ಕೆರೆ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಸಹಕಾರ ಮುಖ್ಯ-ಶ್ರೀಮತಿ ಸುನಿತಾಪ್ರಭು
ತುಮಕೂರು:ಅಶಕ್ತರಿಗೆ ವಾಟರ್ ಬೆಡ್ ನೀಡುತ್ತಿದ್ದೇವೆ,ವೃದ್ಧರಿಗೆ ಪ್ರತಿ ತಿಂಗಳು ಮಾಸಾಶನ ನೀಡುತ್ತಿದ್ದೇವೆ,ಸಾಲಕ್ಕೆ ವಿಮೆ ಮಾಡಿಸಲಾಗುತ್ತಿದೆ ಏಕೆಂದರೆ ಸಾಲ ಪಡೆದ ವ್ಯಕ್ತಿ ಅಕಸ್ಮಾತ್ ಆಗಿ ನಿಧನ ಹೊಂದಿದರೆ ವಿಮಾ ಕಂಪೆನಿ ಸಾಲದ ಮೊತ್ತವನ್ನು ಪಾವತಿಸುತ್ತದೆ,ಸರ್ಕಾರದಿಂದ ಸಹಾಯಧನ ಸಹ ಸಿಗಲಿದೆ ಅದಕ್ಕಾಗಿ ಯೋಜನೆಯನ್ನು ರೂಪಿಸಲಾಗಿದೆ,ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ,ಸಂಘದ ಪ್ರತಿ ಸದಸ್ಯರಿಗೆ ೫ಲಕ್ಷ ಮೊತ್ತದ ಸಾಲವನ್ನು ಕೇವಲ ಒಂದು ವಾರದಲ್ಲಿ ಮಂಜೂರು ಮಾಡಿ ಸಹಾಯಹಸ್ತ ನೀಡಲಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ತಾಲ್ಲೋಕು ಯೋಜನಾಧಿಕಾರಿ ಶ್ರೀಮತಿ ಸುನಿತಾಪ್ರಭುರವರು ತಿಳಿಸಿದರು.
ಅವರು ಇಂದು ತಾಲ್ಲೋಕಿನ ಕಸಬಾ ಗ್ರಾಮದ ಮಲ್ಲಪ್ಪನ ಕರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಕೆರೆ ಹಸ್ತಾಂತರಿಸಿ ಮಾತನಾಡಿದರು.
ಮಲ್ಲಪ್ಪನ ಕೆರೆಯನ್ನು ನಮ್ಮ ಸಂಘದಿAದ ಪೂಜ್ಯ ಡಾ||ವೀರೇಂದ್ರಹೆಗ್ಗಡೆರವರು ಸುಮಾರು ೯.೫೨ಲಕ್ಷ ಮತ್ತು ಗ್ರಾಮಸ್ಥರು ೭.೫೬ಲಕ್ಷ ಹಣವನ್ನು ವಿನಿಯೋಗಿಸಿ ಅಭಿವೃದ್ಧಿಪಡಿಸಲಾಗಿದೆ,ಕಡಿಮೆ ಅವಧಿಯಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ,ಕೆರೆಯ ಮಣ್ಣು ತೆಗೆದು ಅಭಿವೃದ್ಧಿಪಡಿಸಲಾಗಿದೆ,ಕೆರೆ ಜವಾಬ್ದಾರಿ ಎಲ್ಲ ನಾಗರೀಕರದ್ದು,ಗ್ರಾಮಾಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ,ಕೆರೆ ನಿರ್ವಹಣೆಯನ್ನು ಎಲ್ಲರೂ ಜವಾಬ್ದಾರಿಯಿಂದ ನಿರ್ವಹಿಸಿ ಎಂದು ಕರೆ ನೀಡಿದರು.
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಶ್ರೀ ಗಂಗಾಧರಸ್ವಾಮೀಜಿರವರು ತುಮಕೂರು ತಾಲ್ಲೋಕಿನಲ್ಲಿ ಇಂದು ೮ನೇ ಕೆರೆ ಅಭಿವೃದ್ಧಿಪಡಿಸಿ ಲೋಕಾರ್ಪಣೆಗೊಳಿಸಲಾಗಿದೆ,ಕೆರೆ ಅಭಿವೃದ್ಧಿಯಿಂದ ರೈತರ ಬದುಕು ಅಸನಾಗಲಿದೆ,ಅಂತರ್ಜಲ ಬಹಳ ಮುಖ್ಯ,ಜಿಡಿಪಿ ಏರಿಕೆಯಲ್ಲಿ ಸಹ ನೀರಿನ ಕೊಡುಗೆ ಅಪಾರ,ಪ್ರತಿ ಹಳ್ಳಿಗೊಂದು ಕರೆ ಇದ್ದರೆ ಹೈನುಗಾರಿಕೆಗೆ,ಮೀನುಗಾರಿಕೆಗೆ,ಕೃಷಿ ಉತ್ಪನ್ನ ಬೆಳೆಯಲು ಸಹಾಯವಾಗಲಿದೆ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಇಂದು ಉತ್ತಮ ಕೆಲಸ ಮಾಡುತ್ತಿದೆ, ಕೆರೆ ಅಭಿವೃದ್ಧಿ ಜೊತೆಗೆ ಹಲವು ಸಾಮಾಜಿಕ,ಆರ್ಥಿಕ ಚಟುವಟಿಕೆಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದೆ,ಡಾ||ವಿರೇಂದ್ರಹೆಗ್ಗಡೆರವರು ಜನಸೇವೆಯೇ ಜನಾರ್ಧನ ಸೇವೆ ಎಂದು ತಿಳಿದು ಕೆಲಸ ನಿರ್ವಹಿಸುತ್ತಿರುವುದು ಸಂತೋಷದ ವಿಚಾರ ಎಂದು ಹೇಳಿದರು.
ವೇದಿಕೆಯಲ್ಲಿ ಪಿಡಿಓ ದೇವಿಕಾ,ಮಹದೇವಪ್ಪ,ಕೆರೆ ಅಭಿಯಂತರಾದ ಅರುಣ್,ಗ್ರಾ.ಪಂ.ಅಧ್ಯಕ್ಷರಾದ ಸಿದ್ಧಗಂಗಮ್ಮ,ಅAಬರೀಶ್,ಶೇಷಕುಮಾರ್,ರತ್ನಮ್ಮ,ಮಹದೇವಯ್ಯ,ಹೇಮಕಿರಣ್,ವಿಶಾಲಮ್ಮ,ಮೇಲ್ವಿಚಾರಕರಾದ ಹೇಮಂತ್ ಕುಮಾರ್,ಕೃಷಿ ಅಧಿಕಾರಿ ಅನುಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಅಶಕ್ತರಿಗೆ ವಾಟರ್ ಬೆಡ್ ನೀಡುತ್ತಿದ್ದೇವೆ
Leave a comment
Leave a comment