ಯಕ್ಷರಾದ ಪುಟ್ಟರಂಗಯ್ಯರವರು,ಖಜಾAಚಿಗಳಾದ ಶ್ರೀಮತಿ ಅಂಬಿಕಮ್ಮ.ಸಿ.ಎನ್.ರವರು,ಡಿಡಿಪಿಐ ಶ್ರೀ ರಂಗಧಾಮಯ್ಯರವರು,ವಾರ್ಡ್ ೩೨ ರ ಪಾಲಿಕೆಯ ಸದಸ್ಯರು, ಮಾಜಿ ಮಹಾಪೌರರಾದ ಶ್ರೀ.ಬಿ.ಜಿ.ಕೃಷ್ಣಪ್ಪ, ಡಾ||ರಕ್ಷಿತ್ ರವರು , ಸರ್ಕಾರಿ ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರು, ಶ್ರೀ ಮರಿಬಸಪ್ಪ ರವರು, ಶಿಕ್ಷಣ ಇಲಾಖೆಯ ಶ್ರೀಮಹೇಶ್ ರವರು , ಶೀಲಾ ರವರು , ಮುಖ್ಯೋಪಾಧ್ಯಾಯರಾದ ಶ್ರೀ ದಾಕ್ಷಾಯಿಣಿ ರವರು ,ಟ್ರಸ್ಟ್ ನ ಹಿತೈಷಿಗಳಾದ ವೆಂಕಟಾಚಲಯ್ಯ ರವರು, ಇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಪತ್ರಕರ್ತರೊಂದಿಗೆ ಮಾತನಾಡಿದ ಟ್ರಸ್ಟ್ ನ ಮುಖ್ಯಸ್ಥರಾದ ಡಾ||ರಕ್ಷಿತ್.ಎನ್.ಪಿ. ರವರು ಸಮಾಜಕ್ಕಾಗಿ ನಾವು ಏನಾದರೂ ಮಾಡಬೇಕು,ಸಮಾಜ ಇಂದು ನಮಗೆ ಎಲ್ಲವನ್ನೂ ನೀಡಿದೆ ಹಾಗಾಗಿ ಸರ್ಕಾರಿ ಶಾಲೆಗೆ ನಾವು ೬ ಲಕ್ಷ ವೆಚ್ಚದಲ್ಲಿ ೬ ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಿ ಮಕ್ಕಳಿಗೆ ನೀಡಿದ್ದೇವೆ ಇವೆಲ್ಲ ನಮಗೆ ತೃಪ್ತಿ ತಂದಿದೆ,ಇAದು ನಾವು ಆರೋಗ್ಯ ಮತ್ತು ಶಿಕ್ಷಣವನ್ನು ನೀಡಿದರೆ ಸಮಾಜ ಅಭಿವೃದ್ಧಿ ಹೊಂದುತ್ತದೆ,ರಾಷ್ಟçಕ್ಕೆ ನಾವು ಕೊಡುವ ಅಲ್ಪ ಕಾಣಿಕೆ ಇದು,ನಾವು ಹಲವಾರು ವರ್ಷದಿಂದ ನಮ್ಮ ಟ್ರಸ್ಟ್ ನಿಂದ ಉದ್ಯಾನವನಗಳು,ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದೇವೆ,ಮುಂದೆಯೂ ಸಹ ನಮ್ಮ ಟ್ರಸ್ಟ್ ವತಿಯಿಂದ ನಮ್ಮ ತಂದೆ-ತಾಯಿಯವರ ಹೆಸರಿನಲ್ಲಿ ಸಮಾಜಸೇವೆ ಮುಂದುವರೆಸುವುದಾಗಿ ತಿಳಿಸಿದರು